Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ಜಾಗತಿಕ ಆಧ್ಯಾತ್ಮಿಕ ಚಿಂತನೆ” ವಿಷಯ ಕುರಿತ ಗೋಷ್ಠಿ ಉದ್ಘಾಟಿಸಿದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ ಅಭಿಮತ ವಿಜಯಪುರ: ಮಾನವ ಕುಲಕ್ಕೆ ಸಿಕ್ಕ ಅತ್ಯಂತ ದೊಡ್ಡ ಕೊಡುಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಈ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ನನ್ನ ದೊಡ್ಡ ಸೌಭಾಗ್ಯ ಎಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಜಾಗತಿಕ ಆಧ್ಯಾತ್ಮಿಕ ಚಿಂತನೆ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೩ನೇ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ನಮ್ಮೊಂದಿಗೆ ಇಲ್ಲ ಎಂದು ನಾನು ಹೇಳುವುದಿಲ್ಲ. ಇಂದು ಅವರು ನಮ್ಮ-ನಿಮ್ಮ ಮನದಲ್ಲಿ ಇದ್ದದ್ದಕ್ಕಾಗಿಯೇ ಇಂದು ನಾವೆಲ್ಲರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೇವೆ. ಸ್ವಾಮೀಜಿಯವರು ಸದಾ ಶಾಂತಿಗೆ ಹೆಚ್ಚು ಒತ್ತನ್ನು ಕೊಟ್ಟಂತವರು. ಆದರೆ ನಾವು ಇಂದು ದ್ವೇಷದ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮ್ಮ ಗಾಳಿಯಲ್ಲಿ, ಉಸಿರಿನಲ್ಲಿಯೇ ದ್ವೇಷ ತುಂಬಿದೆ. ಇಂತಹ ಈಗಿನ ಸಮಾಜದಲ್ಲಿ ನಾವು ಶ್ರೀ ಸಿದ್ದೇಶ್ವರ ಅಪ್ಪನವರ ಸಂದೇಶಗಳನ್ನು ಮಾತುಗಳನ್ನು ನಾವು ನಮ್ಮ…
Udayarashmi kannada daily newspaper
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಡಿ.30 ಹಾಗೂ31 ರಂದು ನಡೆಯಲಿರುವ ಪ್ರಥಮ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಗರದ ಹಿರಿಯ ಸಾಹಿತಿ ಭಾರತಿ ಪಾಟೀಲ ಆಯ್ಕೆಯಾಗಿದ್ದಾರೆ.ಭಾನುವಾರ ನಗರದ ಕಸಾಪ ಭವನದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಹುದ್ದೆಗಳಿಗೆ ಬಿಜೆಪಿ ನೇಮಕ | ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಅರವಿಂದ ಬೆಲ್ಲದ ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ಘಟಕದಲ್ಲಿ ಸೋಮವಾರ ಎರಡನೇ ಹಂತದ ಅಧಿಕಾರ ಹಂಚಿಕೆ ಮಾಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಮೇಲ್ಮನೆ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಅವರನ್ನು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನಾಗಿ ಅರವಿಂದ್ ಬೆಲ್ಲದ ಅವರನ್ನು ನೇಮಕ ಮಾಡಲಾಗಿದೆ.ಕೆಲವು ದಿನಗಳ ಹಿಂದಷ್ಟೇ ಬಿ.ವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು ಮತ್ತು ಕೆಲವು ಮೋರ್ಚಾಗಳಿಗೆ ನೇಮಕಾತಿಯನ್ನು ಪ್ರಕಟಿಸಿದ್ದರು. ಇದೀಗ ಎರಡನೇ ಹಂತದಲ್ಲಿ ವಿಧಾನ ಸಭೆ ಮತ್ತು ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.ಆರ್. ಅಶೋಕ್ ಅವರನ್ನು ವಿಧಾನಭೆಯ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂಬ…
ದೇವರಹಿಪ್ಪರಗಿ: ಕನ್ನಡಮ್ಮ ಹಾಗೂ ಸಾಹಿತ್ಯದ ಸೇವೆಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ನಾಡು, ನುಡಿ ಸೇವೆಗೆ ಬದ್ಧರಾಗಬೇಕು ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಜಿ.ಪಿ.ಬಿರಾದಾರ ಅವರನ್ನು ಅಭಿನಂದಿಸಿ ಮಾತನಾಡಿದರು.ತಾಲ್ಲೂಕು ಘಟಕ ಹಿಂದಿನ ಅಧ್ಯಕ್ಷ ಕೆ.ಆರ್.ಕೊಕಟನೂರ ಸಾರಥ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಾ ಬಂದಿದೆ. ಈಗ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ ವಿನೂತನ ಕನ್ನಡಪರ ಕಾರ್ಯಗಳನ್ನು ಹಮ್ಮಿಕೊಂಡು ಕನ್ನಡ ಉಳಿಸಿ, ಬೆಳೆಸುವ ಕೆಲಸ ನಿರ್ವಹಿಸಲಿ. ಎಲ್ಲರ ಸಹಕಾರವಿದೆ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ಶಿಕ್ಷಕ ಪಿ.ಕೆ.ಕುಲಕರ್ಣಿ, ಪಿ.ಎಸ್.ಮಿಂಚನಾಳ, ರಾಘವೇಂದ್ರ ಕುಲಕರ್ಣಿ ಮಾತನಾಡಿದರು.ಶರಣ ಸಂಗಮ ತಾಲ್ಲೂಕು ಅಧ್ಯಕ್ಷ ಸಂಗಪ್ಪಣ್ಣ ತಡವಲ್, ತಾಲ್ಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಗುರುರಾಜ್ ಆಕಳವಾಡಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಸೋಮು ದೇವೂರ, ಶಿಕ್ಷಕರಾದ ಜಿ.ಬಿ.ಹೊಕ್ಕುಂಡಿ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ನಾಗಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ಎಸ್.ಜಿ.ತಾವರಖೇಡ, ಮುತ್ತು…
ಮುದ್ದೇಬಿಹಾಳ: ಕಾಂಗ್ರೆಸ್ ಪಕ್ಷದ ಪ.ಜಾ ವಿಭಾಗದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಿ.ಜಿ.ವಿಜಯಕರ ಇವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ ಅವರ ನಿರ್ದೇಶನದ ಮೇರೆಗೆ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಆದೇಶಿಸಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಆಲಕೊಪ್ಪರ ಬಳಿ ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.ಮೃತ ದುರ್ದೈವಿಯನ್ನು ತಾಲೂಕಿನ ಕಣಕಾಲ ಗ್ರಾಮದ ಸೋಮಪ್ಪ ಮಾದರ(೫೦) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಜಾವೀದ ಶೇಖ ಮತ್ತು ಚನ್ನಮ್ಮ ಪಾಟೀಲರನ್ನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ
ಸಿಂದಗಿಯಲ್ಲಿ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ | ೩೦-೪೦ ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ *- ಶೈಲಾ ಮಣೂರ*ವಿಜಯಪುರ: ಅದೊಂದು ಅಪರೂಪದ ಹೃದಯಸ್ಪರ್ಶಿ ಸಮಾರಂಭ. ೬೦-೮೦ ರ ಇಳಿ ವಯಸ್ಸಿನ ವೃದ್ದ ಗುರುವೃಂದ ೫೦ ರ ಪ್ರಾಯದ ಹೊಸ್ತಿಲಲ್ಲಿರುವ ಶಿಷ್ಯವೃಂದದ ಅಪರೂಪದ ಸಮಾಗಮ. ಸುಮಾರು ೩೦-೪೦ ವರ್ಷಗಳ ಬಳಿಕ ಇವರು ಪರಸ್ಪರ ಸಂಧಿಸುವ ಸುವರ್ಣಾವಕಾಶ ಒದಗಿಸಿದ್ದು ಈ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ. ಡಿ.೨೩ ಶನಿವಾರ ಬೆಳಗ್ಗೆ ಎಲ್ಲ ಶಿಷ್ಯ ವೃಂದವು, ಕೂಡಿ ಕಲಿತು ಆಡಿ ನಲಿದ ’ನಮ್ಮ ಗೆಳೆಯರ ಬಳಗ’ ಸ್ಥಾಪಿಸಿ ಆ ಮೂಲಕ ತಮಗೆ ಅಕ್ಷರ ಜ್ಞಾನ ನೀಡಿದ, ಜೀವನ ಮೌಲ್ಯಗಳನ್ನು ತುಂಬಿ ತಮ್ಮ ಬದುಕು ರೂಪಿಸಿದ ಅಂದಿನ ಗುರುವೃಂದವನ್ನು ಸ್ವಾಗತಿಸಲು ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದ ದ್ವಾರಬಾಗಿಲಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾದು ನಿಂತಿದ್ದರು. ಒಬ್ಬೊಬ್ಬರಾಗಿ ಬಂದ ಗುರುಗಳನ್ನು ಅವರು ಗೌರವ, ಅಭಿಮಾನ, ಕಾಳಜಿಯಿಂದ ಅವರ ಕೈಹಿಡಿದು ನಿಧಾನಕ್ಕೆ ಒಳಗೆ ತೆರಳುತ್ತಿದ್ದರೆ, ಗುರು ವೃಂದ…
ಮಕ್ಕಳ ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ಅಭಿಮತ ವಿಜಯಪುರ: ಸರಕಾರಗಳು ಬದಲಾದಂತೆ ಪಠ್ಯಪುಸ್ತಕ ನೀತಿ ಬದಲಾಗುತ್ತಿದೆ. ಒಂದು ಸರಕಾರ ಒಬ್ಬನನ್ನು ಕೊಲೆಗಡುಕ ಎಂದು ಬಿಂಬಿಸಿದರೆ ಇನ್ನೊಂದು ಸರಕಾರ ಅವರೊಬ್ಬ ಮಹಾನ್ ದೇಶಪ್ರೇಮಿ ಎಂದು ಹೇಳುತ್ತದೆ. ಇದರಿಂದ ಮಕ್ಕಳು ದ್ವಂದ್ವದಲ್ಲಿ ಸಿಲುಕುತ್ತಿದ್ದಾರೆ. ಕಾರಣ ಪಠ್ಯಪುಸ್ತಕ ಸಲಹಾ ಸಮಿತಿ ಸ್ವಾಯತ್ವ ಸಂಸ್ಥೆಗೆ ವಹಿಸಿದಾಗ ಈ ಗೊಂದಲಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಮಕ್ಕಳ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ಅಭಿಪ್ರಾಯಪಟ್ಟರು.ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಡಿ.೨೩ರಂದು ಸ್ಥಳಿಯ ’ನಮ್ಮ ಗೆಳೆಯರ ಬಳಗ’ ಹಮ್ಮಿಕೊಂಡ ಗುರು ಸನ್ಮಾನ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇದೊಂದು ಭಾವೈಕ್ಯತೆಯ ವಿಶಿಷ್ಠ ಸಮ್ಮೇಳನವಾಗಿದ್ದು, ಇಲ್ಲಿ ಬೋಧಕರೊಂದಿಗೆ ಪೂರಕ ಕಾರ್ಯಗೈದ ಭೋಧಕೇತರ ಸಿಬ್ಬಂದಿಯನ್ನೂ ಗೌರವಿಸಿದ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದರು.ಜನ್ಮ ನೀಡಿದ ತಾಯಿ, ಬದುಕು ರೂಪಿಸಿದ ಶಿಕ್ಷಕ ಹಾಗೂ ಇವರಿಗೆ ಸೇತುವೆಯಾದ ತಂದೆ ಈ ಮೂವರನ್ನೂ ಮಕ್ಕಳು ಗೌರವಿಸಿದರೆ ಜೀವನ ಪಾವನ…
ವಿಜಯಪುರ: ಶಿಷ್ಯಂದಿರು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ, ಅದೇ ಗುರುವಿಗೆ ನೀಡುವ ಮಹತ್ವದ ಗುರುಕಾಣಿಕೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದ್ದಾರೆ.ವಿವಿಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಹೊಸ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಕಟ್ಟಡ ಸಭಾಂಗಣದಲ್ಲಿ ಶನಿವಾರ ನಡೆದ 1993ರಲ್ಲಿ ಎಂಬಿಬಿಎಸ್ ಪ್ರವೇಶಾತಿ ಪಡೆದ ಹಳೆಯ ವಿದ್ಯಾರ್ಥಿಗಳ 30ನೇ ವರ್ಷದ ಸ್ನೇಹ ಸಂಗಮ ಮತ್ತು ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಫಲಾಪೇಕ್ಷೆ ಇಲ್ಲದೇ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುದ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಪ್ರಶಂಸನೀಯ. ಪ್ರತಿ ಸ್ನೇಹ ಸಂಗಮದಲ್ಲೂ ಒಂದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೇ, ವಿವಿ ಆವರಣದಲ್ಲಿ ಅಲುಮ್ನಿ ಹಾಲ್ ನಿರ್ಮಿಸುವ ಯೋಜನೆಯಿದ್ದು, ಹಳೆಯ ವಿದ್ಯಾರ್ಥಿಗಳೆಲ್ಲರೂ ಉದಾರಿಯಾಗಿ ದೇಣಿಗೆ ನೀಡಿ, ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ಡಾ. ಅರುಣ ಇನಾಮದಾರ ಕೋರಿದರು.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ…
