Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾಲವಿನ್ನೂ ಪಕ್ವವಾಗಿಲ್ಲ | ಡಿ.29ರ ಸಭೆ ರದ್ದುಪಡಿಸಿ | ಮಾಜಿ ಎಂಎಲ್ಸಿ ಅರುಣ ಶಹಾಪುರ ಆರೋಪ ವಿಜಯಪುರ: ಇಂಡಿ ನೂತನ ಜಿಲ್ಲೆಯಾಗಲು ಕಾಲ ಇನ್ನೂ ಪಕ್ವವಾಗಿಲ್ಲ. ಹೀಗಾಗಿ ಡಿಸೆಂಬರ್ 29 ರಂದು ಈ ಕುರಿತು ಕರೆಯಲಾದ ಸಭೆಯನ್ನು ರದ್ದು ಪಡಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದ್ದಾರೆ.ಬುಧವಾರ ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ನೂತನ ಜಿಲ್ಲೆ ಮಾಡುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸಿಂದಗಿ ತಹಸೀಲ್ದಾರರು ಡಿಸೆಂಬರ್ 29 ರಂದು ಸಭೆ ಕರೆದಿದ್ದಾರೆ. ಇದು ಸರಿಯಲ್ಲ. ಸರಕಾರ ವಿಜಯಪುರ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಹೊಂದಿದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಮೂರು ಬಾರಿ ಇಂಡಿ ಶಾಸಕರಾದರೂ ಸಚಿವ ಸ್ಥಾನ ಮತ್ತು ಅಧಿಕಾರ ಸಿಗಲಿಲ್ಲ. ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ ಸಿಗುತ್ತಿಲ್ಲ. ಅಭಿವೃದ್ಧಿಗೂ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ರಾಜಕೀಯ ಹತಾಶೆಯಿಂದ ಇಂಥ ಗೊಂದಲ ಸೃಷ್ಟಿಸಿ ನೂತನ ಜಿಲ್ಲೆ ರಚನೆಯ ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು…
ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಡಿಸೆಂಬರ್ 29 ಶುಕ್ರವಾರದಂದು ಮಧ್ಯಾನ್ಹ 3 ಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಮಧ್ಯಾನ್ಹ 3ಕ್ಕೆ ಗ್ರಾಮದ ಕಲ್ಲಯಾರೂಢ ಮಠದಿಂದಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ ಜೊತೆಗೆ ಪುಸ್ತಕ ಕಟ್ಟುಗಳ ಮೆರವಣಿಗೆ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವದು.ಸಂಜೆ 5 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಶಾಲಾ ಆವರಣದಲ್ಲಿ ಗುರುನಮನ ಕಾರ್ಯಕ್ರಮ ಜರುಗಲಿದ್ದು, ನಾಗಠಾಣದ ಉದಯೆಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನಿಧ್ಯ ಮತ್ತು ಕಲ್ಲಯಾರೂಢ ಮಠದ ಶ್ರೀ ಪ್ರಜ್ಞಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಗುರುನಮನ ಸಲ್ಲಿಸುವರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಶಿಕ್ಷಕರು, ಪಾಲಕರು, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿರುವರು.ಮಕ್ಕಳಿಂದ ಪೂಜ್ಯಶ್ರೀಗಳ ಕುರಿತು ನಾಟಕ-ಹಾಡು ಜೊತೆಗೆ ದೀಪಗಳ ಪ್ರಜ್ವಲನ ನಂತರ ಮಹಾಪ್ರಸಾದ ಇರುತ್ತದೆ.…
ರೂ.೪೦ ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಕುರಿತಂತೆ ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಆಗ್ರಹ ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಾಲಘಟ್ಟದಲ್ಲಿ ೪೦ ಸಾವಿರ ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು, ಅಂಕಿ-ಸಂಖ್ಯೆಗಳನ್ನು ಆಧಾರವಾಗಿರಿಸಿಕೊಂಡು ಹೇಳಿರುವ ಯತ್ನಾಳ ಅವರನ್ನು ತನಿಖೆ ನಡೆಸಿದರೆ ಇನ್ನಷ್ಟು ಸತ್ಯಾಂಶ ಹೊರಬೀಳಲಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯತ್ನಾಳರು ಬಿಜೆಪಿ ಸರ್ಕಾರದ ಭಾಗವಾಗಿದ್ದರು, ಆಗ ಈ ಅವ್ಯವಹಾರದ ಬಗ್ಗೆ ಧ್ವನಿ ಏಕೆ ಎತ್ತಲಿಲ್ಲ? ನಿಮ್ಮ ಪಾಲು ಅದರಲ್ಲಿತ್ತೋ? ಅಥವಾ ಪಾಲು ಹಣ ಹಂಚಿಕೆಯಲ್ಲಿ ಧಕ್ಕೆಯಾಗಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದಿರೋ ಎಂದು ಯತ್ನಾಳರಿಗೆ ಸವಾಲು ಹಾಕಿದರು. ಯತ್ನಾಳರ ಬಗ್ಗೆ ಜನರಿಗೆ ಗೌರವವಿದೆ, ಅವರ ಈ ಗೌರವ ಇನ್ನೂ ಹೆಚ್ಚಾಗಬೇಕು, ಹೀಗಾಗಿ ಮೊದಲು ಚುನಾವಣೆಗೆ…
ಸಿದ್ದೇಶ್ವರ ಶ್ರೀ ಗುರುನಮನ | ಮಹಿಳೆ ಮತ್ತು ಸಂಸ್ಕೃತಿ ಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಮತ ವಿಜಯಪುರ: ಮಹಿಳೆ ಹೊರತಾಗಿ ಸಂಸ್ಕೃತಿ ಇಲ್ಲ, ಸಂಸ್ಕೃತಿ ಹೊರತಾಗಿ ಮಹಿಳೆ ಇಲ್ಲ. ಸಂಸ್ಕೃತಿ ಉಳಿದಿದ್ದು ಮಹಿಳೆಯಿಂದ, ಮಹಿಳೆ ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಬುಧವಾರ ಸಂಜೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆ ಮತ್ತು ಸಂಸ್ಕೃತಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ದೇಶದ ವೈಭವಪೂರಿತ ಇತಿಹಾಸವನ್ನು ನಾವು ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಮಹಿಳೆಯನ್ನು ಕೇವಲ ಹೆರೋಕೆ, ಲಾಲಿ ಹಾಡೋಕೆ, ಅಡುಗೆ ಮಾಡೋಕೆ ಸೀಮಿತ ಮಾಡಲಾಗಿದೆ. ಗಂಡ ಸತ್ತರೆ ಬದುಕಲು ಸಾಧ್ಯವೇ ಇಲ್ಲ ಎಂದು ಚಿತೆಗೆ ಹಾರಿ ಪ್ರಾಣ ಬಿಡುವ ಅನಿಷ್ಠ ಪದ್ಧತಿಯನ್ನು ಭಾರತ ಕಂಡಿದೆ. ಇಂದು ಹೆಣ್ಣು ಬದಲಾಗಿದ್ದಾಳೆ. ಪೈಲಟ್ ಆಗಿಯೂ ಸಾಧನೆ ಮಾಡಿದ್ದಾಳೆ, ಕೂಲಿ ಮಾಡಿಯೂ ಸಂಸಾರ ನಡೆಸುತ್ತಾಳೆ,…
ಜಯ್ ನುಡಿ ಜಯಶ್ರೀ.ಜೆ. ಅಬ್ಬಿಗೇರಿ,* ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಜೀವನವೆನ್ನುವುದು ಏರಿಳಿತಗಳಿಂದ ಕೂಡಿದೆ. ಅದು ಹೀಗೆ ಇರುತ್ತದೆ ಹೀಗೇ ಸಾಗುತ್ತದೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹೀಗಿದ್ದಾಗ್ಯೂ ಕೆಲವರು ಮಾತ್ರ ಏರಿಳಿತಗಳನ್ನು ಲೆಕ್ಕಿಸದೇ ತಾವು ಅಂದುಕೊಂಡಂತೆ ಗೆಲುವನ್ನು ದಾಖಲಿಸಿಯೇ ಬಿಡುತ್ತಾರೆ. ಒಮ್ಮೆಲೇ ಭರ‍್ರನೇ ಬೀಸುವ ಬಿರುಗಾಳಿಯಾಗಲಿ, ಮನಸ್ಸಿಗೆ ಮುದನೀಡುವ ತಂಗಾಳಿಯಾಗಲಿ ಅವರಿಗೆ ಯಾವುದೇ ವ್ಯತ್ಯಾಸ ತರುವುದಿಲ್ಲ. ಅದಕ್ಕೆ ಅವರು ಮೂಗಿನ ಮೇಲೆ ಬೆರಳಿಡುವ, ಅಚ್ಚರಿಯನ್ನು ಮೂಡಿಸುವ ಯಶಸ್ಸಿನ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಸೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವುಗಳಿಂದ ಪಾಠ ಕಲಿಯುತ್ತ ಗೆಲುವಿನ ಮಾರ್ಗದಲ್ಲಿ ನಡೆಯುತ್ತಾರೆ. ಹಾಗಾದರೆ ಗೆಲುವಿನ ಸರದಾರರಿಗೂ ಸೋತು ಸುಣ್ಣವಾಗುವ ವ್ಯಕ್ತಿಗಳಿಗೂ ಇರುವ ವ್ಯತ್ಯಾಸವಾದರೂ ಏನು? ಎನ್ನುವ ಪ್ರಶ್ನೆ ತಲೆಯಲ್ಲಿ ಸುಳಿಯುತ್ತದೆ. ಯಶಸ್ವಿ ವ್ಯಕ್ತಿಗಳು ಮತ್ತು ವಿಫಲ ವ್ಯಕ್ತಿಗಳನ್ನು ಪ್ರತ್ಯೇಕಿಸುವ ಅತ್ಯಂತ ಸ್ಪಷ್ಟವಾದ ಅಂಶಗಳು ಬಹಳಷ್ಟು ಇವೆ. ಅದರಲ್ಲಿ ಸ್ಥಿರತೆಯ ಶಕ್ತಿ ಪ್ರಮುಖವಾದುದು. ಯಶಸ್ವಿ ವ್ಯಕ್ತಿಗಳು ಅಸಾಧಾರಣ ಫಲಿತಾಂಶಗಳನ್ನು ಉಂಟು ಮಾಡಬಲ್ಲರು. ಏಕೆಂದರೆ ಅವರು ತಮ್ಮ ಯೋಜನೆಗಳನ್ನು ಅನುಸರಿಸಲು ಆಯ್ಕೆ…
ವಿಜಯಪುರ: ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಮತ್ತು ೨೦೨೪ರಲ್ಲಿ ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳಿಗೆ ಎಚ್‌ಸಿಎಲ್ ಟೆಕ್ನಾಲಜಿಸ್ ವತಿಯಿಂದ ೧೨ ತಿಂಗಳ ಉದ್ಯೋಗ ಆಧಾರಿತ ಟೆಕ್ ಬಿ ತರಬೇತಿ ಆಯೋಜಿಸಲಾಗಿದ್ದು, ಆಸಕ್ತ ಅಭ್ಯಥಿಗಳು ನೊಂದಾಯಿಸಿಕೊಳ್ಳುವAತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.ಎಚ್‌ಸಿಎಲ್ ಟೆಕ್ನಾಲಜಿ ಅವರು ಪರಿಣಿತಿ ಮತ್ತು ಉತ್ಸಾಹಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದೊಮದಿಗೆ ಒಡಂಬಡಿಕೆ ಮಾಡಿಕೊಂಡಿದೆ.ತರಬೇತಿಗೆ ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ೬ ತಿಂಗಳು ಕ್ಲಾಸ್‌ರೂಂ ತರಬೇತಿ ಮತ್ತು ೬ ತಿಂಗಳು ಇಂಟರ್ನಶಿಪ್ ತರಬೇತಿ ನೀಡಲಿದ್ದು, ಇಂಟರ್ನಶಿಪ್ ತರಬೇತಿ ಸಮಯದಲ್ಲಿ ತಿಂಗಳಿಗೆ ೧೦ ಸಾವಿರ ರೂ. ಸ್ಟೈಫಂಡ್ ನೀಡಲಾಗುವುದು. ನಂತರ ಹೆಚ್‌ಸಿಎಲ್ ಟೆಕ್ನಾಲಜಿಸ್‌ನಲ್ಲಿ ಉದ್ಯೋಗದ ಜೊತೆಯಲ್ಲಿ ಐಐಟಿ, ಐಐಐಟಿ, ಐಐಎಂ, ಬಿಐಟಿಎಸ್, ಪಿ ಸೇರಿದಂತ ವಿಶ್ವವಿದ್ಯಾಲಯಗಳಿಂದ ಉನ್ನತ ಶಿಕ್ಷಣಕ್ಕೆ ಅವಕಾಶ ಲಭಿಸಲಿದೆ.ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು http://bit.ly/TechBeeKSDC ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೮೭೨೨೭೯೦೩೪೦, ೯೮೪೫೪೫೪೪೭೧ ಸಂಖ್ಯೆಗೆ ಸಂಪರ್ಕಿಸುವAತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ೧೧೦/೧೧ ಕೆವ್ಹಿ ತಿಕೋಟ, ಹೊನವಾಡ,೩೩/೧೧ ಕೆವಿ ಬಿಜ್ಜರಗಿ ಹಾಗೂ ೧೧ ಕೆವಿ ಬೇಗಳ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸದರಿ ವಿದ್ಯುತ್ ಕೇಂದ್ರಗಳಿಂದ ಸರಬರಾಜಾಗುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಡಿ.೨೮ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪-೩೦ ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಡಿ.೨೭ರ ಬುಧವಾರದಂದು ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಕಾಯ್ದಿರಿಸಿದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಸುಮಾರು ೭೫ ಎಕರೆ ಭೂಮಿಯನ್ನು ಕರ್ನಾಟಕ ಆಹಾರ ನಿಯಮಿತ (ಫುಡ್ ಕರ್ನಾಟಕ ಲಿ.) ಸಂಸ್ಥೆಗೆ ಮೀಸಲಿಡಲಾಗಿದೆ. ಇಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಮೊದಲನೇ ಹಂತದಲ್ಲಿ ೨೫ ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಇಂಡಸ್ಟ್ರಿಯಲ್ ಫ್ಲಾಟ್‌ಗಳನ್ನು ತಯಾರಿಸಲಾಗುತ್ತದೆ. ಹಾಗೂ ಕೃಷಿ ಕೈಗಾರಿಕೆ ಮಾಡುವವರಿಗೂ ಸಹ ಅವಕಾಶ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ಮತ್ತು ಮೂರನೇ ಹಂತದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ ಬಳಸಿದ ನೀರನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತದೆ. ಹೀಗೆ ಮೂರು ಹಂತಗಳಲ್ಲಿ ಈ ಫುಡ್ ಪಾರ್ಕ್ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತದಲ್ಲಿ ರಸ್ತೆ…
ವಿಜಯಪುರ: ಕೋವಿಡ್-೧೯ ಉಪತಳಿ ಜೆಎನ್.೧ ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಅಗತ್ಯವಿರುವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಸೋಂಕು ಪತ್ತೆ, ಸೋಂಕಿತರ ಚಿಕಿತ್ಸೆ ವಿಶೇಷ ಘಟಕ, ಆಕ್ಸಿಜನ್ ಘಟಕ, ಔಷಧ ಸೇರಿದಂತೆ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ ಅವರುಕ, ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ತುರ್ತು ನಿಗಾ ಘಟಕ, ಉಪಕರಣಗಳ ಪರಿಶೀಲನೆ, ಆಕ್ಸಿಜನ್ ಸಿಲಿಂಡರ್ ಮಾಹಿತಿ, ಐಸಿಯುದಲ್ಲಿ ಇರುವ ಯಂತ್ರೋಪಕರಣಗಳು ಮತ್ತು ಔಷಧಗಳ ಲಭ್ಯತೆ ಕುರಿತು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅವರು ಸೂಚನೆ ನೀಡಿದ್ದಾರೆ.ಪ್ರಸ್ತುತ ಹವಾಮಾನ, ಚಳಿ, ವಾತಾವರಣ ಇರುವುದರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗುವುದರಿಂದ ಆರೋಗ್ಯ ಇಲಾಖೆ ಸೂಚನೆಗಳನ್ನು ಪಾಲಿಸಬೇಕು. ಹಿರಿಯ ನಾಗರಿಕರು, ದೀರ್ಘಕಾಲಿನ ಸಮಸ್ಯೆ ಹೊಂದಿರುವವರು, ಗರ್ಭೀಣಿಯರು, ಬಾಣಂತಿಯರು ಮನೆಯಿಂದ ಹೊರಗೆ ಹೋಗುವಾಗ, ಜನಸಂದಣಿ ಪ್ರದೇಶದಲ್ಲಿ ಮಾಸ್ಕ ಧರಿಸಬೇಕು. ಜ್ವರ,…
ಮುದ್ದೇಬಿಹಾಳ: ಪಟ್ಟಣದ ೧೮ ನೇ ವಾರ್ಡಿನ ಸದಸ್ಯ ಅಲ್ಲಾಭಕ್ಷ ಢವಳಗಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಬುಧವಾರ ಮತದಾನ ನಡೆಯಿತು.ಒಟ್ಟು ೧೧೧೨ ಮತದಾರರನ್ನು ಹೊಂದಿದ್ದ ವಾರ್ಡ ಗೆ ಒಟ್ಟು ೬ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ೪೨೪ ಗಂಡು ೪೦೨ ಹೆಣ್ಣು ಸೇರಿ ಒಟ್ಟು ೮೨೬(೭೪.೨೮) ಮತದಾನವಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಮತದಾನ ಮಾಡಲು ಬಂದಿದ್ದ ಅಂದಾಜು ೯೦ರ ವೃದ್ಧೆಗೆ ಯುವಕರು ಮತದಾನ ಕೇಂದ್ರದ ವರಗೆ ಕೈಹಿಡಿದು ಕರೆದುಕೊಂಡು ಹೋಗಿ ಸಹಕರಿಸಿದರು.ಸಹಾಯಕ ಚುನಾವಣಾ ಅಧಿಕಾರಿ ರಮೇಶ ಲಮಾಣಿ, ಪ್ರಿಸೈಡಿಂಗ್ ಅಧಿಕಾರಿ ಎಸ್.ಆರ್.ಪಾಟೀಲ ಸೇರಿದಂತೆ ಎಂ.ಬಿ.ಗುಡಗುಂಟಿ, ಎ.ಎಸ್.ಬಿರಾದಾರ, ಎಸ್.ಎನ್.ಕುಂಬಾರ ಕರ್ತವ್ಯದಲ್ಲಿದ್ದರು.
