Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷ ಹಾಗೂ ಸಮಾಜ ಸೇವಕ ಶ್ರೀಶೈಲಪ್ಪ ಆಯ್. ಜೋಗೂರ ರವರಿಗೆ ಮೈಸೂರಿನ ಕನ್ನಡ ಸಾಹಿತ್ಯ ಭವನದ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಸಮ್ಮೇಳನದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿಯನ್ನು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್(ರಿ.) ಕರ್ನಾಟಕನ ಸಂಸ್ಥಾಪಕ ಅಧ್ಯಕ್ಷರು ಡಾ.ಜಿ.ಶಿವಣ್ಣ , ಚಲನಚಿತ್ರ ನಟರು, ನಾಡು ನುಡಿ ಚಿಂತಕರು ಡಾ.ಚಿಕ್ಕಹೆಜ್ಜಾಜಿ ಮಹದೇವ, ಡಾ.ಆರೂಢ ಭಾರತೀ ಸ್ವಾಮಿಗಳು, ಸಮ್ಮೇಳನದ ಸರ್ವಾಧ್ಯಕ್ಷರು ಪಂಡಿತ ಅವಜಿ , ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರು ಮಡ್ಡಿಕೇರೆ ಗೋಪಾಲ ,ಚೇತನ ಫೌಂಡೇಶನ್ ನ ಅಧ್ಯಕ್ಷರು ಡಾ.ಚಂದ್ರಶೇಖರ ಮಾಡಲಗೇರಿ, ದತ್ತಿ ದಾನಿಗಳು ಲೂಸಿ ಸಾಲ್ಡಾನ ವಿತರಿಸಿದರು.ಪ್ರಶಸ್ತಿ ಸ್ವೀಕರಿಸಿದಕ್ಕಾಗಿ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಬಡದಾಳ, ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ಸದಸ್ಯರಾದ ಅಲೋಕ ಬಡದಾಳ, ಅಶೋಕ ವಾರದ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ , ಶಿಕ್ಷಕರಾದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪಿ.ಯು ದ್ವಿತೀಯ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹೊಕ್ಕುಂಡಿ ಶಿಕ್ಷಣಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕ ಗಳಿಸಿ ಶೇ. ೯೫ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಚೈತ್ರಾ ಮಡ್ಡೆಪ್ಪಗೋಳ (ಶೇ ೯೦) ದ್ವಿತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನೀಯರ ಸಾಧನೆಗೆ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವ | ಧರ್ಮಸಭೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನಿಸ್ವಾರ್ಥ ಕಾಯಕ ನಮ್ಮನ್ನು ನಾಯಕರನ್ನಾಗಿಸುತ್ತದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ನಿಸ್ವಾರ್ಥವೆಂಬುದು ಧರ್ಮವಾಗಿದ್ದು, ಸ್ವಾರ್ಥವೆಂಬುದು ಅಧರ್ಮವಾಗಿದೆ. ಸ್ವಾರ್ಥವನ್ನು ತೆಗೆದುಹಾಕಿ ಎಲ್ಲರೂ ಸಾರ್ಥಕವಾದ ಜೀವನವನ್ನು ನಡೆಸಬೇಕು ಎಂದರು.ಕಡಗಂಚಿಯ ಸಾವಿರದೇವರ ಸಂಸ್ಥಾನ ಮಠದ ವೀರಭದ್ರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಸೋಮೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಅಯ್ಯಪ್ಪಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಸುಮಂಗಲೆಯರಿಂದ ಕುಂಭ ಕಳಶ,ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳ ಭವ್ಯವಾದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಿತು.ಸಿಂದಗಿ ಡಾ.ಪ್ರಭುಸಾರಂಗದೇವಶ್ರೀ, ಆಲಮೇಲ ಚಂದ್ರಶೇಖರಶ್ರೀ , ಬಸವನಬಾಗೇವಾಡಿ ಶಿವಪ್ರಕಾಶಶ್ರೀ, ಯಂಕಂಚಿ ಅಭಿನವ ರುದ್ರಮುನಿಶ್ರೀ, ದೇವರಹಿಪ್ಪರಗಿಯ ವೀರಗಂಗಾಧರಶ್ರೀ , ಸಿಂದಗಿಯ ವಿಶ್ವಪ್ರಭುಶ್ರೀ, ಕನ್ನೊಳ್ಳಿಯ ಸಿದ್ದಲಿಂಗಶ್ರೀ, ಮುಳಸಾವಳಗಿಯ ದಯಾನಂದ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ ೭೭.೯೯ ಸಾಧನೆ ಮಾಡಿದ್ದಾರೆ.ಕಲಾ ವಿಭಾಗದಲ್ಲಿ ಅಕ್ಷತಾ ರಡ್ಡಿ( ಶೇ ೯೫.೧೬), ಅಕ್ಷತಾ ಕುಂಬಾರ(ಶೇ ೯೫), ಸೌಮ್ಯಾ ಗೌಂಡಿ(ಶೇ ೯೪.೮೩), ವಾಣಿಜ್ಯ ವಿಭಾಗದಲ್ಲಿ ರೋಹಿಣಿ ಪೂಜಾರಿ(ಶೇ ೯೬.೧೬), ಸುಪ್ರೀಯಾ ಜನಗೊಂಡ (ಶೇ ೯೫), ಲಕ್ಷ್ಮಿ ಹೊಕ್ಕೊಂಡಿ (ಶೇ ೯೪.೫) ಉತ್ತಮ ಫಲಿತಾಂಶದೊಂದಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನೀಯರ ಸಾಧನೆಗೆ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೌಶಲ್ಯಾಭಿವೃದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಕಲಬುರಗಿಯ ಖಮರುಲ್ ಇಸಾಂ ಕಾಲೋನಿ, ರಿಂಗ್ ರಸ್ತೆಯ ಕೆ.ಸಿ.ಟಿ.ಕಾಲೇಜ್ ಕ್ಯಾಂಪಸ್ನಲ್ಲಿ ಏ.೧೬ರಂದು ಜರುಗುವ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ಹಾಗೂ ಏ.೧೬ರೀದಮ ೧೮ರವರೆಗೆ ಕೂಡಲಸಂಗದಲ್ಲಿ ಜರುಗು ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗಿದೆ.ಏ.೧೫ರಂದು ನಡೆಯುವ ಉದ್ಯೋಗ ಮೇಳಕ್ಕೆ ವಿಜಯಪುರ ವಿಭಾಗದ ತಾಲೂಕಾ ಮುಖ್ಯ ಬಸ್ ನಿಲ್ದಾಣಗಳಿಂದ ಕಲಬುರಗಿಗೆ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಹಾಗೂ ಕೂಡಲ ಸಂಗಮದಲ್ಲಿ ಏ.೧೬ರಿಂದ ೧೮ರವರೆಗೆ ಜರುಗುವ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರ, ಮುದ್ದೇಬಿಹಾಳ ತಾಳಿಕೋಟೆ ಹಾಗೂ ಬ.ಬಾಗೇವಾಡಿಯಿಂದ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-೧ ಮೊ: ೭೭೬೦೯೯೨೨೬೩, ಘಟಕ-೨…
ಏ.೧೫ ರಂದು ಕನ್ನಡ ಭಾಷಾ ಪರೀಕ್ಷೆ- ಏ.೧೬ ಹಾಗೂ ೧೭ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಏ.೧೫ ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ ವಿವಿಧ ವೃತ್ತಿಪರ ಕೋರ್ಸಗಳ ಪ್ರವೇಶಾತಿಗೆ ಇದೇ ಏಪ್ರಿಲ್ ೧೬ ರಿಂದ ೧೭ ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು (ಸಿಇಟಿ) ಜಿಲ್ಲೆಯ ೩೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿ ಇ ಟಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಒಟ್ಟು ೩೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು ೧೩,೬೨೯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.ಏ.೧೫ರ ಮಂಗಳವಾರ ಬೆಳಿಗ್ಗೆ ೧೦:೩೦ ರಿಂದ ೧೧:೩೦ರವರೆಗೆ ಹೊರನಾಡ ಮತ್ತು ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ವೃತ್ತಿಪರ ಕೋರ್ಸ್ಗಳ…
ಸರ್ಕಾರದ ಮಹತ್ವಾಕಾಂಕ್ಷಿ ಭೂ ಸುರಕ್ಷಾ ಯೋಜನೆ | ಕಂದಾಯ ಇಲಾಖೆಯ ಆಯುಕ್ತ ಪಿ.ಸುನೀಲ ಕುಮಾರ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರಿಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಯುಕ್ತರಾದ ಪಿ.ಸುನೀಲ ಕುಮಾರ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರತಿದಿನ ಒಬ್ಬ ಆಪರೇಟರ್ ಒಂದು ಸಾವಿರದಿಂದ ೨ ಸಾವಿರದಷ್ಟು ದಾಖಲಿಕರಣ ಕಾರ್ಯ ತ್ವರಿತಗೊಳಿಸುವ ಮೂಲಕ ದಾಖಲೀಕರಣ ಕಾರ್ಯಕ್ಕೆ ವೇಗ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಹಾಗೂ ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲಿಕರಣ ನೆರವಾಗುತ್ತದೆ ಎಂದು ಅವರು ಹೇಳಿದರು.ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು, ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಬಡತನದಲ್ಲಿ ಕಷ್ಟಪಟ್ಟು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.92.83 ರಷ್ಟು ಅಂಕ ಪಡೆದು ಗ್ರಾಮೀಣ ಭಾಗದ ತಾಲ್ಲೂಕಿನ ಬಾಬಾನಗರ ಗ್ರಾಮದ ಶಿಲ್ಪಾ ಲಕ್ಕಣ್ಣ ತಳವಾರ ಎಂಬ ವಿಧ್ಯಾರ್ಥಿನಿ ಸಾಧನೆ ಮಾಡಿದ್ದಾರೆ.ಐದನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೆಕುರುಬರ ವಸ್ತಿ ಬಾಬಾನಗರ, ಆರರಿಂದ ಹತ್ತನೆ ತರಗತಿಯನ್ನು ಆದರ್ಶ ವಿದ್ಯಾಲಯ ಕಗ್ಗೋಡ, ಪಿಯುಸಿ ವಿಜ್ಞಾನ ವಿಭಾಗ ವಿಜಯಪುರದ ಬೆನಕಟ್ಟಿ ಕಾಲೇಜಿನಲ್ಲಿ ಪೂರೈಸಿದ್ದಾರೆ.ಕಡುಬಡತನದಲ್ಲಿ ಹಳ್ಳಿಯಲ್ಲಿಯೇ ಕಲಿತು ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಕುಟುಂಬಸ್ಥರು, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ರಥೋತ್ಸವ | ನಾಳೆ ಪಲ್ಲಕ್ಕಿ ಉತ್ಸವ | ಹಿಂದು-ಮುಸ್ಲಿಂ ಸೌಹಾರ್ದದ ಪ್ರತಿಬಿಂಬ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್.ಎಮ್.ಇಟ್ಟಿಜಮಖಂಡಿ: ತಾಲೂಕಿನ ತುಬಚಿ ಗ್ರಾಮ ಹಿಂದು ಮುಸ್ಲಿಮರ ಸಮನ್ವಯತೆಗೆ ಖ್ಯಾತಿ ಹೊಂದಿದೆ. ಧಾರ್ಮಿಕವಾಗಿ ಗ್ರಾಮಕ್ಕೆ ಸುಕ್ಷೇತ್ರದ ಸ್ಥಾನಮಾನ ಕಲ್ಪಿಸಿದ ಪವಾಡ ಪುರುಷ ಶಿವಲಿಂಗೇಶ್ವರರ ರಥೋತ್ಸವ ಇಂದು ಸಂಜೆ 7 ಗಂಟೆಗೆ ನಡೆಯಲಿದೆ.ಡಾ. ಅಲ್ಲಮ್ಮಪ್ರಭು ಸ್ವಾಮಿಗಳು ನಾಗನೂರಮಠ (ಸಾವಳಗೇಶ ದೇವರು ವಿರಕ್ತಮಠ ತುಬಚಿ ಇವರ ನೇತೄತ್ವದಲ್ಲಿ ಏ.13 ರಂದು ಬೆಳ್ಳಿಗ್ಗೆ 11 ಗಂಟೆಗೆ ಪಲ್ಲಕ್ಕಿ ಉತ್ಸವ ಸಕಲ ವೈಭವಗಳೊಂದಿಗೆ ನಡೆಯಲಿದೆ.ಮಠದ ವಿಶೇಷ: ಮೂರು ಅಂತಸ್ತಿನ ಶಿವಲಿಂಗೇಶ್ವರ ಮಠ ಭಾವೈಕ್ಯ ಕೇಂದ್ರವಾಗಿದೆ. ಮಠದ ಕಟ್ಟಡ ಮೇಲಿರುವ ಗೋಪುರಕ್ಕೆ ಹೋಗಲು 12 ಮೆಟ್ಟಿಲುಗಳಿವೆ. ಮೂರನೇ ಅಂತಸ್ತು ಮುಸ್ಲಿಂ ದರ್ಗಾದ ಮಿನಾರ್ ರೂಪದಲ್ಲಿದೆ. ಮಧ್ಯದ ಅಂತಸ್ತಿನಲ್ಲಿ ಶಿವಲಿಂಗೇಶ್ವರರ ಅನುಷ್ಠಾನದ ಆಸನ ಸಹಿತ ಗದ್ದುಗೆ ಇದೆ. ಅದರ ಮೇಲೆ ಶ್ರೀಗಳ ಇಷ್ಟಲಿಂಗ ಇಡಲಾಗಿದೆ. ನೆಲಮನೆ ಅತ್ಯಂತ ಆಕರ್ಷಕವಾಗಿದೆ. ಗವಿ ರೂಪದಲ್ಲಿರುವ ನೆಲಮನೆಯ ಹದಿನಾಲ್ಕು ಮೆಟ್ಟಿಲುಗಳನ್ನು ಇಳಿದು ಒಳಗೆ ಪ್ರವೇಶಿಸಿ ನೋಡಿದರೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮಾಜಿಕ ನೆರವು ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮ ಕುಂದು-ಕೊರತೆಗಳನ್ನು ನೋಂದಾಯಿಸಲು,ಪಿಂಚಣಿ ಕುರಿತ ಮಾಹಿತಿ ಪಡೆಯಲು ಹಾಗೂ ಮಾಹಿತಿ ಹಂಚಿಕೊಳ್ಳಲು ಜಿಲ್ಲೆಯ ೧೩ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಒಂದು ಬಾರಿ ಪಿಂಚಣಿ ದಿನವನ್ನು ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಯಶಸ್ವಿಯಾಗಿ ಏಪ್ರಿಲ್ ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ೧೩ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ತಿಳಿಸಿದ್ದಾರೆ.ಅಂದು ಬೆಳಗ್ಗೆ ೧೧ ಗಂಟೆಗೆ ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ನಾಗಠಾಣ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ್ ಅವರು ಅರ್ಜುಣಗಿ ಗ್ರಾಮ ಪಂಚಾಯತಿಯಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಲೋಹಗಾಂವ ಗ್ರಾಮ ಪಂಚಾಯತಿಯ ಕಾರ್ಯಾಲಯದ ಸಮುದಾಯ ಭವನದಲ್ಲಿ,ಬಸವನ ಬಾಗೇವಾಡಿ ತಹಸೀಲ್ದಾರ್ ಗ್ರೇಡ್-೨ ಅವರು ಇವಣಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಬಳಬಟ್ಟಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ,…