ಚಡಚಣ: ಬಹುದಿನಗಳ ಆಶಯದಂತೆ ವಾಣಿಜ್ಯ ಪಟ್ಟಣ ಚಡಚಣದಿಂದ ಇಲಕಲ್ಲಗೆ ಬಸ್ ಸೌಲಭ್ಯ ಪ್ರಾರಂಭವಾಗಿದೆ.
ಇಲಕಲ್ ದಿಂದ ಬೆಳಿಗ್ಗೆ 11 ಕ್ಕೆ ಹೊರಟು ಚಡಚಣಕ್ಕೆ ಮಧ್ಯಾಹ್ನ 2-30ಕ್ಕೆ ತಲುಪುತ್ತದೆ. ನಂತರ ಮಧ್ಯಾಹ್ನ 3 ಕ್ಕೆ ಹೊರಟು ಸಂಜೆ 6-30 ಕ್ಜೆ ಇಲಕಲ್ ತಲುಪುತ್ತದೆ.
ಬುಧವಾರ ಮಧ್ಯಾಹ್ನ ಆಗಮಿಸಿದ ನೂತನ ಬಸ್ಸಿಗೆ ಗ್ರಾಸ್ಥರು ಸಂಭ್ರಮದಿಂದ ತಳಿರು-ತೋರಣ ಕಟ್ಟಿ ,ಹಾರ ಹಾಕಿ ಅಲಂಕರಿಸಿದ್ದರು. ವ್ಯಾಪಾರಸ್ಥರಾದ ಶಾಂತುಗೌಡ ಬಿರಾದಾರ ರವರು ಮತ್ತು ಶಂಕರ ಅವಜಿ ರವರು ಪೂಜೆ ನೆರವೇರಿಸಿದ್ದರು. ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹೂಸ ಮಾರ್ಗದ ಬಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಭಂಡರಕವಠೆ ರವರು,
KSRTC ಇಲಾಖೆಯಲ್ಲಿ ಡಿಪೋ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸದ್ಯ ಇಲಕಲ್ಲ ಡಿಪೋದಲ್ಲಿ ಕರ್ತವ್ಯದಲ್ಲಿರುವ ಚಡಚಣ ತಾಲ್ಲೂಕಿನ ಗೂಡಿಹಾಳ ಗ್ರಾಮದವರಾದ ಸಾಹೇಬಗೌಡ ಬಿರಾದಾರ ರವರ ಕಾಳಜಿ ಮತ್ತು ತಮ್ಮ ಜನ್ಮಭೂಮಿ ಬಗ್ಗೆ ಇರುವ ವಿಶೇಷ ಪ್ರೀತಿ ಅಭಿಮಾನದ ಕಾರಣಕ್ಕೆ ಸಾಹೇಬಗೌಡ ಬಿರಾದಾರ ಪ್ರಯತ್ನದ ಫಲವಾಗಿ ಇಂದು ವ್ಯಾಪಾರಿ ಕೇಂದ್ರ, ಸಾಹಿತ್ಯದ ತವರು , ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಡೆದಾಡಿದ ಚಡಚಣಕ್ಕೆ ಇಲಕಲ್ಲ ದಿಂದ ನೇರ ಬಸ್ ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಮಹಾದೇವ ಬನಸೂಡೆ ನಿರೂಪಿಸಿದರು.
ಅಧಿಕಾರಿಗಳಾದ ಶಿವಾನಂದ ಬೆಳ್ಳುಂಡಗಿ, ಕಲ್ಲಪ್ಪ ಅಗಸರ, ನಿವೃತ್ತ ಚಾಲಕ ಅಲಿಸಾಬ ಫಠಾಣ, ರಾಜು ತೇಲಿ ಸೇರಿದಂತೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

