Author: editor.udayarashmi@gmail.com

ವಿಜಯಪುರ: ತಹಶೀಲ್ದಾರ್ ಗ್ರೇಡ್-೨ ಹುದ್ದೆಗಳನ್ನು ರದ್ದುಪಡಿಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ರಾಜಾಪುರ, ಪ್ರಧಾನ ಕಾರ್ಯದರ್ಶಿ ಜಿ.ಪಿ.ದೋಬಳೆ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ದ್ವಿ.ದ.ಸ ಸಂಘದ ಅಧ್ಯಕ್ಷ ಪ್ರಕಾಶ ಮಸೂತಿ, ವಿಲಾಸ ಪವಾರ ಶಿರಸ್ತೇದಾರರರಾದ ಎಸ್.ಎಸ್.ತೇರದಾಳ, ದಯಾನಂದ ಕಟ್ಟಿಮನಿ ಮಹಿಪತಿ ದೇಸಾಯಿ ಸೇರಿದಂತೆ ಕಂದಾಯ ಇಲಾಖೆ ನೌಕರ ಸಿಬ್ಬಂದಿ ಹಾಜರಿದ್ದರು.

Read More

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಎಂದರೇನು??!!ಡಿಸೆಂಬರ್ ನ ಕೊನೆಯ ದಿನವೇ,,,? ಜನವರಿಯ ಮೊದಲ ದಿನವೇ? ಹಳೆಯ ಕ್ಯಾಲೆಂಡರ್ ತನ್ನ ಅಸ್ಮಿತೆಯನ್ನು ಕಳೆದುಕೊಂಡು ರದ್ದಿ ಪುಸ್ತಕಗಳಲ್ಲಿ ಜಾಗೆ ಕಂಡುಕೊಂಡಿದ್ದೇ?? ಹೊಸ ಕ್ಯಾಲೆಂಡರ್ ನಡು ಮನೆಯ ಗೋಡೆಯನ್ನು ಅಲಂಕರಿಸಿದ್ದೇ?? ಅಥವಾ ಋತು ಬದಲಾವಣೆಯಾಗಿ ನಿಸರ್ಗ ಸಹಜವಾಗಿ ಮಾಮರದಲ್ಲಿ ಎಲೆ ಚಿಗುರಿ, ಕೋಗಿಲೆಗಳು ಕೂಗಿ, ವಸಂತನ ಆಗಮನವನ್ನು ಸಾರುವ ದಿನವೇ? ನಿಜವಾದ ಅರ್ಥದಲ್ಲಿ ಭಾರತೀಯರಾದ ನಮಗೆ ಋತುಮಾನಗಳ ಚರ್ಯೆಯ ಮೇಲೆ ಬದಲಾಗುವ ಮಾಸಗಳಲ್ಲಿ ವಸಂತ ಮಾಸ ಪ್ರಾರಂಭವಾಗುವ ಯುಗಾದಿಯ ದಿನವೇ ನಮ್ಮ ನಿಜವಾದ ಹೊಸ ವರುಷ. ಆದರೆ ಜಾಗತೀಕರಣದ ಈ ಪ್ರವಾಹದಲ್ಲಿ ನಾವು ಕೂಡ ತೇಲುತ್ತಿದ್ದೇವೆ ಆದ್ದರಿಂದ ಇಡೀ ವಿಶ್ವದಲ್ಲಿ ಆಚರಿಸುವ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ಹಳೆ ವರ್ಷವನ್ನು ಹಿಂದಟ್ಟಿ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. . ನಿನ್ನೆ ಎಂಬುದು ಕಳೆದು ಹೋಗಿದೆ. ನಾಳೆಯನ್ನು ಕಂಡವರಾರು?? ಇಂದಿನ ದಿನ ನಮ್ಮ ಕಣ್ಣ ಮುಂದೆ…

Read More

ವಿಜಯಪುರ: ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಜೀವನವೇ ಒಂದು ಮಾದರಿಯಾಗಿದ್ದು, ನುಡಿದಂತೆ ನಡೆದ ಮಹಾನುಭವಿಯಾಗಿದ್ದಾರೆ. ಇಂತಹ ಮಹಾನ್ ಚೇತನರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೊಣ ಎಂದು ಶ್ರೇಷ್ಠ ವಾಗ್ಮಿ, ಉಪನ್ಯಾಸಕ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.ಶನಿವಾರ ನಗರದ ಜಲನಗರ ಸರಕಾರಿ ಪ್ರೌಡಶಾಲಾ ಆವರಣದಲ್ಲಿ ಅಮ್ಮ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಸಿದ್ದೇಶ್ವರ ಶ್ರೀಗಳು ಶ್ರೇಷ್ಠ ತತ್ವಜ್ಞಾನಿಯಾಗಿದ್ದು, ಆಡಂಬರ ಜೀವನಕ್ಕೆ ತಿಲಾಂಜಲಿ ನೀಡಿದ್ದರು. ಎಲ್ಲವೂ ಬೇಡ ಎನ್ನುತ್ತಲೇ ಅತ್ಯಂತ ಸಾದಾ ಜೀವನ ಸಾಗಿಸಿ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ಆಚಾರ ವಿಚಾರ, ನಡೆ ನುಡಿ, ತತ್ವಗಳ ಮಾನವಕುಲಕ್ಕೆ ಮಾದರಿಯಾಗಿವೆ. ಪ್ರಮುಖವಾಗಿ ಹೇಳಿದ, ನಿಸರ್ಗಪ್ರೀತಿ, ತತ್ವಜ್ಞಾನ, ರೈತ, ಸೈನಿಕ, ಶಿಕ್ಷಕ ಇವರನ್ನು ಗೌರವಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ನೀಡಬೇಕು. ಭಾವಿ ಭವಿಷ್ಯತ್ತು ಸುಂದರವಾಗಿರಲು ಶ್ರೀಗಳ ವಾಣಿ ಅಳವಡಿಸಿಕೊಳ್ಳಬೇಕು. ಶ್ರೀಗಳಿಗೆ ಗುರುನಮನ ಸಲ್ಲಿಸುವುದರ ಜೊತೆಗೆ ನುಡಿದಂತೆ ನಡೆಯೋಣ, ಶ್ರೀಗಳ ವಾಣಿ ಜೀವಂತವಾಗಿರಿಸೋಣ…

Read More

*- ಮ.ನಾ.ಉಡುಪ, ಮಂಡ್ಯ ಕುರಿಗಳನ್ನು ಕಾಯಲು ದೊಡ್ಡಿಯ ಬಳಿ ಮಲಗುತ್ತಿದ್ದ ನಾಯಿ ಬಲು ಚುರುಕಾಗಿತ್ತು. ಎಡೆಬಿಡದೆ ಕಾವಲು ಕಾಯುತ್ತಿತ್ತು. ಇದು ತೋಳಲ್ಲಿ ಬಹಳ ಕಷ್ಟಕ್ಕಿಟ್ಟುಕೊಂಡಿತು. ಹೇಗಾದರೂ ಮಾಡಿ ನಾಯಿಯ ಲಕ್ಷವನ್ನು ಬೇರೆಡೆ ಎಳೆದು ತಾನು ದೊಡ್ಡಿಯನ್ನು ಪ್ರವೇಶಿಸಿ ಕೆಲವಾದರೂ ಕುರಿಗಳನ್ನು ಕಬಳಿಸಬೇಕು ಎಂದದರ ಯೋಚನೆಯಾಗಿತ್ತು. ಹೀಗೆ ಯೋಚನೆ ಮಾಡುತ್ತಿದ್ದಂತೆ ತೋಳಕ್ಕೆ ಫಕ್ಕನೆ ನೆನಪಾಯಿತು..’ನಿಜ, ನಾಯಿಗೆ ಎಲುಬು ಚೀಪುವುದೆಂದರೆ ಬಹಳ ಆಸೆ.’ ಅಂತಲೇ ತೋಳ ಪ್ರತಿದಿನ ಎಲ್ಲಿಂದಲಾದರೂ ಒಂದು ಎಲುಬು ಸಂಪಾದಿಸಿ ತಂದು ದೊಡ್ಡಿಯ ಅಕ್ಕಪಕ್ಕದಲ್ಲೆಲ್ಲಾದರೂ ಇಡುತ್ತಿತ್ತು. ನಾಯಿಗೆ ಎಲುಬು ಸಿಕ್ಕಿದರೂಅದು ಯಾರು ತಂದಿಟ್ಟಿದ್ದು ಎಂದು ಗೊತ್ತಾಗಲಿಲ್ಲ.ಒಂದು ದಿನ ತೋಳ ಎಲುಬು ತರುವುದನ್ನೂ, ಅದನ್ನು ತನ್ನ ದೊಡ್ಡಿಯ ಸಮೀಪದಲ್ಲಿ ಇಟ್ಟು ಹೋಗುವುದನ್ನು ನಾಯಿ ನೋಡಿತು. ತೋಳನ ಮೇಲೆ ಅದಕ್ಕೆ ಇದ್ದ ವೈಮನಸ್ಯ ಅಂದಿನಿಂದ ದೂರವಾಯಿತು.ಹೀಗೆ ತೋಳ ಮತ್ತು ನಾಯಿ ಇಬ್ಬರೂ ಸಂಜೆಯ ಹೊತ್ತಿಗೆ ಸೇರಿ ಅದೂ ಇದೂ ಮಾತನಾಡಿಕೊಳ್ಳುತ್ತಿದ್ದುವು. ಒಂದು ದಿನ ತೋಳ ನಾಯಿಗೆ ಕುರಿಯ ಎಲುಬು ತುಂಬ ರುಚಿಕಟ್ಟಾಗಿರುವುದರಿಂದ ಅದನ್ನು ದಿನವೂ…

Read More

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಠನೆ | ಬಿಎಸ್ವೈ ಮೇಲಿನ ಆರೋಪಕ್ಕೆ ದಾಖಲೆ‌ ಕೊಡಲಿ | ರಾಜ್ಯಾಧ್ಯಕ್ಷ ಮಾಡಿದವರು ಬಿಎಸ್ವೈ ಅಲ್ಲ ವಿಜಯಪುರ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ಯಾರೂ ಯಾವುದೇ ಅನುಕಂಪ ತೋರಿಸುವ ಅಗತ್ಯವಿಲ್ಲ, ಆರೋಪ ಮಾಡಿದವರು ದಾಖಲೆ‌ ಇದ್ರೆ ಸರ್ಕಾರಕ್ಕೆ ಕೊಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.ಮಾಜಿ ಸಿಎಂ ಬಿ ಎಸ್ ವೈ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೌನ ವಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ಆರೋಪದಲ್ಲಿ ಸತ್ಯಾಂಶ ಇದ್ರೆ ಪ್ರತಿಕ್ರಿಯೆ ಬರ್ತದೆ. ಹುಡುಗಾಟಿಕೆಯ ಹೇಳಿಕೆ‌ ಇದ್ರೆ ಬರೊಲ್ಲ ಎಂದು ಶಾಸಕ ಯತ್ನಾಳ ಆರೋಪಕ್ಕೆ ಟಾಂಗ್ ನೀಡಿದರು.ನಾನು‌ ರಾಜ್ಯಾಧ್ಯಕ್ಷನಾಗಿ ಮೊದಲ ಭಾರಿಗೆ ಇಲ್ಲಿಗೆ ಭೇಟಿ ಕೊಟ್ಟಿದ್ದೇನೆ, ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿಯಡಿಯೂರಪ್ಪನವರು ಮಾಡಿಲ್ಲ, ಪ್ರಧಾನಿ ಮೊದಿ, ಜೆ ಪಿ ನಡ್ಡಾ, ಸೇರಿದಂತೆ ರಾಷ್ಟ್ರೀಯ ನಾಯಕರು…

Read More

ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ ವಿಜಯಪುರ: ಜ್ಯೋತಿ ತಾನು ಯಾವಾಗಲೂ ಪರರಿಗೆ ಬೆಳಕು ನೀಡುತ್ತದೆ. ಅದರಂತೆ ಇಡೀ ಜಗತ್ತಿನಾದ್ಯಂತ ತನ್ನ ಭಕ್ತ ಸಂಕುಲಕ್ಕೆ ಜ್ಞಾನದ ಜ್ಯೋತಿಯನ್ನು ನೀಡಿದಂತವರು ಶ್ರೀ ಸಿದ್ಧೇಶ್ವರ ಅಪ್ಪನವರು ಎಂದು ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಶಿಕ್ಷಣ ಹಾಗೂ ವಿಜ್ಞಾನ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೮ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೃಷ್ಠಿಯಲ್ಲಿ ಭೂಮಿ ಬಹಳ ವಿಶಿಷ್ಟವಾದಂತದ್ದು. ಈ ಭೂಮಿಯ ಮೇಲೆ ಅನೇಕ ಜೀವ ಸಂಕುಲಗಳು ಹುಟ್ಟಿ ಜನ್ಮ ತಾಳುತ್ತವೆ. ಮಾನವ ಜನ್ಮ ದೊಡ್ಡದು ಎಂದು ದಾಸರ ಪದಗಳಲ್ಲಿ ನಾವು ಕಾಣುತ್ತೇವೆ. ಇಂತಹ ಭೂಮಿಯ ಮೇಲೆ ಕೆಲವೇ ಕೆಲವು ಶ್ರೇಷ್ಠ ಶಕ್ತಿಗಳು, ಹುಟ್ಟುತ್ತಾರೆ ಅದರಂತೆ ಈ ನಾಡಿನ ಮತ್ತು ಜಗತ್ತಿನ ಕೋಟ್ಯಾಂತರ ಜನಕ್ಕೆ ಜ್ಞಾನದ ಬೆಳಕು ನೀಡಿದಂತಹ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಅಪ್ಪನವರೂ ಸಹ ಒಬ್ಬರು ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಹಾಗೂ…

Read More

ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಗೆ ಡಾ.ಉಮಾಕಾಂತ ಬೋಕೆ(ಪೂಜಾರಿ) ಅವರು ಶನಿವಾರ ಎರಡು ಎಲ್‌ಡಿ ಟಿವ್ಹಿ ಕೊಡುಗೆಯಾಗಿ ನೀಡಿದರು.ನಂತರ ಡಾ.ಉಮಾಕಾಂತ ಬೋಕೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಉಪಕರಣಗಳನ್ನು ಬಳಕೆಮಾಡಿಕೊಂಡು ಉತ್ತಮ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಅನ್ನುವ ಉದ್ದೇಶದಿಂದ ನಾನು ಕಲಿತಿರುವ ಈ ಶಾಲೆಗೆ ಎರಡು ಟಿವ್ಹಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಇವುಗಳ ಸದುಪಯೋಗವಾಗಲಿ ಎಂದರು.ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಬಂದೇನವಾಜ ವಾಲೀಕಾರ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರೇವಣಸಿದ್ದ ನಂದಿಹಾಳ, ಮುಖಂಡರಾದ ಬಸಪ್ಪ ಮುಳವಾಡ, ಬಸಪ್ಪ ಪೂಜಾರಿ, ಅಪ್ಪು ಮರೋಳ, ಧರ್ಮಣ್ಣ ಪೂಜಾರಿ, ಶಂಕ್ರೆಪ್ಪ ಪೂಜಾರಿ, ಮುಖ್ಯಗುರು ಸಿ.ಎಸ್.ಹಡಪದ, ಶಿಕ್ಷಕರಾದ ಶರಣಬಸು ಮಿಣಜಗಿ, ಕಾಳಗಿ, ಪಿ.ಎಸ್. ಮಂಗೊಂಡ, ಆರ್‌.ವ್ಹಿ.ನಾಯಕ, ಬಿ.ಬಿ.ಹಳೆಮನಿ, ಜ್ಯೋತಿ ಗಣಾಚಾರಿ, ಎಸ್.ಸಿ.ಪಾಟೀಲ ಇತರರು ಇದ್ದರು.ಇದೇ ಸಂದರ್ಭದಲ್ಲಿ ಶಾಲೆಗೆ ಟಿವ್ಹಿ ಕೊಡುಗೆಯಾಗಿ ನೀಡಿದ ಡಾ. ಉಮಾಕಾಂತ ಬೋಕೆ ಅವರನ್ನು ಎಸ್‌ಡಿಎಂಸಿ ಸಮಿತಿ,ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.೭ ರ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.೨೭ ರಂದು ಜರುಗಿದ ಉಪಚುನಾವಣೆಯ ಮತಎಣಿಕೆ ಶನಿವಾರ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ನಡೆಯಿತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಮ ಪತ್ತೆಶಾ ಮಕಾನದಾರ ಅವರು ೨೪೪ ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಸಾಹೇಬಪಾಜ್ಯಾ ತೆಲಸಂಗ ಅವರು ೧೨೨ ಮತಗಳನ್ನು, ಬಿಜೆಪಿಯ ಅಭ್ಯರ್ಥಿ ಬಸಗೊಂಡಪ್ಪ ಮುತ್ತಪ್ಪನವರ ೬ ಮತಗಳನ್ನು, ಪಕ್ಷೇತರ ಅಭ್ಯರ್ಥಿ ವಾಹಿದಾಬಾನು ಆಲಮೇಲ ಅವರು ೯೩ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೪೬೭ ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ೨ ಮತಗಳು ನೋಟಾಗೆ ಚಲಾವಣೆಯಾಗಿವೆ. ೨೪೪ ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಲೀಮ ಪತ್ತೆಶಾ ಮಕಾನದಾರ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆಯ ಅಽಕಾರಿ ಸಿ.ಬಿ.ಪಾಟೀಲ ತಿಳಿಸಿದರು. ಮತಎಣಿಕೆ ಕಾರ್ಯ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಶೀರಸ್ತೆದಾರ ಎ.ಎಚ್.ಬಳೂರಗಿ, ರಿಸಿಕೇತ ಇಂಗಳೆ, ಪ್ರವೀಣ ಲಮಾಣಿ, ಅನಿಲ ಅವಟಿ ಇದ್ದರು.*ಸಂಭ್ರಮಾಚರಣೆ:* ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾದ ಸುದ್ದಿ…

Read More

ಮುದ್ದೇಬಿಹಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ ಸಂಪೂರ್ಣ ಬೆಳೆ ಹಾನಿಯಾದ ಘಟನೆ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.ಸಿದ್ದಯ್ಯ ರುದ್ರಯ್ಯ ಗಣಾಚಾರಿ ಮತ್ತು ಮಹೇಶ ರುದ್ರಯ್ಯ ಗಣಾಚಾರಿ ಎಂಬುವವರಿಗೆ ಸೇರಿದ್ದ ೫ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆ ಕಟಾವು ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು ರೈತರಿಗೆ ವಿಧಿ ಬರೆ ಎಳೆದಂತಾಗಿದೆ.ಈ ವೇಳೆ ಮಾಧ್ಯಮದವರೊಂದಿಗೆ ಸಿದ್ದಯ್ಯ ಮಾತನಾಡಿ ಮಳೆ ಇಲ್ಲದೇ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ನಮಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರದ ಸೂಕ್ತ ಪರಿಹಾರಕ್ಕೆ ನಾವು ಎದುರು ನೋಡುತ್ತಿದ್ದೇವೆ. ಆದಷ್ಟು ಬೇಗ ಪರಿಹಾರ ನೀಡಿ ನಮ್ಮ ಕಣ್ಣೀರು ಒರೆಸಿ ಎಂದು ಅಧಿಕಾರಿಗಳಿಗೆ ಬೇಡಿಕೊಂಡರು.ಘಟನಾ ಸ್ಥಳಕ್ಕೆ ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿ ಮೌಲಾಲಿ ನದಾಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More