Author: editor.udayarashmi@gmail.com

ವಿಜಯಪುರ: ವಿಶ್ವಾಸದಿಂದ ಜನಸೇವೆ ಮಾಡಿದರೆ ಎಲ್ಲರು ನಮ್ಮ ಕಾಯಕವನ್ನು ಗುರುತಿಸಿ ಗೌರವಿಸುತ್ತಾರೆ ಎಂದು ಮಾಜಿ ಸಚಿವ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ನಗರದಲ್ಲಿ ನಡೆದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.ಈಗಾಗಲೇ ನನಗೆ ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರಕಿದ್ದು, ಇದು ನಾಲ್ಕನೇಯ ಗೌರವವಾಗಿದೆ. ಇದಕ್ಕೆಲ ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾರಣ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿಷ್ಠೆಯನ್ನು ಪರಿಗಣಿಸಿ ಪಕ್ಷ ಪ್ರತಿ ಬಾರಿ ನನಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.ಈಗ ಪದವಿ ಪಡೆದಿರುವ ವೈದ್ಯರು ತಾವು ಮಾಡುವ ದುಡಿಮೆಯಲ್ಲಿ ಹತ್ತು ಪೈಸೆಯಷ್ಟಾದರೂ ದಾನ ದರ್ಮದ ಸೇವೆಗೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.ಈ ಹಿಂದೆ ಎಸ್. ನಿಜಲಿಂಗಪ್ಪನವರು ಅಧಿಕಾರದಲ್ಲಿದ್ದಾಗ ಬೆಳಗಾವಿ, ಕಲಬುರಗಿ, ದಾವಣಗೆರೆಗಳಿಗೆ ಮೇಡಿಕಲ್ ಕಾಲೇಜುಗಳನ್ನು ನೀಡಿದ್ದರು. ನಂತರ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಮತ್ತು ಬಾಗಲಕೋಟೆಯಲ್ಲಿ ಬಿ.ವಿ.ವಿ.ಎಸ್ ಮೇಡಿಕಲ್ ಕಾಲೇಜುಗಳು ಆರಂಭವಾಗಿವೆ. ಹೆಚ್ಚೆಚ್ಚು…

Read More

ಬಿಎಲ್ಡಿಇ ಡೀಮ್ಡ್ ವಿವಿದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ವಿಜಯಪುರ: ಡಿಜಿಟಲ್ ತಂತ್ರಜ್ಞಾನದಿಂದ ಈಗ ಆರೋಗ್ಯ ಸೇವೆಯ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ವೈದ್ಯರು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಗೆ ಒತ್ತು ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದ್ದಾರೆ.ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಅವರು ಘಟಿಕೋತ್ಸವ ಭಾಷಣ ಮಾಡಿದರು.ವೈದ್ಯರು ಜನರ ಪಾಲಿಗೆ ಜೀವ ರಕ್ಷಿಸುವ ದೇವರಿದ್ದಂತೆ. ಆದ್ದರಿಂದ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯಿಂದ ಗ್ರಾಮೀಣ ಜನರ ಸೇವೆ ಮಾಡಬೇಕು. ಅವರಲ್ಲಿರುವ ನಂಬಿಕೆಯನ್ನು ಉಳಿಸಿ ಬೆಳೆಸಿಕೊಂಡು ಸೇವಾನಿಷ್ಠೆಯಿಂದ ಕೆಲಸ ಮಾಡಿದರೆ ಗುರಿ ತಲುಪಬಹುದು. ಇದು ನೀವು ಸಮಾಜದಿಂದ ಪಡೆದಿರುವುದುದನ್ನು ಹಿಂದಿರುಗಿಸುವ ಸೇವೆಯೂ ಆಗಿದೆ. ಈವರೆಗೆ ತಾವೆಲ್ಲರು ತಮ್ಮ ತಂದೆ- ತಾಯಿ ಮತ್ತು ಶಿಕ್ಷಕರ ಆಶ್ರಯದಲ್ಲಿದ್ದ ತಾವೆಲ್ಲರೂ ಈಗ ಸ್ವತಂತ್ರರಾಗಿದ್ದೀರಿ. ಹೆತ್ತ ಪೋಷಕರು,…

Read More

ವಿಜಯಪುರ: ಖ್ಯಾತ ಬಾಲಿವುಡ್ ಗಾಯಕ ಕುಮಾರ ಸಾನು ಅವರ 67 ನೇ ಜನ್ಮದಿನದ ಅಂಗವಾಗಿ ಅ.22 ರವಿವಾರ ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿಸಂಗೀತ ರಸದೌತಣ ಕಾರ್ಯಕ್ರಮ ಆಯೋಜಿಸಿಸಲಾಗಿದೆ.ವಿಜಯಪುರದ ಮ್ಯೂಸಿಕ್ ಹೇವನ್ ಆರ್ಕೆಸ್ಟ್ರಾ ವತಿಯಿಂದ ಹಮ್ಮಿಕೊಳ್ಳಲಾಗುವ ಈ ಕಾರ್ಯಕ್ರಮದಲ್ಲಿ ಅಂದು ಮದ್ಯಾಹ್ನ 12 ರಿಂದ ರಾತ್ರಿ 8.30ರ ವರೆಗೆ ಗಾಯಕ ಕುಮಾರ ಸಾನು 67 ನೇ ಜನ್ಮದಿನದ ಪ್ರಯುಕ್ತ 67 ಹಾಡುಗಳನ್ನು ಸತತ 8 ಗಂಟೆಗಳ ಕಾಲ ಪ್ರಸ್ತುತ ಪಡಿಸಿ ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ದಾಖಲೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಕರ್ನಾಟಕದ ಕುಮಾರ ಸಾನು ಖ್ಯಾತಿಯ ರವಿಕುಮಾರ ಅಥರ್ಗಾರವರು ಸತತವಾಗಿ ಹಾಡುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಅವರಿಗೆ ವಿಜಯಪುರದ ಸೋನು ನಿಗಮ ಖ್ಯಾತಿಯ ರವಿ ಬರಾಡೆ, ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಏಜಾಜ್ ಅಹ್ಮದ, ಮುಂಬೈನ ಸುಪ್ರಸಿದ್ದ ಗಾಯಕಿ ಚಾರುಲ್ ಹಾಗೂ ಸ್ಥಳಿಯ ಪ್ರತಿಭೆಗಳು ಎಲ್ಲರನ್ನೂ ರಂಜಿಸಿಲಿದ್ದಾರೆ.ಈ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಲಘು ಉಪಹಾರದ…

Read More

ವಿಜಯಪುರದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ರಚನೆ ವಿಜಯಪುರ: ರಾಜ್ಯ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಮೊಟ್ಟಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ರಚಿಸಿ ಆಸ್ತಿತ್ವಕ್ಕೆ ತರಲಾಗಿದೆ.       ನಗರದ ಬಾಲಕರ ಸರಕಾರಿ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಸಭೆಯಲ್ಲಿ ಒಕ್ಕೂಟ ರಚನೆಯ ನಿಧಾ೯ರ ಕೈಗೊಂಡು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.       ವಿಜಯಪುರ ನಗರವನ್ನು ರಾಜ್ಯ ಮಟ್ಟದ ಕೇಂದ್ರ ಕಚೇರಿಯನ್ನಾಗಿ ಇರಿಸಿಕೊಂಡು “ನಮ್ಮ ಹುದ್ದೆ- ನಮ್ಮ ಹಕ್ಕು” ಶೀರ್ಷಿಕೆಯಡಿಯಲ್ಲಿ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಆಸ್ತಿತ್ವಕ್ಕೆ ಬಂದಿದೆ. ಒಕ್ಕೂಟ ರಚನೆ ಬಗ್ಗೆ ಈಗಾಗಲೇ ಎರಡು ಮೂರು ಬಾರಿ ಸಭೆ ಜರುಗಿತ್ತು. ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ,ಪರಾಮರ್ಶೆ ನಡೆಸಿ ಅಂತಿಮವಾಗಿ ಈ ಬಗ್ಗೆ ಒಮ್ಮತದಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಹಾಗೂ ಹಾಲಿ ಚಿತ್ರಕಲಾ ಶಿಕ್ಷಕರ ಬಳಗ ಅಧಿಕೃತವಾಗಿ ಅಂಗೀಕಾರದ ಮುದ್ರೆ ಒತ್ತಿ ಸಮ್ಮತಿಸಿದ್ದಾರೆ.     ಚಿತ್ರಕಲಾ ಶಿಕ್ಷಣ…

Read More

ವಿಜಯಪುರ: ನಗರದ ಶಾಂತಿನಿಕೇತನ ನೂತನ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡ ಶಾಂತಿನಿಕೇತನ ದಾಂಡಿಯಾ ಫೆಸ್ಟ್ 2023ಕ್ಕೆ ಸಂಸದ ರಮೇಶ ಜಿಗಜಿಣಗಿ ಬುಧವಾರ ಸಂಜೆ ಚಾಲನೆ ನೀಡಿದರು.ಸಾನಿಧ್ಯ ವಹಿಸಿದ ಯೋಗೇಶ್ವರಿ ಮಾತಾ ಮಾತನಾಡಿ, ಭಾರತದ ಸನಾತನ ಪರಂಪರೆ, ವಿಶ್ವ ಉತ್ಪತ್ತಿಗೆ ಸ್ತ್ರೀಶಕ್ತಿಯ ಅವಶ್ಯಕತೆ ಇದೆಯೆಂದು ಈ ಶರನ್ನವರಾತ್ರಿ ಆಚರಿಸಲಾಗುತ್ತಿದೆ ಎಂದರು.ಚಲನಚಿತ್ರ ನಟಿ ಮಯೂರಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸುವ ಶಾಂತಿನಿಕೇತನ ಸಂಸ್ಥೆ ಇನ್ನೂ ಉನ್ನತ ಹಂತಕ್ಕೇರಲೆಂದು ಆಶಿಸಿದರು.ಸಂಸ್ಥೆಯ ಮುಖ್ಯಸ್ಥ ಸುರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾಗರ ಡಿಜೆ, ಯಶ್, ಪಿಎಸೈ ಜ್ಯೋತಿ, ಸೈನಿಕಶಾಲೆಯ ಪ್ರತಿಭಾ, ರೇಶಮ್ ಜೈನ್ ವೇದಿಕೆ ಮೇಲಿದ್ದರು.ಶೀಲಾ ಮೇಡಂ ಸ್ವಾಗತಿಸಿ, ವಂದಿಸಿದರು.ಪ್ರಾಚಾರ್ಯ ಶರತ್, ಅಶೋಕಗೌಡ ಪಾಟೀಲ, ಧಿವ್ಯ ಶರತ್ ಬಿರಾದಾರ ಸೇರಿದಂತೆ ಹಲವರಿದ್ದರು.

Read More

ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಉತ್ತರ ಕೊಡುತ್ತದೆ :ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು: ಬಿಜೆಪಿಯವರ ಷಡ್ಯಂತ್ರ ಏನೇ ಇರಬಹುದು, ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಎಲ್ಲಾ ಉತ್ತರ ಕೊಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಶೇ 90 ರಷ್ಟು ತನಿಖೆ ನಡೆಸಿದ್ದೇವೆ ಎಂದು ಸಿಬಿಐ ಹೇಳಿದೆ. ನಾನು, ನನ್ನ ಹೆಂಡತಿ ಹಾಗೂ ಕುಟುಂಬದವರು ನನ್ನ ಆಸ್ತಿ ಯಾವುದು, ನನ್ನ ಹೆಂಡತಿಯ ಆಸ್ತಿ ಯಾವುದು ಎಂದು ಹೇಳಬೇಕು. ನನ್ನನ್ನೇ ಕರೆಸದೆ, ಕೇಳದೆ ಅದು ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ ಎಂದರು.ನಾವು ನ್ಯಾಯಾಲಯಕ್ಕೆ ಸಿಬಿಐ ದಾಖಲಿಸಿರುವ ಎಫ್‌ಐಆರ್ ಸರಿ ಇಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೆವು. ರಾಜಕೀಯ ಉದ್ದೇಶದಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದ ವೇಳೆ ತನಿಖೆಗೆ ಆದೇಶ ನೀಡಿದ್ದರು. ನನಗೆ ನ್ಯಾಯಲಯದ…

Read More

ವಿಜಯಪುರ: ನವರಾತ್ರಿ ಹಬ್ಬದ ಐದನೆಯ ದಿನವಾದ ಗುರುವಾರತಾಯಿ ಚಾಮುಂಡೇಶ್ವರಿಯ ಸ್ವರೂಪವಾದ, ದೇವಿ ಸ್ಕಂದಮಾತೆ ವಸ್ತ್ರವರ್ಣವಾದ ಹಳದಿ ವರ್ಣದ ಸೀರೆಯನ್ನುಟ್ಟು ’ಉದಯರಶ್ಮಿ’ ಪತ್ರಿಕೆ ಅಂಕಣಗಾರ್ತಿ ಡಾ.ನಂದಿನಿ ಮುಚ್ಚಂಡಿ ಅವರೊಂದಿಗೆ ಅನೇಕ ವೈದ್ಯೆಯರು ನವರಾತ್ರೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.ಡಾ.ಸುಮಂಗಲಾ ಪಾಟೀಲ, ಡಾ.ಶ್ರೀಲಕ್ಷ್ಮಿ ಬಗಲಿ, ಡಾ.ಜ್ಯೋತಿ ಖೋದ್ನಾಪುರ, ಡಾ.ನಂದಿನಿ ಮುಚ್ಚಂಡಿ, ಡಾ.ಅನಿತಾ ತೇಲಿ, ಡಾ.ನಿಲಿಮಾ, ಡಾ.ಗೋಹರ ಬಾನು, ಸೌಮ್ಯ, ಮುಬೀನ, ಮಲನ್, ರೇಣುಕಾ ಮತ್ತು ರಂಜಿತಾ ಸೇರಿದಂತೆ ಹಲವರಿದ್ದರು.

Read More

ಚಡಚಣ: ಬಹುದಿನಗಳ ಆಶಯದಂತೆ ವಾಣಿಜ್ಯ ಪಟ್ಟಣ ಚಡಚಣದಿಂದ ಇಲಕಲ್ಲಗೆ ಬಸ್ ಸೌಲಭ್ಯ ಪ್ರಾರಂಭವಾಗಿದೆ.ಇಲಕಲ್ ದಿಂದ ಬೆಳಿಗ್ಗೆ 11 ಕ್ಕೆ ಹೊರಟು ಚಡಚಣಕ್ಕೆ ಮಧ್ಯಾಹ್ನ 2-30ಕ್ಕೆ ತಲುಪುತ್ತದೆ. ನಂತರ ಮಧ್ಯಾಹ್ನ 3 ಕ್ಕೆ ಹೊರಟು ಸಂಜೆ 6-30 ಕ್ಜೆ ಇಲಕಲ್ ತಲುಪುತ್ತದೆ‌.ಬುಧವಾರ ಮಧ್ಯಾಹ್ನ ಆಗಮಿಸಿದ ನೂತನ ಬಸ್ಸಿಗೆ ಗ್ರಾಸ್ಥರು ಸಂಭ್ರಮದಿಂದ ತಳಿರು-ತೋರಣ ಕಟ್ಟಿ ,ಹಾರ ಹಾಕಿ ಅಲಂಕರಿಸಿದ್ದರು. ವ್ಯಾಪಾರಸ್ಥರಾದ ಶಾಂತುಗೌಡ ಬಿರಾದಾರ ರವರು ಮತ್ತು ಶಂಕರ ಅವಜಿ ರವರು ಪೂಜೆ ನೆರವೇರಿಸಿದ್ದರು. ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹೂಸ ಮಾರ್ಗದ ಬಸ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಭಂಡರಕವಠೆ ರವರು,KSRTC ಇಲಾಖೆಯಲ್ಲಿ ಡಿಪೋ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸದ್ಯ ಇಲಕಲ್ಲ ಡಿಪೋದಲ್ಲಿ ಕರ್ತವ್ಯದಲ್ಲಿರುವ ಚಡಚಣ ತಾಲ್ಲೂಕಿನ ಗೂಡಿಹಾಳ ಗ್ರಾಮದವರಾದ ಸಾಹೇಬಗೌಡ ಬಿರಾದಾರ ರವರ ಕಾಳಜಿ ಮತ್ತು ತಮ್ಮ ಜನ್ಮಭೂಮಿ ಬಗ್ಗೆ ಇರುವ ವಿಶೇಷ ಪ್ರೀತಿ ಅಭಿಮಾನದ ಕಾರಣಕ್ಕೆ ಸಾಹೇಬಗೌಡ ಬಿರಾದಾರ ಪ್ರಯತ್ನದ ಫಲವಾಗಿ ಇಂದು ವ್ಯಾಪಾರಿ ಕೇಂದ್ರ, ಸಾಹಿತ್ಯದ ತವರು ,…

Read More

– ಡಾ.ಮಹಾಂತೇಶ ಬಿರಾದಾರ ವಿಜಯಪುರ: ಶತಮಾನಗಳ ಇತಿಹಾಸದ ವಿಜಯಪುರ ಲಿಂಗಾಯತ ಜಿಲ್ಲೆ ಶಿಕ್ಷಣ ಅಭಿವೃದ್ದಿ ಸಂಸ್ಥೆ ಡಿಮ್ಡ್ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲು 95ರ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ವಿಜಯಪುರಕ್ಕೆ ಆಗಮಿಸಿದ ದಾವಣಗೆರೆ ದಾಸೋಹಿ ಶಾಮನೂರು ಶಿವಶಂಕರಪ್ಪನವರು, ದಾವಣಗೆರೆಯಿಂದ ಗುಡ್ಡಾಪುರಕ್ಕೆ ತೆರಳಿ ಶರಣೆ ದಾನಮ್ಮನ ದರ್ಶನ ಮಾಡಿ ವಿಜಯಪುರಕ್ಕೆ ಬಂದರೂ ನೇರವಾಗಿ ವಿಶ್ರಾಂತಿಗೆ ತೆರಳದೆ ಜಿಲ್ಲೆಯ ವೀರಶೈವ ಲಿಂಗಾಯತ ಭವನಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ನಂತರ ದಾವಣಗೆರೆ ಬಂಧುಗಳಾದ ಉದ್ಯಮಿ ಸಂತೋಷ ಗಣಿಯವರು ಇತ್ತೀಚೆಗೆ ನಿರ್ಮಿಸಿದ ಬೃಹತ್ ಫರ್ನಿಚರ್ ಮಾಲ್ ಗೆ ಭೇಟಿ ನೀಡಿ ಅಲ್ಲಿ ಸುಮಾರು ಸಮಯ ಕಳೆದು ನಂತರ ತಮ್ಮ ವಿಶ್ರಾಂತಿ ಸ್ಥಳಕ್ಕೆ ಬಂದರು.ಈ ಇಳಿವಯಸ್ಸಿನಲ್ಲಿಯೂ ಅವರ ಉತ್ಸಾಹ, ಶಾಂತಚಿತ್ತ, ಎಲ್ಲರನ್ನೂ ಗುರುತಿಸುವ, ಪ್ರಶಂಶಿಸುವ ಮನಸ್ಸು ಇಷ್ಟವಾಯಿತು.ಬಹುಶಹ ಜೀವನದಲ್ಲಿ ನಾವು ಯಾರ ಬಗ್ಗೆಯೂ ದ್ವೇಷಿಸದೆ ಪ್ರೀತಿಯಿಂದ ಹುಮ್ಮಸ್ಸಿನಿಂದ ಕೆಲಸ ಮಾಡಿದರೆ ಇವರಂತೆ ಜೀವನವನ್ನು ಪ್ರತಿಕ್ಷಣವೂ ಅನುಭವಿಸಲು ಸಾಧ್ಯ..ಅಂದಹಾಗೆ ಇವರು ಭೇಟಿ ನೀಡಿದ ಎಲ್ಲ…

Read More

ವಿಜಯಪುರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ್ ೧ ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲು ಉದ್ದೇಶಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಕಲೆ, ಸಾಹಿತ್ಯ ರಂಗಭೂಮಿ, ಸುಗಮ ಸಂಗೀತ, ಜನಪದ ಸಂಗೀತ, ಶಿಲ್ಪಕಲೆ, ನೃತ್ಯ, ಚಿತ್ರಕಲೆ, ಸಮಾಜ ಸೇವೆ, ಕೃಷಿ ವೈದ್ಯಕೀಯ, ಪತ್ರಿಕೋದ್ಯಮ ಹಾಗೂ ಸಂಕೀರ್ಣ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ವಿವರನ್ನೊಳಗೊಂಡು ತಮ್ಮ ಸ್ವಪರಿಚಯ ಮತ್ತು ದಾಖಲೆಗಳೊಂದಿಗೆ ದಿನಾಂಕ : ೨೫-೧೦-೨೦೨೩ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ, ಸ್ಟೇಶನ್ ರಸ್ತೆ, ವಿಜಯಪುರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೦೮೩೫೨-೨೫೧೨೬೧ ಸಂಖ್ಯೆಗೆ ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More