ಮುದ್ದೇಬಿಹಾಳ: ಪಟ್ಟಣದ ೧೮ ನೇ ವಾರ್ಡಿನ ಸದಸ್ಯ ಅಲ್ಲಾಭಕ್ಷ ಢವಳಗಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಬುಧವಾರ ಮತದಾನ ನಡೆಯಿತು.
ಒಟ್ಟು ೧೧೧೨ ಮತದಾರರನ್ನು ಹೊಂದಿದ್ದ ವಾರ್ಡ ಗೆ ಒಟ್ಟು ೬ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ೪೨೪ ಗಂಡು ೪೦೨ ಹೆಣ್ಣು ಸೇರಿ ಒಟ್ಟು ೮೨೬(೭೪.೨೮) ಮತದಾನವಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಮತದಾನ ಮಾಡಲು ಬಂದಿದ್ದ ಅಂದಾಜು ೯೦ರ ವೃದ್ಧೆಗೆ ಯುವಕರು ಮತದಾನ ಕೇಂದ್ರದ ವರಗೆ ಕೈಹಿಡಿದು ಕರೆದುಕೊಂಡು ಹೋಗಿ ಸಹಕರಿಸಿದರು.
ಸಹಾಯಕ ಚುನಾವಣಾ ಅಧಿಕಾರಿ ರಮೇಶ ಲಮಾಣಿ, ಪ್ರಿಸೈಡಿಂಗ್ ಅಧಿಕಾರಿ ಎಸ್.ಆರ್.ಪಾಟೀಲ ಸೇರಿದಂತೆ ಎಂ.ಬಿ.ಗುಡಗುಂಟಿ, ಎ.ಎಸ್.ಬಿರಾದಾರ, ಎಸ್.ಎನ್.ಕುಂಬಾರ ಕರ್ತವ್ಯದಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

