Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಮೇರಿಕದ ಯುನಿವರ್ಸಿಟಿ ಆಫ್ ಇಲಿನಾಯಿಸ್ ಚಿಕ್ಯಾಗೊ ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಅಮೇರಿಕಕ್ಕೆ ತೆರಳಿದ್ದರು. ಅಲ್ಲಿ ಇಲಿನಾಯಿಸ ವಿಶ್ವವಿದ್ಯಾಲಯ, ಚಿಕ್ಯಾಗೊ ಅಂತರಾಷ್ಟೀಯ ಆರೋಗ್ಯ ವಿಭಾಗದ ಅಸೋಶಿಯೇಟ ಡೀನ ಡಾ. ಪ್ರಭಾಕರ ಬೆಳ್ಳೂರ ಅವರೊಂದಿಗೆ ಈ ಒಡಂಬಡಿಕೆ ಕುರಿತು ಚರ್ಚಿಸಿದ್ದರು. ಈಗ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯಿಂದಾಗಿ ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲಿವೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ, ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಸಚಿವ ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ವೈದ್ಯಕೀಯ ಮಹವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಅವರ ಮಾರ್ಗದರ್ಶನದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಈ ಒಡಂಬಡಿಕೆ ಜಾರಿಗೆ ಬಂದಿದೆ. ಅದರಂತೆ ಬಿ. ಎಲ್. ಡಿ. ಇ. ಸಂಸ್ಥೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಸೂಚನೆ ಅನ್ವಯ, ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಗೆ ಸಿಂಧಗಿಯ ಶಿಕ್ಷಕರಾದ ಶ್ರೀ ಸಿದ್ಧಲಿಂಗ ಚೌಧರಿ ಅವರನ್ನು ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ.ಸರ್ಕಾರದ ಆದೇಶ ಸಂಖ್ಯೆ: ಇಪಿ 11 ಎಎಲ್‌ಬಿ 2025, ದಿನಾಂಕ: 21.02.2025 ರ ಅನ್ವಯ ಈ ಸಮಿತಿಯನ್ನು ರಚಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಕಾರ್ಯನಿರ್ವಹಿಸಲು ಒಟ್ಟು 18 ಜನರ ಸಮಿತಿ ರಚಿಸಲಾಗಿದೆ.ಈ ಸಮಿತಿಗೆ ಸಿಂಧಗಿ ಕ್ಷೇತ್ರದ ಶಾಸಕರಾದ ಅಶೋಕ ಎಮ್ ಮನಗೂಳಿ ಅವರು ಅಧ್ಯಕ್ಷರಾಗಿದ್ದು, ಸರ್ಕಾರಿ ಪ್ರೌಢಶಾಲೆ ಬಂಕಲಗಿಯ ಶಿಕ್ಷಕರಾದ ಸಿದ್ಧಲಿಂಗ ಚೌಧರಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಸಿದ್ಧಲಿಂಗ ಚೌಧರಿ ಅವರ ಆಯ್ಕೆಗೆ ಶಿಕ್ಷಕ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆ ಅಹಿಂದ ವರ್ಗಕ್ಕೆ ಸಾಕಷ್ಟು ನೋವುಂಟುಮಾಡಿದೆ. ಅಹಿಂದ ವರ್ಗಗಳ ಮತ ಪಡೆದ ಶಾಸಕ ಅಶೋಕ ಮನಗೂಳಿ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಆಗ್ರಹಿಸಿದ್ದಾರೆ.ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಲು ಒತ್ತಡ ಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗುರುವಾರ ಕುರುಬ ಸಂಘ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಹಾಗೂ ಅವರ ಅಹಿಂದ ಬೆಂಬಲವೇ ಕಾರಣ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಎದುರಿಸಬೇಕಾಗುತ್ತದೆ. ರಾಜ್ಯಕ್ಕೆ ಗ್ಯಾರಂಟಿ ನೀಡಿ, ಅದನ್ನು ವ್ಯವಸ್ಥಿತವಾಗಿ ನಿಭಾಯಿಸಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಉದ್ದೇಶ ಏನು? ೨೦೨೮ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ ಎನ್ನುವ ಕಾರಣಕ್ಕೆ ಅಹಿಂದ ಸಮಾಜವು ಶೇ.೯೦ರಷ್ಟು ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಅವರನ್ನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಬಕ್ರೀದ್ (ಈದ್ ಉಲ್ ಹಜ್) ಹಬ್ಬವನ್ನು ಇದಗಾ ಮೈದಾನದಲ್ಲಿ ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಅಲ್ಲಾಹನಿಗೆ ಪ್ರಾರ್ಥನೆಯನ್ನು ಮಾಡಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಆಚರಿಸಿದರು.ಪಟ್ಟಣದ ಇದಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಧರ್ಮ ಗುರು ಹಾಫೀಜಮಹ್ಮದ ಅಲಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಫೀಜ ಮೊಹಮ್ಮದ್ ಶೋಯಬ, ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಶಬ್ಬೀರಅಹ್ಮದ ನದಾಫ, ಮಾಜಿ ಪುರಸಭೆ ಸದಸ್ಯರಾದ ಕಮಲಸಾಬ ಕೊರಬು, ನಿಸಾರ ಚೌಧರಿ, ನಿಸಾರ ಚೌಧರಿ, ಅಬ್ದುಲರಜಾಕ ಚೌಧರಿ, ಪಂಚಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಒಮ್ಮೆ ಕುಲ್ಸುಮ್ ಮಜೀದ್ ಕಮಿಟಿ ಅಧ್ಯಕ್ಷ ಅಬ್ದುಲರಜಾಕ ಕೊರಬು,ಅಂಜುಮನ ಕಮಿಟಿ ಅಧ್ಯಕ್ಷ ಚಾಂದಪಾಶಾ ಕೊರಬು, ಮುಖಂಡರಾದ ಇಬ್ರಾಹಿಂಸಾಬ ಬೊಮ್ಮನಹಳ್ಳಿ, ಮತಾಬ ಬೊಮ್ಮನಹಳ್ಳಿ, ಅಲ್ಲಾಭಕ್ಷ ಕೊರಬು, ಜಾಕೀರಹುಸೇನ ಬಾಗೇವಾಡಿ, ದಸ್ತಗಿರ ವಜ್ಜಲ, ಬುಡ್ಡೆಸಾಬ ಚಳ್ಳಿಗಿಡದ, ಲಾಲು ಕೊರಬು, ದಸ್ತಗೀರ ಹುಬ್ಬಳ್ಳಿ, ಮೊಹಮ್ಮದರಫೀಕ್ ಹೊಕ್ರಾಣಿ, ಅಬ್ದುಲರಜಾಕ ಬಾಗವಾನ,ಎಚ್.ಆರ್.…
ಲೇಖನ- ರಶ್ಮಿ ಕೆ. ವಿಶ್ವನಾಥ್,ಮೈಸೂರು ಉದಯರಶ್ಮಿ ದಿನಪತ್ರಿಕೆ ಅಂದು ಬೆಳಗ್ಗೆ ನಮ್ಮ ಕೆಳಗಿನ ಮನೆಯ ಅಂಕಲ್ ಸಹ ಸೇರಿ ಒಟ್ಟು 5 ಜನ ಮಾತ್ರ ಆ ಮನೆಯ ಮುಂದೆ ನಿಂತಿದ್ದರು. ‘ಇದ್ಯಾಕೆ ಅಲ್ಲಿ ಜನರಿದ್ದಾರೆ?’ ಕೇಳಿಕೊಂಡೆ. ಉತ್ತರ ಸಿಗಲಿಲ್ಲ ಸುಮ್ಮನಾದೆ.ಸ್ವಲ್ಪ ಹೊತ್ತಿನ ಬಳಿಕ ನಮ್ಮ ಮನೆಯ ಕೆಳಗಿನ ಮನೆ ಆಂಟಿ ಕಣ್ಣಿಗೆಬಿದ್ದರು. “ಆಂಟಿ, ಯಾಕೆ ಅಂಕಲ್ ಅಲ್ಲಿದ್ದಾರೆ? ಏನಾಗಿದೆ ಅಲ್ಲಿ?” ಕೇಳಿದೆ. ಆಂಟಿ ಚಿಂತೆ ಬೇರೆಯೇ ಇತ್ತು. “ಅಯ್ಯೊ, ಆ ಮನೆಯ ತಾತಪ್ಪ ತೀರಿಕೊಂಡಿದ್ದಾರೆ. ಇವರು ಎಲ್ಲೇ ಸಾವು ಅಂದರೂ ಹೋಗಿಬಿಡ್ತಾರೆ. ಅವರಿಗೆ ನೆಂಟರಾರು ಇಲ್ವಂತೆ. ಇವರು ಇನ್ನೂ ತಿಂಡಿಯನ್ನೂ ತಿಂದಿಲ್ಲ, ಹೋಗಿ ಅಲ್ಲಿ ಚಟ್ಟ ಕಟ್ಟಿಸುತ್ತಿದ್ದಾರೆ”. ನನಗೆ ಏನು ಹೇಳಬೇಕೊ ತಿಳಿಯಲೆ ಇಲ್ಲ. “ಹೋಗ್ಲಿ ಬಿಡಿ ಆಂಟಿ. ಪುಣ್ಯದ ಕೆಲಸ, ಮಾಡಲಿ. ಪಾಪ ಅವರಿಗೆ ಯಾರು ಇಲ್ಲ ಅಂದರೆ, ಯಾರಾದರು ಒಬ್ಬರು ನಿಂತು ನೋಡಲೇಬೇಕಲ್ಲ” ಎಂದವಳೆ. ಒಳಗೆ ಬಂದುಬಿಟ್ಟೆ.ಆದರೆ ಮನಸು ಮಾತ್ರ ಅಲ್ಲೇ ಸುತ್ತುತಿತ್ತು. ‘ಸಾವು ಎಂದರೂ ಆ ರಸ್ತೆಯ…
ಲೇಖನ- ಸುಮ ಬಸವರಾಜ ಚೌಧರಿಸದಸ್ಯರುಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಭಾರತೀಯ ಶಾಲೆಗಳು ತಮ್ಮ ಕಠಿಣ ಶೈಕ್ಷಣಿಕ ಮತ್ತು ಪರೀಕ್ಷಾ-ಆಧಾರಿತ ಸಂಸ್ಕೃತಿಗೆ ಹೆಸರುವಾಸಿಯಾಗಿವೆ. ಆದರೆ ಈ ವ್ಯವಸ್ಥೆಯು ಯುವ ಸಮಾಜವನ್ನು ನೈಜ ಜಗತ್ತಿಗೆ ಸಿದ್ಧಪಡಿಸುವಲ್ಲಿ ಸಫಲವಾಗುತ್ತಿದೆಯೆ?ಗಮನಿಸಿ ನೋಡಿದರೆ ಗಣಿತದ ಸಮಸ್ಯೆಯನ್ನು ಯುವಕರು ಬಗೆಹರಿಸಬಹುದು ಅಥವಾ ನಿಭಾಯಿಸಬಹುದು ಅಥವಾ ಐತಿಹಾಸಿಕ ದಿನಾಂಕಗಳನ್ನು ಪಠಿಸಲೂಬಹುದು, ಆದರೆ ತರಗತಿಯ ಆಚೆಗಿನ ಜೀವನದ ಬಗ್ಗೆ, ಜೀವನ ಕೌಶಲ್ಯದ ಬಗ್ಗೆ ಭಾರತೀಯ ಶಾಲೆಗಳು ಕಲಿಸಬೇಕಾದ ತೀರಾ ಅಗತ್ಯವಿರುವ ನಿರ್ಣಾಯಕ ಕೌಶಲ್ಯಗಳ ನೋಟ ಇಲ್ಲಿದೆ.1. ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಸಂಭಾಷಣೆಯ ಹೊರತಾಗಿಯೂ, ಭಾರತೀಯ ಶಾಲೆಗಳು ಹೆಚ್ಚಾಗಿ ಅದನ್ನು ನಿಷಿದ್ಧವೆಂದು ಪರಿಗಣಿಸುತ್ತವೆ. ಶೈಕ್ಷಣಿಕ ಒತ್ತಡವು ಸಾರ್ವಕಾಲಿಕ ಉತ್ತುಂಗದಲ್ಲಿದ್ದರೂ ಸಹ, ಒತ್ತಡ, ಆತಂಕ ಮತ್ತು ಭಾವನೆಗಳನ್ನು ಹೇಗೆ ನಿರ್ವಹಿಸುವುದು, ಒತ್ತಡವನ್ನು ಗುರುತಿಸುವುದು ಮತ್ತು ಅದರಿಂದ ಹೊರಬರಲು ಸಹಾಯವನ್ನು ಪಡೆಯುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುವುದು ಆದ್ಯತೆಯಾಗಿರಬೇಕಾ ಗಿದೆ.ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ-ತಂಗಿ ಇತ್ಯಾದಿ ಸಂಬಂಧಗಳ ಮಹತ್ವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯವು ಜುಲೈ ೨೦೨೬ರ ಪದವಿ, ಸ್ನಾತಕ ಕೋರ್ಸ್ಗಳು, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಕೆಗೆ ಜುಲೈ.೧೫ ಕೊನೆಯ ದಿನಾಂಕ ನಿಗದಿಪಡಿಸಿದೆ. Fresh Admission Link (ODL): https://ignouadmission.samarth.edu.in/ ºÁUÀÆ Fresh Admission Link (Online): https://ignouiop.samarth.edu.in/ಜುಲೈ೨೦೨೬ರ ಮರು ಪ್ರವೇಶಾತಿಗೆ Re-registrationLink: https://onlinerr.ignou.ac.inಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ ೩೦ ಕೊನೆಯ ದಿನಾಂಕವಾಗಿದೆ.ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತಿತಿತಿ.igಟಿou.ಚಿಛಿ.iಟಿ ದಲ್ಲಿ ಪ್ರವೇಶ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರಿಯ ನಿರ್ದೇಶಕರು, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ ವಿಜಯಪುರ, ೧ನೇ ಮಹಡಿ, ಪ್ಲಾಜಾ-೨, ಪ್ರವಾಸೋದ್ಯಮ ಇಲಾಖೆಯ ಕಟ್ಟಡ, ಮೊ:೦೮೩೫೨-೨೫೨೦೦೬, emಚಿiಟ: ಡಿಛಿbiರಿಚಿಠಿuಡಿ@igಟಿou.ಚಿಛಿ.iಟಿ ವಿಜಯಪುರ ಸಂಪರ್ಕಿಸಬಹುದಾಗಿದೆ ಎಂದು ಇಗ್ನೋ ಪ್ರಾದೇಶಿಕ ನಿರ್ದೇಶಕರಾದ ಡಾ.ಬಿ.ಎನ್. ದೇವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ:ಅಲ್ಪ ಸಂಖ್ಯಾತರ ಕಲ್ಯಾಣಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಮೇ ೩೦ ರಂದು ಬೆಳಿಗ್ಗೆ ೮ ಗಂಟೆಗೆ ಅಫಜಲಪುರ ಟಕ್ಕೆಯಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ನಡೆಯಲಿದೆ.ಅಲ್ಪ ಸಂಖ್ಯಾತರ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ೨೦೨೬-೨೭ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ಪ್ರವೇಶಾತಿಗಾಗಿ ಆಯ್ಕೆಯಾದ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳು ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.ವಿದ್ಯಾರ್ಥಿಗಳು ತಪ್ಪದೇ ಕೌನ್ಸೆಲಿಂಗ್‌ಗೆ ಹಾಜರಾಗಲು ಜಿಲ್ಲಾ ಅಧಿಕಾರಿಗಳು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ವಿಜಯಪುರ ಅವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿ, ಮೌಲಾನಾ ಆಜಾದ ಭವನ,ಜಿಲ್ಲಾ ಪಂಚಾಯತ ರಸ್ತೆ, ಕನಕದಾಸ ಬಡಾವಣೆ, ವಿಜಯಪುರ-೫೮೬೧೦೯ ಹಾಗೂ ದೂರವಾಣಿ ಸಂಖ್ಯೆ : ೦೮೩೫೨-೨೯೫೫೨೩ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಾಣೆಕೆ ತಡೆಯಲು ಜಿಲ್ಲಾಧಿಕಾರಿ ಡಾ. ಆನಂದ ಕೆ. ಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುರುವಾರ ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಾಣೆಕೆ ತಡೆಯಲು ಬಕ್ರೀದ್ ಹಬ್ಬದ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಚೆಕ್ ಪೋಸ್ಟ್ ಹಾಗೂ ವಿಶೇಷ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಕ್ರೀದ್ ಹಬ್ಬದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ಧರಿಸಿದಂತೆ ಜಿಲ್ಲೆಯಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಬಕ್ರೀದ್ ಹಿನ್ನೆಲೆಯಲ್ಲಿ ಮೇ ೨೭ ಮತ್ತು ೨೮ ರಂದು ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತ ಜಾನುವಾರುಗಳ ಸಾಗಣೆ ಹಾಗೂ ತಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಸೋಲ್ಲಾಪುರ ನಾಕಾ, ಜಮಖಂಡಿ ನಾಕಾ, ತಿಡಗುಂದಿ ಟೋಲ್ ಗೇಟ್, ಕನ್ನೊಳ್ಳಿಯಲ್ಲಿ ಹೊಸದಾಗಿ ಹೆಚ್ಚಿನ ಚೆಕ್ ಪೋಸ್ಟಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.ಸ್ಥಾಪಿಸಲಾದ ಚೆಕ್ ಪೋಸ್ಟ್ ವಿವರ:ಕನಮಡಿ: ನಿಯೋಜಿಸಲಾದ ಅಧಿಕಾರಿ ಹೆಸರು: ಡಾ. ನಾಗರಾಜ್ ಕನ್ನೂರ, ಪಶು…
