ಸಿಂದಗಿ: ಕ್ರೈಸ್ತ ಧರ್ಮವು ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಏಸು ಕ್ರಿಸ್ತನು ಶಾಂತಿ ಮತ್ತು ಪ್ರೀತಿಯನ್ನು ಧರೆಗಿಳಿಸಿದ ಮಹಾನ್ ವ್ಯಕ್ತಿ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.
ಪಟ್ಟಣದ ಹೊರವಲಯದ ಲೋಯಲ್ ಶಾಲೆಯಲ್ಲಿ ಹಮ್ಮಿಕೊಂಡ ಅಂತರ್ ಧರ್ಮೀಯ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿಗೆ ಶಾಂತಿ, ಕ್ಷಮೆ, ಪ್ರೀತಿಯನ್ನು ಬೋಧಿಸಿರುವ ಏಸು ಕ್ರಿಸ್ತರ ತತ್ವಗಳು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಅವುಗಳನ್ನು ಅನುಸರಿಸಬೇಕು. ಅವರು ಬಯಸಿದ ಸಮಾಜವನ್ನು ನಿರ್ಮಿಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಪವಿತ್ರಾ ಅಕ್ಕಾಜಿ ಅವರು ಮಾತನಾಡಿ, ಜಗತ್ತಿನ ಜನರು ಅಜ್ಞಾನದ ಹಾದಿ ಹಿಡಿದಾಗ ಸುಜ್ಞಾನವನ್ನು ಬೋಧಿಸಲು ಮಹಾನ್ ವ್ಯಕ್ತಿಗಳು ಜನ್ಮ ತಾಳುತ್ತಾರೆ ಎಂಬಂತೆ, ಜನರಿಗೆ ಸುಜ್ಞಾನವನ್ನು ಬೋಧಿಸಿ ಶಾಂತಿ ಸಾಮ್ರಾಜ್ಯ ನಿರ್ಮಾಣ ಮಾಡಲು ಏಸು ಕ್ರಿಸ್ತನು ಜನಿಸಿ ಬಂದರು. ನಾವೆಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಂಡು ಜೀವನವನ್ನು ಪಾವನವಾಗಿರಿಸಿಕೊಳ್ಳೋಣ ಎಂದು ಆಶೀರ್ವದಿಸಿದರು.
ವೇದಿಕೆಯ ಮೇಲೆ ಇಸ್ಲಾಂ ಧರ್ಮದ ಪ್ರತಿನಿಧಿ ಜಿಲಾನಿ ನದಾಫ್, ಕ್ರೈಸ್ತ ಧರ್ಮದ ಪ್ರತಿನಿಧಿ ಫಾದರ್ ಜೀವನ ಡಿಸೋಜ, ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಾಲೆಯ ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

