ದೇವರಹಿಪ್ಪರಗಿ: ಕನ್ನಡಮ್ಮ ಹಾಗೂ ಸಾಹಿತ್ಯದ ಸೇವೆಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ನಾಡು, ನುಡಿ ಸೇವೆಗೆ ಬದ್ಧರಾಗಬೇಕು ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಜಿ.ಪಿ.ಬಿರಾದಾರ ಅವರನ್ನು ಅಭಿನಂದಿಸಿ ಮಾತನಾಡಿದರು.
ತಾಲ್ಲೂಕು ಘಟಕ ಹಿಂದಿನ ಅಧ್ಯಕ್ಷ ಕೆ.ಆರ್.ಕೊಕಟನೂರ ಸಾರಥ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಾ ಬಂದಿದೆ. ಈಗ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ ವಿನೂತನ ಕನ್ನಡಪರ ಕಾರ್ಯಗಳನ್ನು ಹಮ್ಮಿಕೊಂಡು ಕನ್ನಡ ಉಳಿಸಿ, ಬೆಳೆಸುವ ಕೆಲಸ ನಿರ್ವಹಿಸಲಿ. ಎಲ್ಲರ ಸಹಕಾರವಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ಶಿಕ್ಷಕ ಪಿ.ಕೆ.ಕುಲಕರ್ಣಿ, ಪಿ.ಎಸ್.ಮಿಂಚನಾಳ, ರಾಘವೇಂದ್ರ ಕುಲಕರ್ಣಿ ಮಾತನಾಡಿದರು.
ಶರಣ ಸಂಗಮ ತಾಲ್ಲೂಕು ಅಧ್ಯಕ್ಷ ಸಂಗಪ್ಪಣ್ಣ ತಡವಲ್, ತಾಲ್ಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಗುರುರಾಜ್ ಆಕಳವಾಡಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಸೋಮು ದೇವೂರ, ಶಿಕ್ಷಕರಾದ ಜಿ.ಬಿ.ಹೊಕ್ಕುಂಡಿ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ನಾಗಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ಎಸ್.ಜಿ.ತಾವರಖೇಡ, ಮುತ್ತು ಅಗ್ನಿ, ಪಿ.ಸಿ. ತಳಕೇರಿ, ಬಸವರಾಜ ಬಡಿಗೇರ, ರವಿ ಕೋಟಿನ್, ಸದಾನಂದ ಗುಡಿಮನಿ, ಅಣ್ಣು ಬಜಂತ್ರಿ, ಬಸವರಾಜ ಬಾವೂರ, ಎಸ್.ಎಮ್.ಸಾಲೋಟಗಿ, ಸುರೇಶ ಬೀರನಗಡ್ಡಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

