ಮುದ್ದೇಬಿಹಾಳ: ಭವಿಷ್ಯದಲ್ಲಿ ಇನ್ನು ಎಲ್ಲ ವಾಹನಗಳು ಪೆಟ್ರೋಲಗಳದ್ದಾಗಿರುವುದಿಲ್ಲ. ನರೇಂದ್ರ ಮೋದಿಜೀ ಹಾಗೂ ನಿತಿನ್ ಗಡ್ಕರಿಯವರ ಪ್ರಯತ್ನದಿಂದ ಪೆಟ್ರೋಲ್ ಬದಲಾಗಿ ಎಥಿನಾಲ್ ಎಂಬ ಪೆಟ್ರೋಲ್ ಗೆ ಸಮನಾದ ದ್ರವ ಉಪಯೋಗಿಸುವ ಕಾಲ ಬಹಳ ಹತ್ತಿರದಲ್ಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನೂತನ ಕಾಂಪ್ಲೆಕ್ಸ್ನಲ್ಲಿ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್ ವಿಜಯಪುರ ಇವರ ೨೪*೭ ಸಿದ್ದೇಶ್ವರ ಮೆಡಿಕಲ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಬೆಳೆಯುವ ಕಬ್ಬು, ಮೆಕ್ಕೆಜೋಳ, ಅಕ್ಕಿಯಿಂದ ತಯಾರಾಗುವ ಎಥೆನಾಲ ತಯಾರಿಸಲಾಗುತ್ತದೆ. ಇದರಿಂದ ಬೇರೆ ದೇಶದಿಂದ ಒಂದು ಲಕ್ಷ ಕೋಟಿ ರೂಪಾಯಿ ಫಾರೆನ್ ಎಕ್ಸ್ಚೇಂಜ್ ಉಳಿತಾಯವಾಗಲಿದೆ ಎಂದರು.
ಸಿದ್ಧಸಿರಿ ಮತ್ತು ಸಿದ್ದೇಶ್ವರ ಸಂಸ್ಥೆಗಳಿಂದ ಬರುವ ಲಾಭದಿಂದ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಗೆ ವರ್ಗಾಯಿಸಿ ೧೦೮ ಬೆಡ್‌ಗಳ ಜ್ಞಾನಯೋಗಿ ಸಿದ್ದೇಶ್ವರ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದೇವೆ. ಕಿಡ್ನಿ ಬದಲಾಯಿಸುವ ಸೌಕರ್ಯ ಕೂಡ ಈ ಆಸ್ಪತ್ರೆ ಹೊಂದಿದ್ದು, ಬೇರೆಡೆ ಕಿಡ್ನಿ ಬದಲಾಯಿಸಲು ಸುಮಾರು ೨೫ರಿಂದ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ಕೇವಲ ೫ಲಕ್ಷ ರೂಪಾಯಿಗಳಲ್ಲಿ ಕಿಡ್ನಿ ಬದಲಾಯಿಸಿ ಬಡವರ ಸೇವೆ ನೀಡಲಾಗುತ್ತಿದೆ ಎಂದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಮಾತನಾಡಿ, ಔದ್ಯೋಗಿಕವಾಗಿ, ಶಿಕ್ಷಣ, ಬ್ಯಾಂಕಿಂಗ್ ಮತ್ತು ಔಷಧ ಕ್ಷೇತ್ರದಲ್ಲಿ ಇಡೀ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದ್ರೆ ಅದು ಸಿದ್ಧಸಿರಿ ಸಂಸ್ಥೆ. ಈ ಸಂಸ್ಥೆಯ ಔದ್ಯೋಗಿಕ ಕ್ರಾಂತಿ ಇದೇ ರೀತಿ ಮುಂದುವರೆಯಲಿ ಎಂದರು.
ಧಾರವಾಡ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.
ಜೆ.ಎಸ್‌ಎಸ್ ಹಾಸ್ಪಿಟಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ್, ಗಣ್ಯ ವ್ಯಾಪಾರಸ್ಥ ಬಸವರಾಜ ಮೋಟಗಿ, ಹಿರಿಯ ನ್ಯಾಯವಾದಿ ಎಂ.ಎಸ್.ನಾವದಗಿ, ಚಿಕ್ಕ ಮಕ್ಕಳ ತಜ್ಞ ಎಸ್.ಬಿ.ನಾಗೂರ, ಹಿರಿಯ ವೈದ್ಯ ಡಾ.ದಲಿಚಂದ ಓಸ್ವಾಲ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ದಿ ಕರ್ನಾಟಕ ಕೋಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
ಸಿದ್ಧಸಿರಿ ಸಂಸ್ಥೆಯಿಂದ ಔದ್ಯೋಗಿಕ ಕ್ರಾಂತಿ :ಚೆನ್ನವೀರ ಶ್ರೀ
Related Posts
Add A Comment

