Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿ ಯೋಜನೆಯ ನೊಂದಣಿ ಡಿಸೆಂಬರ್ ೨೬ ರಂದು ಪ್ರಾರಂಭವಾಗಿದ್ದು ಯೋಜನೆಗೆ ಅಭ್ಯರ್ಥಿಗಳು ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ ೨೦೨೩ರಲ್ಲಿ ತೇರ್ಗಡೆಯಾಗಿ ಫಲಿತಾಂಶ ಪ್ರಕಟಗೊಂಡ ೧೮೦ ದಿವಸದ ಒಳಗಡೆ ಕೆಲಸ ದೊರೆಯದ ನಿರುದ್ಯೋಗ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.ಪದವಿಧರರಿಗೆ ರೂ ೩೦೦೦ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ ೧೫೦೦ ಗಳನ್ನು ಮಾಸಿಕ ನಿರುದ್ಯೋಗ ಭತ್ಯಯನ್ನು ನೀಡಲಾಗುವುದು. ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗ ಭತ್ಯ ಪಡೆಯಲು ಅರ್ಜಿ ಸಲ್ಲಿಸುವವರು ೨೦೨೨-೨೩ ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ತೇರ್ಗಡೆಯಾದ ನಿರುದ್ಯೋಗ, ಯುವಕ ಹಾಗೂ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ದಯೋಗ, ಸ್ವಯಂ ಉದ್ದಯೋಗ ಮಾಡುತ್ತಿರುವ ಅಭ್ಯರ್ಥಿಗಳು ಹಾಗೂ ಪದವಿ /ಡಿಪ್ಲೋಮಾ ಮುಗಿದ ನಂತರ ಮುಂದಿನ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಬರುವುದಿಲ್ಲ.ಅರ್ಜಿಗಳನ್ನು sevasindhugs.karnataka.gov.in ಲಾಗಿನ್ ಆಗಿ ಅರ್ಜಿಗಳನ್ನು ಸಲ್ಲಿಸಬೇಕು.…
ವಿಜಯಪುರ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಬೆಲೆ ಸ್ಥಿರೀಕರಣ ಯೋಜನೆಯಡಿ ನ್ಯಾಫೆಡ್ ಸಂಸ್ಥೆಯವರು ತೊಗರಿ ಖರೀದಿಸುವ ಸಲುವಾಗಿ ವಿಜಯಪುರ ವ್ಯಾಪ್ತಿಯಲ್ಲಿ ೫೨ ತೊಗರಿ ಕೇಂದ್ರಗಳನ್ನು ತೆರೆಯಲಾಗಿದ್ದು ೨೦೨೩-೨೪ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರಿಂದ ಮಾರುಕಟ್ಟೆ ದರದಲ್ಲಿ ಮತ್ತು ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರಿದಿಸಲಾಗುತ್ತಿದೆ ರೈತರಿಂದ ಖರೀದಿಸಿದ ತೊಗರಿಗೆ, ರೈತರ ಖಾತೆಗೆ ಡಿ.ಬಿ.ಟಿ ಮೂಲಕ ಹಣ ಜಮೆ ಮಾಡಲಾಗುವುದು. ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರು ತೊಗರಿ ಮಾರಾಟ ಮಾಡಲು ನಾಫೇಡ್ ಸಂಸ್ಥೆಯವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ವತಿಯಿಂದ ನೊಂದಣಿ ಪ್ರಕೃಯೆ ಪ್ರಾರಂಬಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿಶಾಖಾ ವ್ಯವಸ್ಥಾಪಕರಾದ ಲಿಂಗರಾಜು .ಡಿ.ಎಮ್ ಮೋ.ಸಂಖ್ಯೆ ೯೪೪೯೮೬೪೪೫೨ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ಭವಿಷ್ಯದಲ್ಲಿ ಇನ್ನು ಎಲ್ಲ ವಾಹನಗಳು ಪೆಟ್ರೋಲಗಳದ್ದಾಗಿರುವುದಿಲ್ಲ. ನರೇಂದ್ರ ಮೋದಿಜೀ ಹಾಗೂ ನಿತಿನ್ ಗಡ್ಕರಿಯವರ ಪ್ರಯತ್ನದಿಂದ ಪೆಟ್ರೋಲ್ ಬದಲಾಗಿ ಎಥಿನಾಲ್ ಎಂಬ ಪೆಟ್ರೋಲ್ ಗೆ ಸಮನಾದ ದ್ರವ ಉಪಯೋಗಿಸುವ ಕಾಲ ಬಹಳ ಹತ್ತಿರದಲ್ಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನೂತನ ಕಾಂಪ್ಲೆಕ್ಸ್ನಲ್ಲಿ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್ ವಿಜಯಪುರ ಇವರ ೨೪*೭ ಸಿದ್ದೇಶ್ವರ ಮೆಡಿಕಲ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ದೇಶದಲ್ಲಿ ಬೆಳೆಯುವ ಕಬ್ಬು, ಮೆಕ್ಕೆಜೋಳ, ಅಕ್ಕಿಯಿಂದ ತಯಾರಾಗುವ ಎಥೆನಾಲ ತಯಾರಿಸಲಾಗುತ್ತದೆ. ಇದರಿಂದ ಬೇರೆ ದೇಶದಿಂದ ಒಂದು ಲಕ್ಷ ಕೋಟಿ ರೂಪಾಯಿ ಫಾರೆನ್ ಎಕ್ಸ್ಚೇಂಜ್ ಉಳಿತಾಯವಾಗಲಿದೆ ಎಂದರು.ಸಿದ್ಧಸಿರಿ ಮತ್ತು ಸಿದ್ದೇಶ್ವರ ಸಂಸ್ಥೆಗಳಿಂದ ಬರುವ ಲಾಭದಿಂದ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಗೆ ವರ್ಗಾಯಿಸಿ ೧೦೮ ಬೆಡ್‌ಗಳ ಜ್ಞಾನಯೋಗಿ ಸಿದ್ದೇಶ್ವರ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದೇವೆ. ಕಿಡ್ನಿ ಬದಲಾಯಿಸುವ ಸೌಕರ್ಯ ಕೂಡ ಈ ಆಸ್ಪತ್ರೆ ಹೊಂದಿದ್ದು, ಬೇರೆಡೆ ಕಿಡ್ನಿ…
’ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಸಮಾವೇಶದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಠನೆ ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು, ಮಾದಿಗರಿಗೆ ಮಿಸಲಾತಿ ಕೊಡಿಸುವ ಹಾಗೂ ಸಮಾಜಿಕ ನ್ಯಾಯ ಕೊಡಿಸುವ ಹೋರಾಟದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು ನಮ್ಮನ್ನು ಅಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮುಖ್ಯಮಂತ್ರಿ ನೀವು ನಮ್ಮವರು ಎಂದು ಮಾದಿಗರನ್ನು ಎಂದಿಗೂ ಅಪ್ಪಿಕೊಂಡು ಮಾತನಾಡಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದರು.ನಗರದ ಅಥಣಿ ರಸ್ತೆಯ ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ಸಾಯಿ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ’ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಸಮಾವೇಶದಲ್ಲಿ ಮಾತನಾಡಿದ ಅವರು, ಮಾದಿಗರ 30 ವರ್ಷದ ಹೋರಾಟಕ್ಕೆ ಜಯ ಸನಿಹದಲ್ಲಿ ಬಂದಿದೆ. ಕೇವಲ ಮಾದಿಗರಷ್ಟೇ ಅಲ್ಲ. 101 ಜನಾಂಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿದ್ದರಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮಿಸಲಾತಿಯಿಂದ ಭಜಂತ್ರಿ, ವಡ್ಡರ, ಲಂಬಾಣಿಗಳನ್ನು ತೆಗೆದು ಹಾಕುತ್ತಾರೆ ಎಂದು ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದರು.…
ಸಿಂದಗಿ: ಕ್ರೈಸ್ತ ಧರ್ಮವು ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಏಸು ಕ್ರಿಸ್ತನು ಶಾಂತಿ ಮತ್ತು ಪ್ರೀತಿಯನ್ನು ಧರೆಗಿಳಿಸಿದ ಮಹಾನ್ ವ್ಯಕ್ತಿ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.ಪಟ್ಟಣದ ಹೊರವಲಯದ ಲೋಯಲ್ ಶಾಲೆಯಲ್ಲಿ ಹಮ್ಮಿಕೊಂಡ ಅಂತರ್ ಧರ್ಮೀಯ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿಗೆ ಶಾಂತಿ, ಕ್ಷಮೆ, ಪ್ರೀತಿಯನ್ನು ಬೋಧಿಸಿರುವ ಏಸು ಕ್ರಿಸ್ತರ ತತ್ವಗಳು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಅವುಗಳನ್ನು ಅನುಸರಿಸಬೇಕು. ಅವರು ಬಯಸಿದ ಸಮಾಜವನ್ನು ನಿರ್ಮಿಸಬೇಕು ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಪವಿತ್ರಾ ಅಕ್ಕಾಜಿ ಅವರು ಮಾತನಾಡಿ, ಜಗತ್ತಿನ ಜನರು ಅಜ್ಞಾನದ ಹಾದಿ ಹಿಡಿದಾಗ ಸುಜ್ಞಾನವನ್ನು ಬೋಧಿಸಲು ಮಹಾನ್ ವ್ಯಕ್ತಿಗಳು ಜನ್ಮ ತಾಳುತ್ತಾರೆ ಎಂಬಂತೆ, ಜನರಿಗೆ ಸುಜ್ಞಾನವನ್ನು ಬೋಧಿಸಿ ಶಾಂತಿ ಸಾಮ್ರಾಜ್ಯ ನಿರ್ಮಾಣ ಮಾಡಲು ಏಸು ಕ್ರಿಸ್ತನು ಜನಿಸಿ ಬಂದರು. ನಾವೆಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಂಡು ಜೀವನವನ್ನು ಪಾವನವಾಗಿರಿಸಿಕೊಳ್ಳೋಣ ಎಂದು ಆಶೀರ್ವದಿಸಿದರು.ವೇದಿಕೆಯ ಮೇಲೆ…
ಸಿಂದಗಿ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದ ಕಲೋತ್ಸವ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾವಗೀತೆಯಲ್ಲಿ ಕಾವ್ಯಾ ನಾಯಕ್ ಪ್ರಥಮ ಸ್ಥಾನ ಹಾಗೂ ಮಧುರಾ ಹಿರೇಮಠ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಅಧ್ಯಕ್ಷ ಆರ್.ಡಿ ಕುಲಕರ್ಣಿ ನಿರ್ದೇಶಕ ಪಿ.ಡಿ ಕುಲಕರ್ಣಿ, ಮುಖ್ಯಗುರುಮಾತೆ ಎಸ್.ಐ. ಅಸ್ಕಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂಧಿ ಹರ್ಷವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಕ್ಕಳ ಬಳಗದ ಚಿಣ್ಣರ ನುಡಿಸಿರಿ-೪೭ ಗೆ ಚಾಲನೆ ನೀಡಿದ ಶಾಸಕ ಅಶೋಕ ಮನಗೂಳಿ ಅಭಿಮತ ಸಿಂದಗಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಅವರಿಗೆ ಸೂಕ್ತ ವೇದಿಕೆ ನೀಡಬೇಕು. ಸೂಕ್ತ ವೇದಿಕೆ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಸಭಾಭವನದಲ್ಲಿ ಸ್ಥಳಿಯ ಮಕ್ಕಳ ಬಳಗ ಸಿಂದಗಿ ಇವರು ಸರಕಾರಿ ಆದರ್ಶ ವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಚಿಣ್ಣರ ನುಡಿ ಸಿರಿ-೪೭ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹ.ಮ.ಪೂಜಾರ ಗುರುಗಳು ಶಿಕ್ಷಕ ವೃತ್ತಿಯ ಜೊತೆಗೆ ೧೯೭೬ರಲ್ಲಿ ಮಕ್ಕಳ ಬಳಗ ಕಟ್ಟುವ ಮೂಲಕ ಮಕ್ಕಳಿಗೆ ಸೂಕ್ತ ವೇದಿಕೆ ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗಿದ್ದಾರೆ. ಅವರು ಮಕ್ಕಳ ಬಳಗದ ಮೂಲಕ ಚಿಣ್ಣರ ನುಡಿ ಸಿರಿ, ಮಕ್ಕಳ ಹಬ್ಬ, ಮನೆ ಅಂಗಳದಲ್ಲಿ ಚಿಲಿಪಿ, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ, ವಿಜ್ಞಾನ ಮೇಳ, ಮಕ್ಕಳ ಸಾಹಿತ್ಯ ಸಮ್ಮೇಳನ ಮುಂತಾದ ವೇದಿಕೆ…
ವಿಜಯಪುರ: ರಾತ್ರಿಯಿಡಿ ಕರ್ತವ್ಯ ನಿರ್ವಹಿಸುವ ಜೊತೆಗೆ ನಸುಕಿನ ಜಾವ ನಡೆದ ವೃಕ್ಷೊಥಾನ್ ಹೆರಿಟೇಜ್ ರನ್ 2023ರ 21 ಕಿ. ಮೀ. ಓಟದಲ್ಲಿ ಪಾಲ್ಗೊಂಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಪೇದೆಯೊಬ್ಬರು ಕ್ರೀಡಾಭಿಮಾನ ಮೆರೆದಿದ್ದಾರೆ.ಹಳಗುಣಕಿ ಗ್ರಾಮದ ಮತ್ತು ವಿಜಯಪುರ ಮೀಸಲು ಪಡೆ ಪೊಲೀಸ್ ಪೇದೆ ಭೀಮಾಶಂಕರ ಮಾಡಗ್ಯಾಳ(38) ಡಿಸೆಂಬರ್ 23ರಿಂದ ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ, ಮರುದಿನ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ 21 ಕಿ. ಮೀ. ಮ್ಯಾರಾಥಾನ್ ಓಟದಲ್ಲಿ ಪಾಲ್ಗೋಂಡಿದ್ದಾರೆ. ಅಷ್ಟೇ ಅಲ್ಲ, ಈ ಓಟವನ್ನು 2 ಗಂಟೆ 30 ನಿಮಿಷ 39 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಅತ್ತಮ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಾಕ್ಷಿಯಾಗಿದ್ದಾರೆ ಮತ್ತು ಇತರರಿಗೆ ಸ್ಪೂರ್ತಿಯಾಗಿದ್ದಾರೆ.ಸೇವೆಯ ಜೊತೆಗೆ ಓಡುವ ಹವ್ಯಾಸ ಹೊಂದಿರುವ ಭೀಮಾಶಂಕರ ಮಾಡಗ್ಯಾಳ ಅವರನ್ನು ಇಂದು ಮಂಗಳವಾರ ನಗರದಲ್ಲಿ ವೃಕ್ಷೊಥಾನ್ ಹೆರಿಟೇಜ್ ರನ್- 2023 ಕೋರ್ ಕಮಿಟಿ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ ಅವರು,…
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಯಂಬತ್ನಾಳ ಗ್ರಾಮದ ಶ್ರೀ ಗೌರಿಶಂಕರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮಸ್ಥರ ಸೇವೆಗಾಗಿ ಡಿ.26 ಮಂಗಳವಾರ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯ ಡಾ. ಪ್ರಭುಗೌಡ ಬ ಲಿಂಗದಳ್ಳಿ, ಆರೋಗ್ಯಧಾಮ ಆಸ್ಪತ್ರೆಯ ಹೃದಯ ತಜ್ಞಡಾ.ಗೌತಮ್ ವಗ್ಗರ್, ನರರೋಗ ತಜ್ಞೆ ಡಾ.ಮೋನಿಕಾ ಆರ್ ನಾಯಕ್ ಡಾ. ಡಿ ವನ ಧರಿ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು, ಸುಮಾರು ಎರಡು ನೂರಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಿ ಉಚಿತ ಆರೋಗ್ಯ ಮಾಹಿತಿ ನೀಡಿ ಚಿಕಿತ್ಸೆಯನ್ನು ಒದಗಿಸಿದರು.ಕೊನೆಗೆ ಜಾತ್ರಾ ಸಮಿತಿಯ ಪರವಾಗಿ ಆರೋಗ್ಯ ಸೇವೆ ನೀಡಿದ ಎಲ್ಲ ವೈದ್ಯರನ್ನು ಅಭಿನಂದಿಸಲಾಯಿತು.
“ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ” ವಿಷಯದ ಗೋಷ್ಠಿಯಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅಭಿಮತ ವಿಜಯಪುರ: ಯಾರು ಸಮಯಕ್ಕೆ ಬೆಲೆ ಕೊಡುತ್ತಾರೊ ಅಂತಹವರನ್ನು ಇಡೀ ಜಗತ್ತೆ ಗುರುತಿಸುವಂತಹ ಸಮಯ ಬರುತ್ತದೆ ಎಂದು ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಹೇಳುತ್ತಿದ್ದರು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೪ನೇ ಗೋಷ್ಠಿಯಲ್ಲಿ ತಮ್ಮ ಅನುಭಾವದ ನುಡಿಗಳನ್ನಾಡಿದರು.ಜ್ಞಾನಯೋಗಾಶ್ರಮದಲ್ಲಿ ಮಾತ್ರ ಅಲ್ಲ, ಎಲ್ಲ ಭಕ್ತ ವೃಂದದ ಹೃದಯದಲ್ಲೂ ಶ್ರೀ ಸಿದ್ಧೇಶ್ವರ ಅಪ್ಪನವರು ನೆಲೆಸಿದ್ದಾರೆ. ಅವರು ನಮ್ಮನ್ನು ಅಗಲಿ ಎಷ್ಟು ಬೇಗ ಒಂದು ವರ್ಷ ಉರುಳಿತು ಗೊತ್ತೆ ಆಗಲಿಲ್ಲ. ಅದಕ್ಕೆ ಸಮಯ ಬಹಳ ಮುಖ್ಯವಾದದ್ದು ಅದನ್ನು ನಾವು ಅರಿತುಕೊಳ್ಳಬೇಕು ಎಂದರು.ಅವರ ಸಾನಿಧ್ಯವಹಿಸಿದ್ದಾಗ ಶಾಂತಿಯನ್ನು ಹುಡುಕುವ ಪ್ರಮೇಯ ಇರತಿರಲಿಲ್ಲ ಸಹಜವಾಗಿ ಆ ವಾತಾವರಣ ಶಾಂತವಾಗುತ್ತಿತ್ತು. ಅದು ಅಪ್ಪನವರ ವ್ಯಕ್ತಿತ್ವಕ್ಕೆ ಇದ್ದ ಶಕ್ತಿ. ಅವರ ಜೊತೆ ಐದು ನಿಮಿಷ ಮಾತನಾಡಿದರು ಸಾಕು,…
