ವಿಜಯಪುರ: ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಮತ್ತು ೨೦೨೪ರಲ್ಲಿ ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳಿಗೆ ಎಚ್‌ಸಿಎಲ್ ಟೆಕ್ನಾಲಜಿಸ್ ವತಿಯಿಂದ ೧೨ ತಿಂಗಳ ಉದ್ಯೋಗ ಆಧಾರಿತ ಟೆಕ್ ಬಿ ತರಬೇತಿ ಆಯೋಜಿಸಲಾಗಿದ್ದು, ಆಸಕ್ತ ಅಭ್ಯಥಿಗಳು ನೊಂದಾಯಿಸಿಕೊಳ್ಳುವAತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್‌ಸಿಎಲ್ ಟೆಕ್ನಾಲಜಿ ಅವರು ಪರಿಣಿತಿ ಮತ್ತು ಉತ್ಸಾಹಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದೊಮದಿಗೆ ಒಡಂಬಡಿಕೆ ಮಾಡಿಕೊಂಡಿದೆ.ತರಬೇತಿಗೆ ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ೬ ತಿಂಗಳು ಕ್ಲಾಸ್‌ರೂಂ ತರಬೇತಿ ಮತ್ತು ೬ ತಿಂಗಳು ಇಂಟರ್ನಶಿಪ್ ತರಬೇತಿ ನೀಡಲಿದ್ದು, ಇಂಟರ್ನಶಿಪ್ ತರಬೇತಿ ಸಮಯದಲ್ಲಿ ತಿಂಗಳಿಗೆ ೧೦ ಸಾವಿರ ರೂ. ಸ್ಟೈಫಂಡ್ ನೀಡಲಾಗುವುದು. ನಂತರ ಹೆಚ್‌ಸಿಎಲ್ ಟೆಕ್ನಾಲಜಿಸ್‌ನಲ್ಲಿ ಉದ್ಯೋಗದ ಜೊತೆಯಲ್ಲಿ ಐಐಟಿ, ಐಐಐಟಿ, ಐಐಎಂ, ಬಿಐಟಿಎಸ್, ಪಿ ಸೇರಿದಂತ ವಿಶ್ವವಿದ್ಯಾಲಯಗಳಿಂದ ಉನ್ನತ ಶಿಕ್ಷಣಕ್ಕೆ ಅವಕಾಶ ಲಭಿಸಲಿದೆ.
ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು http://bit.ly/TechBeeKSDC ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೮೭೨೨೭೯೦೩೪೦, ೯೮೪೫೪೫೪೪೭೧ ಸಂಖ್ಯೆಗೆ ಸಂಪರ್ಕಿಸುವAತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
