ವಿಜಯಪುರ: ಶ್ರೇಷ್ಠ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಜೀವನವೇ ಒಂದು ಮಾದರಿಯಾಗಿದ್ದು, ನುಡಿದಂತೆ ನಡೆದ ಮಹಾನುಭವಿಯಾಗಿದ್ದಾರೆ. ಇಂತಹ ಮಹಾನ್ ಚೇತನರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೊಣ ಎಂದು ಶ್ರೇಷ್ಠ ವಾಗ್ಮಿ, ಉಪನ್ಯಾಸಕ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.
ಶನಿವಾರ ನಗರದ ಜಲನಗರ ಸರಕಾರಿ ಪ್ರೌಡಶಾಲಾ ಆವರಣದಲ್ಲಿ ಅಮ್ಮ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಸಿದ್ದೇಶ್ವರ ಶ್ರೀಗಳು ಶ್ರೇಷ್ಠ ತತ್ವಜ್ಞಾನಿಯಾಗಿದ್ದು, ಆಡಂಬರ ಜೀವನಕ್ಕೆ ತಿಲಾಂಜಲಿ ನೀಡಿದ್ದರು. ಎಲ್ಲವೂ ಬೇಡ ಎನ್ನುತ್ತಲೇ ಅತ್ಯಂತ ಸಾದಾ ಜೀವನ ಸಾಗಿಸಿ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ಆಚಾರ ವಿಚಾರ, ನಡೆ ನುಡಿ, ತತ್ವಗಳ ಮಾನವಕುಲಕ್ಕೆ ಮಾದರಿಯಾಗಿವೆ. ಪ್ರಮುಖವಾಗಿ ಹೇಳಿದ, ನಿಸರ್ಗಪ್ರೀತಿ, ತತ್ವಜ್ಞಾನ, ರೈತ, ಸೈನಿಕ, ಶಿಕ್ಷಕ ಇವರನ್ನು ಗೌರವಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ನೀಡಬೇಕು. ಭಾವಿ ಭವಿಷ್ಯತ್ತು ಸುಂದರವಾಗಿರಲು ಶ್ರೀಗಳ ವಾಣಿ ಅಳವಡಿಸಿಕೊಳ್ಳಬೇಕು. ಶ್ರೀಗಳಿಗೆ ಗುರುನಮನ ಸಲ್ಲಿಸುವುದರ ಜೊತೆಗೆ ನುಡಿದಂತೆ ನಡೆಯೋಣ, ಶ್ರೀಗಳ ವಾಣಿ ಜೀವಂತವಾಗಿರಿಸೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಿದ್ದನಗೌಡ ಬಿರಾದಾರ ಹಾಗೂ ವಿರೇಶ ಮಾಶಟ್ಟಿ ಮಾತನಾಡಿದರು.
ಕಾರ್ಯಕ್ರಮ ಸಂಘಟಕ ಶಿಕ್ಷಕ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಎ ಆರ್ ದಶವಂತ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ತನು ಪೌಂಡೇಶನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಶಿಕ್ಷಣ ಸಂಯೋಜಕಿ ಪಿ ಜಿ ಹಿರೇಮಠ, ಸಂಪನ್ಮೂಲ ವ್ಯಕ್ತಿ ಪರವೀನ ದ್ಯಾವಾಪೂರ, ಮುಖ್ಯ ಗುರುಮಾತೆ ವ್ಹಿ ಎಸ್ ಓತಿಹಾಳ, ಟಿ ಸಿ ನಾಟೀಕಾರ, ಎಸ್ ಬಿ ಮಾಲಿಪಾಟೀಲ, ಎಸ್ ಬಿ ಗೆಜ್ಜಲಕಟ್ಟಿ, ಕೆ ಬಿ ಅವಟಗೇರ, ಜೆ ಎಸ್ ಜಾಲವಾದಿ, ಯುವ ಮುಖಂಡ ಅವಿನಾಶ ಸೇರಿದಂತೆ ಮತ್ತಿತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

