– ಡಾ.ಮಹಾಂತೇಶ ಬಿರಾದಾರ
ವಿಜಯಪುರ: ಶತಮಾನಗಳ ಇತಿಹಾಸದ ವಿಜಯಪುರ ಲಿಂಗಾಯತ ಜಿಲ್ಲೆ ಶಿಕ್ಷಣ ಅಭಿವೃದ್ದಿ ಸಂಸ್ಥೆ ಡಿಮ್ಡ್ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲು 95ರ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ವಿಜಯಪುರಕ್ಕೆ ಆಗಮಿಸಿದ ದಾವಣಗೆರೆ ದಾಸೋಹಿ ಶಾಮನೂರು ಶಿವಶಂಕರಪ್ಪನವರು, ದಾವಣಗೆರೆಯಿಂದ ಗುಡ್ಡಾಪುರಕ್ಕೆ ತೆರಳಿ ಶರಣೆ ದಾನಮ್ಮನ ದರ್ಶನ ಮಾಡಿ ವಿಜಯಪುರಕ್ಕೆ ಬಂದರೂ ನೇರವಾಗಿ ವಿಶ್ರಾಂತಿಗೆ ತೆರಳದೆ ಜಿಲ್ಲೆಯ ವೀರಶೈವ ಲಿಂಗಾಯತ ಭವನಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ನಂತರ ದಾವಣಗೆರೆ ಬಂಧುಗಳಾದ ಉದ್ಯಮಿ ಸಂತೋಷ ಗಣಿಯವರು ಇತ್ತೀಚೆಗೆ ನಿರ್ಮಿಸಿದ ಬೃಹತ್ ಫರ್ನಿಚರ್ ಮಾಲ್ ಗೆ ಭೇಟಿ ನೀಡಿ ಅಲ್ಲಿ ಸುಮಾರು ಸಮಯ ಕಳೆದು ನಂತರ ತಮ್ಮ ವಿಶ್ರಾಂತಿ ಸ್ಥಳಕ್ಕೆ ಬಂದರು.
ಈ ಇಳಿವಯಸ್ಸಿನಲ್ಲಿಯೂ ಅವರ ಉತ್ಸಾಹ, ಶಾಂತಚಿತ್ತ, ಎಲ್ಲರನ್ನೂ ಗುರುತಿಸುವ, ಪ್ರಶಂಶಿಸುವ ಮನಸ್ಸು ಇಷ್ಟವಾಯಿತು.
ಬಹುಶಹ ಜೀವನದಲ್ಲಿ ನಾವು ಯಾರ ಬಗ್ಗೆಯೂ ದ್ವೇಷಿಸದೆ ಪ್ರೀತಿಯಿಂದ ಹುಮ್ಮಸ್ಸಿನಿಂದ ಕೆಲಸ ಮಾಡಿದರೆ ಇವರಂತೆ ಜೀವನವನ್ನು ಪ್ರತಿಕ್ಷಣವೂ ಅನುಭವಿಸಲು ಸಾಧ್ಯ..
ಅಂದಹಾಗೆ ಇವರು ಭೇಟಿ ನೀಡಿದ ಎಲ್ಲ ಸ್ಥಳಗಳಲ್ಲಿ ಚಹಾ ಪಾನೀಯ ಪ್ರೀತಿಯಿಂದ ನೀಡಿದರು. ಎಲ್ಲವನ್ನು ನಿರಾಕರಿಸದೆ ಸೇವಿಸಿದರು.
ನಾವು ಮಾತ್ರ ಶುಗರ್ ಫಿಗರ್ ಎಂದು ದೂರಸರಿಸಿದೆವು. ಶಾಮನೂರು ಅಜ್ಜನವರು ನಮ್ಮ ಮುಂದಿನ ತಲೆಮಾರುಗಳಿಗೆ ಮಾದರಿ..

