Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿಷ್ಯರಲ್ಲಿ ಧನ್ಯತಾ ಭಾವ, ಗುರುಗಳಲ್ಲಿ ಸಾರ್ಥಕ ಭಾವ
(ರಾಜ್ಯ ) ಜಿಲ್ಲೆ

ಶಿಷ್ಯರಲ್ಲಿ ಧನ್ಯತಾ ಭಾವ, ಗುರುಗಳಲ್ಲಿ ಸಾರ್ಥಕ ಭಾವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿಯಲ್ಲಿ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ | ೩೦-೪೦ ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ


*– ಶೈಲಾ ಮಣೂರ*
ವಿಜಯಪುರ: ಅದೊಂದು ಅಪರೂಪದ ಹೃದಯಸ್ಪರ್ಶಿ ಸಮಾರಂಭ. ೬೦-೮೦ ರ ಇಳಿ ವಯಸ್ಸಿನ ವೃದ್ದ ಗುರುವೃಂದ ೫೦ ರ ಪ್ರಾಯದ ಹೊಸ್ತಿಲಲ್ಲಿರುವ ಶಿಷ್ಯವೃಂದದ ಅಪರೂಪದ ಸಮಾಗಮ. ಸುಮಾರು ೩೦-೪೦ ವರ್ಷಗಳ ಬಳಿಕ ಇವರು ಪರಸ್ಪರ ಸಂಧಿಸುವ ಸುವರ್ಣಾವಕಾಶ ಒದಗಿಸಿದ್ದು ಈ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.
    ಡಿ.೨೩ ಶನಿವಾರ ಬೆಳಗ್ಗೆ ಎಲ್ಲ ಶಿಷ್ಯ ವೃಂದವು, ಕೂಡಿ ಕಲಿತು ಆಡಿ ನಲಿದ ’ನಮ್ಮ ಗೆಳೆಯರ ಬಳಗ’ ಸ್ಥಾಪಿಸಿ ಆ ಮೂಲಕ ತಮಗೆ ಅಕ್ಷರ ಜ್ಞಾನ ನೀಡಿದ, ಜೀವನ ಮೌಲ್ಯಗಳನ್ನು ತುಂಬಿ ತಮ್ಮ ಬದುಕು ರೂಪಿಸಿದ ಅಂದಿನ ಗುರುವೃಂದವನ್ನು ಸ್ವಾಗತಿಸಲು ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದ ದ್ವಾರಬಾಗಿಲಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾದು ನಿಂತಿದ್ದರು. ಒಬ್ಬೊಬ್ಬರಾಗಿ ಬಂದ ಗುರುಗಳನ್ನು ಅವರು ಗೌರವ, ಅಭಿಮಾನ, ಕಾಳಜಿಯಿಂದ ಅವರ ಕೈಹಿಡಿದು ನಿಧಾನಕ್ಕೆ ಒಳಗೆ ತೆರಳುತ್ತಿದ್ದರೆ, ಗುರು ವೃಂದ ಶಿಷ್ಯರನ್ನು ಅರಿಯುವುದರಲ್ಲಿ ತಲ್ಲೀನರಾಗಿದ್ದರು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ವಿಶ್ರಾತಿಯಲ್ಲಿರುವ, ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡ ವಯೋವೃದ್ದ ಶಿಕ್ಷಕ, ಶಿಕ್ಷಕಿಯರು ಸಹ ತಮ್ಮ ಒಂದು ಕಾಲದ ಶಿಷ್ಯರ ಪ್ರೀತಿಯ ಒತ್ತಡಕ್ಕೆ ಮಣಿದು ತಮ್ಮ ಆರೋಗ್ಯ ಲೆಕ್ಕಿಸದೆ ಆಗಮಿಸಿದ್ದರು. ತಮ್ಮ ನೆಚ್ಚಿನ ಈ ಎಲ್ಲ ಹಿರಿಯ ಜೀವಗಳಿಗೆ ಗೆಳೆಯರ ಬಳಗವು ಹೊಸ ಜಾಕೀಟು ತೊಡಿಸಿ ಸಂಭ್ರಮಿಸಿದರು. ಇಂತಹ ಉಡುಗೆಯನ್ನೆಂದೂ ಧರಿಸದ ಕೆಲ ಶಿಕ್ಷಕ/ಶಿಕ್ಷಕಿಯರು ನಿರಾಕರಿಸಿದರೂ ಶಿಷ್ಯರ ಪ್ರೀತಿಯ ಹಟಕ್ಕೆ ಕಟ್ಟುಬಿದ್ದು ಮಣಿಯಲೇಬೇಕಾಯಿತು.
ತಮ್ಮ ಗುರುಗಳ ಯೋಗಕ್ಷೇಮವನ್ನು ವಿಚಾರಿಸಲು ಮುಗಿಬಿದ್ದ ನೂರಾರು ಶಿಷ್ಯರ ಕಾಳಜಿಗೆ, ಅವರ ಆದರಾತಿಥ್ಯಕ್ಕೆ ಆ ಹಿರಿಯ ಜೀವಗಳ ಹೃದಯ ತುಂಬಿಬಂದಿತ್ತು. ಕಣ್ಣಂಚು ಹಸಿಯಾಗಿತ್ತು. ಅವರ ಮನಸ್ಸು ೮೦-೯೦ರ ದಶಕಕ್ಕೆ ಜಾರಿ ತಮ್ಮ ಶಿಷ್ಯರೊಂದಿಗಿನ ಪ್ರಸಂಗಗಳನ್ನು ಸ್ಮೃತಿಪಟಲದ ಮೇಲೆ ತರಲು ಪ್ರಯತ್ನಿಸುತ್ತಿತ್ತು.
ಬಾಲ್ಯದಲ್ಲಿ ತಮಗೆ ಅಕ್ಷರ ಕಲಿಸುತ್ತಾ ಧೈರ್ಯ ತುಂಬಿ ಮುನ್ನಡೆಸಿದ, ತಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸಿದ ಗುರುವೃಂದವನ್ನು ವೇದಿಕೆ ಮೇಲೆ ಕರೆದೋಯ್ದು, ಅವರ ಮೇಲೆ ಪುಷ್ಫವೃಷ್ಠಿಗೈದು ಸನ್ಮಾನಿಸಿ ಗೌರವಿಸಿ ಕಣ್ತುಂಬಿಕೊಂಡ ಎಲ್ಲ ಶಿಷ್ಯರ ಮೊಗದಲ್ಲಿ ಧನ್ಯತಾ ಭಾವ ಮೂಡಿದ್ದರೆ, ಶಿಷ್ಯರ ಪ್ರೀತಿಯ ಸುರಿಮಳೆಯಲ್ಲಿ ತೊಯ್ದು ತೊಪ್ಪೆಯಾದ ಗುರುಗಳೆಲ್ಲರ ಮೊಗದಲ್ಲಿ ಸಾರ್ಥಕತೆಯ ಭಾವ ಎದ್ದುಕಾಣುತ್ತಿತ್ತು.
ರಂಗನಾಥ ಥೋರ್ಪೆ, ಮುತ್ತು ಮುಂಡೇವಾಡಿ, ಬಸು ಹಿರೇಮಠ, ಸಂಜು ವಡ್ಡೊಡಗಿ, ವಿ.ಎಸ್.ಪಾಟೀಲ, ಪ್ರಕಾಶ ಚೌಧರಿ, ಸಂತೋಷ ಬಮ್ಮಣ್ಣಿ, ಗಿರೀಶ ನಾಗೂರ, ಶೈಲಾ ಮಣೂರ, ಸುಮಂಗಲಾ ಕೋಳೂರ, ಗಿರಿಜಾ ಸೊನ್ನದ, ಅರವಿಂದ ಹೂಗಾರ, ಡಾ.ರಾಜಶೇಖರ ಸಂಗಮ, ಕಾಶೀನಾಥ ಲೋಣಿ, ಮಲ್ಲನಗೌಡ ಬಿರಾದಾರ, ಈರಣ್ಣ ಚಾಗಶೆಟ್ಟಿ, ಶಿವಾನಂದ ಹಡಪದ, ಭಗವಂತ ರೇವೂರ, ರಮೇಶ ಹೂಗಾರ, ರುದ್ರಗೌಡ ಬಿರಾದಾರ, ಖಾದರ ಬಂಕಲಗಿ, ರಾಜು ಕೋಳಕೂರ ಸೇರಿದಂತೆ ’ನಮ್ಮ ಗೆಳೆಯರ ಬಳಗದ’ ನೂರಾರು ಗೆಳೆಯ – ಗೆಳತಿಯರು ಪಾಲ್ಗೊಂಡಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ನಾಟಕ ಕಲೆ ಉಳಿಸಿ-ಬೆಳೆಸುವುದು ಅಗತ್ಯ :ಡಾ.ಪ್ರಭುಗೌಡ
    In (ರಾಜ್ಯ ) ಜಿಲ್ಲೆ
  • ಉಳುವಿ ಪಾದಯಾತ್ರಿಗಳಿಗೆ ಸ್ವಾಗತ, ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಜಮೀನು ದಾರಿ ಸಮಸ್ಯೆ ಇತ್ಯರ್ಥ ಅಧಿಕಾರ ತಹಸೀಲ್ದಾರರಿಗಿರಲಿ
    In (ರಾಜ್ಯ ) ಜಿಲ್ಲೆ
  • ಅಭ್ಯಾಸವು ಪರಿಪೂರ್ಣ ವ್ಯಕ್ತಿಯನ್ನಾಗಿ ನಿರ್ಮಿಸುತ್ತದೆ :ಡಾ.ಗುಡಿ
    In (ರಾಜ್ಯ ) ಜಿಲ್ಲೆ
  • ಪಾರಂಪರಿಕ ಕಲೆಗಳ ಸಂರಕ್ಷಣೆ ಅಗತ್ಯ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.