ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಗೆ ಡಾ.ಉಮಾಕಾಂತ ಬೋಕೆ(ಪೂಜಾರಿ) ಅವರು ಶನಿವಾರ ಎರಡು ಎಲ್‌ಡಿ ಟಿವ್ಹಿ ಕೊಡುಗೆಯಾಗಿ ನೀಡಿದರು.
ನಂತರ ಡಾ.ಉಮಾಕಾಂತ ಬೋಕೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಉಪಕರಣಗಳನ್ನು ಬಳಕೆಮಾಡಿಕೊಂಡು ಉತ್ತಮ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಅನ್ನುವ ಉದ್ದೇಶದಿಂದ ನಾನು ಕಲಿತಿರುವ ಈ ಶಾಲೆಗೆ ಎರಡು ಟಿವ್ಹಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಇವುಗಳ ಸದುಪಯೋಗವಾಗಲಿ ಎಂದರು.
ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಬಂದೇನವಾಜ ವಾಲೀಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರೇವಣಸಿದ್ದ ನಂದಿಹಾಳ, ಮುಖಂಡರಾದ ಬಸಪ್ಪ ಮುಳವಾಡ, ಬಸಪ್ಪ ಪೂಜಾರಿ, ಅಪ್ಪು ಮರೋಳ, ಧರ್ಮಣ್ಣ ಪೂಜಾರಿ, ಶಂಕ್ರೆಪ್ಪ ಪೂಜಾರಿ, ಮುಖ್ಯಗುರು ಸಿ.ಎಸ್.ಹಡಪದ, ಶಿಕ್ಷಕರಾದ ಶರಣಬಸು ಮಿಣಜಗಿ, ಕಾಳಗಿ, ಪಿ.ಎಸ್. ಮಂಗೊಂಡ, ಆರ್.ವ್ಹಿ.ನಾಯಕ, ಬಿ.ಬಿ.ಹಳೆಮನಿ, ಜ್ಯೋತಿ ಗಣಾಚಾರಿ, ಎಸ್.ಸಿ.ಪಾಟೀಲ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಶಾಲೆಗೆ ಟಿವ್ಹಿ ಕೊಡುಗೆಯಾಗಿ ನೀಡಿದ ಡಾ. ಉಮಾಕಾಂತ ಬೋಕೆ ಅವರನ್ನು ಎಸ್‌ಡಿಎಂಸಿ ಸಮಿತಿ,ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

