Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆಂಭಾವಿ: ಸವ್ಯಸಾಚಿ ಡಾ. ಜಿ. ಪರಮೇಶ್ವರ್ ಯುವ ಬಿಗ್ರೇಡ್ ಸಂಘದ ಪದಾಧಿಕಾರಿಗಳ ಆಯ್ಕೆ ಪಟ್ಟಣದ ಪ್ರವಾಸ ಮಂದಿರದಲ್ಲಿ ನಡೆಯಿತು.ಯಾದಗಿರಿ ಜಿಲ್ಲಾ ಅಧ್ಯಕ್ಷ ಬಸು ನಾಟಿಕಾರ ಇವರ ನೇತೃತ್ವದಲ್ಲಿ ಸುರಪುರ ತಾಲೂಕ ಅಧ್ಯಕ್ಷರಾಗಿ ಧರ್ಮಣ್ಣ ಚಿಂಚೋಳಿ ಹಾಗೂ ಹುಣಸಗಿ ತಾಲೂಕ ಅಧ್ಯಕ್ಷರಾಗಿ ಮೊಹಮ್ಮದ ಚೌದ್ರಿ ಇವರನ್ನು ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಸತೀಶ್, ಹಣಮಂತ ಚವ್ಹಾಣ, ಗಿರೀಶ್ ಎಮ್ ಚಟ್ರೇಕರ್, ಸಾಯಬಣ್ಣ ಎಂಟಮನ್, ಮಲಿಕ್ ಚೌದ್ರಿ, ಗಜ, ರವಿ ಯಮನೂರ, ರಮೇಶ್ ಬಡೆಗೇರ ಹಾಗೂ ಇತರರು ಇದ್ದರು.
Udayarashmi kannada daily newspaper
ಸಿಂದಗಿ: ಸಾವಿತ್ರಿಬಾಯಿ ಪುಲೆ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ ಹೇಳಿದರು.ತಾಲೂಕಿನ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಅನನ್ಯ. ಇಂದಿಗೂ ಮಹಿಳೆಯರಿಗೆ ಅವರು ಸ್ಫೂರ್ತಿಯಾಗಿದ್ದರೆ ಎಂದರು.ಈ ವೇಳೆ ಗ್ರಾಮ ಪಂಚಾಯತ್ ವತಿಯಿಂದ ಶಾಲೆಗೆ ೨೦ ಡೆಸ್ಕ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಯ್.ಎಂ.ಬಿರಾದಾರ, ಸಿದ್ದಣ್ಣ ಪಟ್ಟಣಶೆಟ್ಟಿ, ನಾನಾಗೌಡ ಬಿರಾದಾರ, ಭೀಮರಾಯ ಬಿಂಗೋಳ್ಳಿ, ಮಡಿವಾಳಪ್ಪ ಗುಬ್ಬೇವಾಡ, ಶಾಲೆಯ ಮುಖ್ಯಗುರು ಎಸ್.ಎಸ್. ಬುಲಬುಲೆ, ವ್ಹಿ.ಎಸ್.ಕುಲಕರ್ಣಿ, ವಿಜಯಕುಮಾರ ಚಿಂಚೋಳ್ಳಿ, ಶ್ರೀಕಾಂತ ಹಿರೇಮಠ, ಸೋಮಶೇಖರ ಪತ್ತಾರ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಇದ್ದರು.
ಮುದ್ದೇಬಿಹಾಳ: ಪಟ್ಟಣದ ಹಡಲಗೇರಿಯಲ್ಲಿನ ಮಾದರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆಯನ್ನು ಬುಧವಾರ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ನಾವುಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸರಕಾರದ ಸವಲತ್ತು ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಬದುಕು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಮ್.ಜಿ.ವ್ಹಿ.ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎ.ಗೂಳಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜ ನಾಡಗೌಡ ಮಾತನಾಡಿದರು.ಪ್ರಾಚಾರ್ಯ ಡಾ.ಎಸ್.ಎಲ್ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರೊ. ಮಂಜುಳಾ ಕಟಗೇರಿಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ದಸ್ತಗೀರ ಹಾಲ್ಯಾಳ ಸ್ವಾಗತಿಸಿದರು. ಪ್ರೊ.ಶಿವಕುಮಾರ ಉಣ್ಣಿಬಾವಿ ವಂದಿಸಿದರು. ಪ್ರೊ. ಶ್ರೀಮತಿ.ಪೂಜಾ ಬಡಿಗೇರವರು ನಿರೂಪಿಸಿದರು.
ಅಭಿಮತ- ಚೇತನ ಭಾರ್ಗವ, ಬೆಂಗಳೂರು ನಮ್ಮ ಜೊತೆಗೆ ಇದ್ದು ನಮ್ಮಿಂದ ಉಪಯೋಗವನ್ನು ಪಡೆದುಕೊಂಡು ತಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ಮರೆಯುವ ವ್ಯಕ್ತಿತ್ವವನ್ನು ಹೊಂದಿರುವವರೇ ಸಮಯ ಸಾಧಕರು. ಅವರಿಗೆ ಕೃತಜ್ಞತೆ ಎನ್ನುವುದು ಇರುವುದಿಲ್ಲ. ಮೇಲೆ ಏರಲು ಏಣಿಯ ಅವಶ್ಯಕತೆ ಇದೆ. ಏಣಿ ಹತ್ತಿಯಾದ ಮೇಲೆ ಏಣಿಗೂ ನಮಗೂ ಸಂಬಂಧವೇ ಇಲ್ಲ ಅನ್ನುವ ಮನಸ್ಥಿತಿ ಸಮಯ ಸಾಧಕರದ್ದಾಗಿರುತ್ತದೆ. ಅವರು ತಮ್ಮ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಾರೆ ವಿನಹ ಅವರಿಗೆ ಸಹಾಯ ಮಾಡಿದವರ ಮೇಲೆ ಪ್ರೀತಿ ಕರುಣೆ ಇರುವುದಿಲ್ಲ. ನಮ್ಮ ಜೀವನದಲ್ಲಿ ನಾವು ಅನೇಕ ವ್ಯಕ್ತಿತ್ವವುಳ್ಳ ಜನರನ್ನು ನೋಡುತ್ತೇವೆ. ಕೆಲವರು ನಮ್ಮನ್ನು ಪ್ರೀತಿಸುತ್ತಾರೆ, ಕೆಲವರು ತಟಸ್ಥರಾಗಿರುತ್ತಾರೆ, ಕೆಲವರು ದ್ವೇಷಿಸುತ್ತಾರೆ, ಇನ್ನೂ ಕೆಲವರು ನಮ್ಮೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡು ತಮಗೆ ನಮ್ಮಿಂದ ಏನು ಉಪಯೋಗವಿದೆ ಎಂದು ತಿಳಿದು ಅದಕ್ಕೆ ನಮ್ಮನ್ನು ಬಳಸಿಕೊಂಡು ಹೋಗುತ್ತಾರೆ. ಇಂತಹ ವ್ಯಕ್ತಿತ್ವ ಉಳ್ಳವರು ಸ್ನೇಹಕ್ಕಾಗಲಿ ಪ್ರೀತಿಗಾಗಲಿ ಅರ್ಹವಾದ ವ್ಯಕ್ತಿಗಳಲ್ಲ. ಇವರು ಮಹಾನ್ ಸ್ವಾರ್ಥಿಗಳಾಗಿರುತ್ತಾರೆ. ಸಮಯ ಸಾಧಕರು ನಾವು ಉತ್ತಮ ಸ್ಥಿತಿಯಲ್ಲಿದ್ದಾಗ ನಮ್ಮೊಂದಿಗೆ ತಮ್ಮನ್ನು…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಸಿಬಿಐ, ಹೈಕೋರ್ಟ್ ಮೊರೆ ಹೋಗಿದೆ. ಶೀಘ್ರದಲ್ಲೇ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ. ಕೆ. ಶಿವಕುಮಾರ್, ‘ಸಿಬಿಐ ಹಾಗೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ನನಗೆ ಹಿಂಸೆ ನೀಡಲು ಬಯಸುತ್ತಿವೆ. ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲು ಮುಂದಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ವಾಪಸ್ ಪಡೆದ ಬಳಿಕವೂ ಸಿಬಿಐ ಅಧಿಕಾರಿಗಳು ನನ್ನ ಆಪ್ತರಿಗೆ ನೋಟಿಸ್ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ, ಬಿಜೆಪಿ ನಾಯಕರ ವಿರುದ್ದ ಮಾತ್ರ ಸಿಬಿಐ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.‘ಎಲ್ಲದಕ್ಕೂ ಒಂದು ಮಿತಿ ಇರುತ್ತದೆ; ನನಗೆ ನೀಡುತ್ತಿರುವ…
13404 ಎಕರೆ ರೈತರ ಭೂಮಿ ವಶಕ್ಕೆ ಆಗ್ರಹ | ಕ್ರಮ ಕೈಗೊಳ್ಳದ ಸಿಎಂ ಬಗ್ಗೆ ಮಾಜಿ ಪಿಎಂ ಬೇಸರ ಬೆಂಗಳೂರು: ನೈಸ್ ಯೋಜನೆಯನ್ನು (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್) ರಾಜ್ಯ ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ‘ಆ ಕಂಪನಿ ವಶದಲ್ಲಿರುವ 13404 ಎಕರೆಯಷ್ಟು ರೈತರ ಭೂಮಿಯನ್ನು ಸರ್ಕಾರ ಮರು ವಶಪಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರೂ ಅವರು ಈವರೆಗೆ ಯಾವುದೇ ಕ್ರಮ ವಹಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.‘ಸಿದ್ದರಾಮಯ್ಯ ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ. ಬಡವರ ಪರ ಮಾತಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಪ್ರಶ್ನಿಸಿದರು.‘ಸಿದ್ದರಾಮಯ್ಯ ಅವರು ಎಷ್ಟು ವರ್ಷ ಆಳಿದರೂ ಈ ಕಪ್ಪುಚುಕ್ಕೆಯಿಂದ ಹೊರಗೆ ಬರಲು ಸಾಧ್ಯವಿಲ್ಲ. ಇದರ ವಿರುದ್ದ ಅವರು ಕ್ರಮ…
ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಇದೇ ಜ.6 ರಿಂದ ಮೂರು ದಿನಗಳವರೆಗೆ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಜಾತ್ರೆಯ ಅಂಗವಾಗಿ ಜ.6 ರಂದು ರಾತ್ರಿ 10.30ಕ್ಕೆ ಸ್ಥಳೀಯ ಶ್ರೀ ನಂದಬಸವೇಶ್ವರ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.ಜ. 7 ರಂದು ಬೆಳಿಗ್ಗೆ 6ಕ್ಕೆ ನಂದಬಸವೇಶ್ವರನಿಗೆ ಅಭಿಷೇಕ, ಪೂಜೆ ನೆರವೇರುವುದು. ನಂತರ ನಂದಿಕೋಲ ಮೆರವಣಿಗೆ ನಡೆಯುವುದು. ಬೆಳಿಗ್ಗೆ 9ಕ್ಕೆ ಶ್ರೀ ನಂದಬಸವೇಶ್ವರ ಗುಡಿಯಿಂದ ನಂದಿಕೋಲ ಮೆರವಣಿಗೆ ಹೊರಟು ಗ್ರಾಮದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ 1ಕ್ಕೆ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಮಹಾಪ್ರಸಾದ ನಡೆಯುವುದು.ಜ.8 ರಂದು ಮಧ್ಯಾಹ್ನ 1ಕ್ಕೆ ನಂದಿಕೋಲ ಮೆರವಣಿಗೆ ಪ್ರಾರಂಭವಾಗಿ ಇಬ್ರಾಹಿಂಪುರ ಭಕ್ತಾದಿಗಳ ಮನೆಗಳಿಗೆ ಭೇಟಿ ಕೊಟ್ಟು ಸಂಜೆ 4.30ಕ್ಕೆ ಕನಕದಾಸ ಬಡಾವಣೆ, ಅಲ್ಲಾಪುರ ಓಣಿಯ ಮಾರ್ಗವಾಗಿ ಸಾಗಿ 6.30ಕ್ಕೆ ರೇಲ್ವೆಸ್ಟೇಷನ್ ಮುಂದಿರುವ ಕರ್ನಾಟಕ ಜಿನ್ನಿಂಗ್ ಫ್ಯಾಕ್ಟರಿ ಬಳಿ ಶ್ರೀ ನಂದಬಸವೇಶ್ವರ ಹಾಗೂ ಶ್ರೀ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ವಿಜಯಪುರ: ಇತ್ತಿಚೆಗೆ ನಡೆದ ರಾಷ್ಟ್ರೀಯ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾಳೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಬಾಲಗಾಂವ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಖೇಲೋ ಇಂಡಿಯಾ ವುಮೆನ್ಸ್ ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ಸ್ಪರ್ಧಿಸಿ ರಾಜ್ಯಮಟ್ಟದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಇವಳ ಈ ಸಾಧನೆಯನ್ನು ಗುರುತಿಸಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಆರ್.ಬಿ.ಕೊಟ್ನಾಳ ಆಡಳಿತ ಮಂಡಳಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಮಿರ್ದೆ ಹಾಗೂ ದೈಹಿಕ ನಿರ್ದೇಶಕರಾದ ಎಸ್.ಕೆ ಪಾಟೀಲ ಇವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ವಿಜಯಪುರ ವತಿಯಿಂದ ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಜನವರಿ ೧೦ರಂದು ಬೆಳಿಗ್ಗೆ ೧೧ ಗಂಟೆಗೆ MY BHARAT-VIKSIT BHARAT@2047 ವಿಷಯದ ಬಗ್ಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಒಂದು ಲಕ್ಷ ರೂ. ಬಹುಮಾನ, ದ್ವೀತಿಯ ಸ್ಥಾನ ಪಡೆದವರಿಗೆ ೫೦ ಸಾವಿರ ರೂ. ತೃತೀಯ ಸ್ಥಾನ (ಎರಡು) ಪಡೆದವರಿಗೆ ತಲಾ ೨೫ ಸಾವಿರ ರೂ. ಬಹುಮಾನ ನೀಡಲಾಗುವುದು.ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ದಿನಾಂಕ : ೦೯-೦೧-೨೦೨೪ರೊಳಗಾಗಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ವಿಜಯಪುರ ಕಚೇರಿ ದೂ: ೦೮೩೫೨-೨೪೪೧೩೦, ಮೊ: ೯೯೭೦೮೨೩೯೩೦ ಸಂಖ್ಯೆಗೆ…
