ಸಿಂದಗಿ: ರೈತನ ಮುಖದ ಮೇಲಿನ ನಗು ಅಳಿಸಿ ಕಣ್ಣೀರು ಹಾಕಿಸುತ್ತಿರುವ ಮಳೆರಾಯ. ಮುಂಗಾರು ಶುರುವಾಗಿ ಬಿತ್ತನೆ ಮಾಡಿದ ನಂತರ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗಿ ರೈತರ ಕಂಗಾಲಾಗುತ್ತಿದ್ದಾರೆ. ಇದನ್ನು ಗಮನಿಸಿ ರೈತರ ಉಳಿವಿಗಾಗಿ ಮೋರಟಗಿ ಗ್ರಾಮದ ಹತ್ತಿರದ ಹಂಚಿನಾಳ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಪರಮ ಭಕ್ತ ಭೂತಾಳಿಸಿದ್ದ ವಡೆಯರ ೧೧ ದಿನಗಳ ಕಾಲ ಉಪವಾಸ ಅನುಷ್ಠಾನಕ್ಕೆ ಕುಳಿತಿದ್ದಾರೆ.
ಇವರು ಸೋಮವಾರದಿಂದ ಉಪವಾಸ ಕುಳಿತಿದ್ದು ಇಂದಿಗೆ ಐದು ದಿನಗಳು ಕಳೆದಿವೆ. ಶ್ರೀಗುರು ಸೋಮಲಿಂಗ, ಶ್ರೀ ಅಮೋಘಸಿದ್ಧ, ಶ್ರೀ ಶಾರಸಿದ್ದೇಶ್ವರ,ಶ್ರೀ ಗುರುಸಿದ್ದೇಶ್ವರ, ಶ್ರೀ ಭೂತಾಳಿಸಿದ್ದೇಶ್ವರ ಐದು ದೇವರುಗಳ ಮೇಲೆ ಹರಕೆ ಹೊತ್ತು ೧೧ ದಿನಗಳ ಯಾವುದೇ ರೀತಿಯ ಆಹಾರ ಸೇವನೆ ಮಾಡದೇ ಕೇವಲ ನೀರಿನ ಮೇಲೆ ಉಪವಾಸ ಮಾಡುತಿದ್ದೇನೆ. ಮಳೆ ಖಂಡಿತ ಬರುತ್ತೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ಮಾತನಾಡದೆ ಬಂದಂತ ಭಕ್ತರಿಗೆ ಬಿಳಿ ಹಾಳೆಯ ಮೇಲೆ ಬರೆಯುವ ಮೂಲಕ ಸಂದೇಶ ತಿಳಿಸುತಿದ್ದಾರೆ.
ಹಂಚಿನಾಳ ಗ್ರಾಮದಲ್ಲಿ ಮಳೆಗಾಗಿ ಅನುಷ್ಠಾನ ಕುಳಿತಿರುವ ಸುದ್ದಿ ಕೇಳುತ್ತಿದ್ದಂತೆ ಸುತ್ತಲಿನ ೩೦-೪೦ ಹಳ್ಳಿಗಳ ಪ್ರಗತಿಪರ ರೈತರು ಭೂತಾಳಿಸಿದ್ದರ ಭೇಟಿಗೆ ಆಗಮಿಸುತ್ತಿದ್ದಾರೆ. ಬರುವ ಭಕ್ತರು ಹಣ್ಣು-ಹಂಪಲ ತಂದರೂ ಕೂಡಾ ತಿರಸ್ಕರಿಸಿ ಪ್ರಾಣ ಹೋದರೂ ಕೂಡಾ ೧೧ ದಿನಗಳ ಕಾಲ ಏನನ್ನೂ ತಿನ್ನುವುದಿಲ್ಲ ಎಂದು ತಿರಸ್ಕರಿಸಿ ಬರವಣಿಗೆಯ ಮೂಲಕ ಹೇಳಿ ಕಳಿಸುತ್ತಿದ್ದಾರೆ.
Related Posts
Add A Comment