ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ
ವಿಜಯಪುರ: ಇತ್ತಿಚೆಗೆ ನಡೆದ ರಾಷ್ಟ್ರೀಯ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾಳೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಬಾಲಗಾಂವ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಖೇಲೋ ಇಂಡಿಯಾ ವುಮೆನ್ಸ್ ಕಿಕ್ ಬಾಕ್ಸಿಂಗ್ ಲೀಗ್‌ನಲ್ಲಿ ಸ್ಪರ್ಧಿಸಿ ರಾಜ್ಯಮಟ್ಟದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಇವಳ ಈ ಸಾಧನೆಯನ್ನು ಗುರುತಿಸಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಆರ್.ಬಿ.ಕೊಟ್ನಾಳ ಆಡಳಿತ ಮಂಡಳಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಮಿರ್ದೆ ಹಾಗೂ ದೈಹಿಕ ನಿರ್ದೇಶಕರಾದ ಎಸ್.ಕೆ ಪಾಟೀಲ ಇವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

