Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ಉಪ್ಪಲದಿನ್ನಿ ತಾಂಡಾ ಆಶಾ ಕಾರ್ಯಕರ್ತೆ ತಾಂಡಾ ಜನರಿಗೆ ಆಮಿಷಯೊಡ್ಡಿ ಮತಾಂತರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮಂಗಳವಾರ ಉಪ್ಪಲದಿನ್ನಿ ತಾಂಡಾದ ಜನರು ವಾಹನ ಮುಖಾಂತರ ತಹಶೀಲ್ದಾರ ಕಚೇರಿ ಆಗಮಿಸಿ ಕಚೇರಿಯ ಮುಂದೆ ಧರಣಿ ನಡೆಸಿ ತಹಶೀಲ್ದಾರ ವಾಯ್.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೈ ಸೇವಾ ಲಾಲ, ಜೈ ದುರ್ಗಾ ಮಾತಾ ಎಂದು ಘೋಷಣೆ ಕೂಗಿ ಅನ್ಯ ಧರ್ಮಕ್ಕೆ ತಾಂಡಾದ ಮುಗ್ಧ ಜನರನ್ನು ಮತಾಂತರಗೊಳ್ಳಿಸುತ್ತಿರುವ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಅಶೋಕ(ಕುಮಾರ) ಲಮಾಣಿ ಅವರನ್ನು ಆಶಾ ಕಾರ್ಯಕರ್ತೆಯರ ಸ್ಥಾನದಿಂದ ತಗೆದು ಹಾಕಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಡಾ. ಬಸವರಾಜ ಚವ್ಹಾಣ ಮಾತನಾಡಿದರು.ಈ ಸಂದರ್ಭದಲ್ಲಿ ಸುರೇಶ ಕಾರಬಾರಿ, ರವಿ ಲಮಾಣಿ, ರಾಜು ಲಮಾಣಿ, ಮೋತಿಲಾಲ ಲಮಾಣಿ, ಸುರೇಶ ಲಮಾಣಿ, ಪುನೀತ ಲಮಾಣಿ, ಶಂಕರ ಲಮಾಣಿ, ಪ್ರಕಾಶ ಲಮಾಣಿ, ಗ್ರಾಪಂ ಸದಸ್ಯರಾದ ಸಂಗೀತಾ ಲಮಾಣಿ, ಸುಮಿತ್ರಾ ಲಮಾಣಿ, ನಾನು ಲಮಾಣಿ, ರಾಮಸ್ವಾಮಿ ಲಮಾಣಿ, ರಾಜು ನಾಯಕ, ತಾವರು ಲಮಾಣಿ, ಗಂಗಾಬಾಯಿ…

Read More

ಜಯ್ ನುಡಿ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೋ.ನಂ. ೯೪೪೯೨೩೪೧೪೨ ಈ ದಿನ ಮಾಡಲು ಮತ್ತೆ ಸಾಕಷ್ಟು ಕೆಲಸಗಳಿವೆ. ನಿನ್ನೆಯೇ ಮಾಡಿ ಮುಗಿಸಬೇಕಿದ್ದ ಬಹಳಷ್ಟು ಕೆಲಸಗಳು ಹಾಗೇ ಬಾಕಿ ಉಳಿದುಕೊಂಡಿವೆ. ಕೆಲಸದ ಹೊರೆ ಹೆಚ್ಚುತ್ತಿದೆ ಅದರೊಂದಿಗೆ ತಲೆನೋವು ಹೆಚ್ಚುತ್ತಿದೆ. ನಾವು ಮಾಡುವ ಕೆಲಸವನ್ನು ಇಷ್ಟಪಡದಿದ್ದರೆ, ಭಾರ ಎಂದುಕೊಂಡರೆ, ಕೆಲಸ ಮಾಡದೇ ನಿರ್ಲಕ್ಷಿಸುವುದನ್ನು ಮುಂದುವರೆಸಿದರೆ, ಸಿಗುವ ಫಲಿತಾಂಶವಾದರೂ ಏನು? ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಉಪಜೀವನಕ್ಕೆ ಮಾತ್ರ ಗೊಣಗುತ್ತ ಮಾಡುವ ಕೆಲಸ ಆಗುತ್ತದೆಯೇ ಹೊರತು ನಿಜವಾಗಿ ಸಂತೃಪ್ತಿ ನೀಡುವ ಕೆಲಸವಾಗಲಾರದು. ಕಾಯಕ ಸಂತೃಪ್ತಿ ತರಲಾರದು. ನಾವು ಇಷ್ಟ ಪಡುವ ಕೆಲಸದಲ್ಲಿ ತೊಡಗಿದ್ದರೆ ಕೆಲಸ ಕಷ್ಟವೆನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಮಾಡಬೇಕು ಮಾಡುತ್ತಲೇ ಇರಬೇಕು ಎಂದನಿಸುವುದು ಸಹಜ.*ಕೆಲಸದ ಪ್ರತಿ ಪ್ರೀತಿ*ಇಷ್ಟ ಪಟ್ಟು ಮಾಡುವ ಕೆಲಸದಲ್ಲಿ ಸಾಹಸ ಮಾಡಿ ಸಾಧನೆ ಮಾಡಬಹುದು. ಮುಂದಿನ ಪೀಳಿಗೆಗೆ ಸಾಹಸಗಾಥೆಯನ್ನು ಬಿಟ್ಟು ಹೋಗಬಹುದು ಯುವ ಜನರು ಹುಚ್ಚು ಹತ್ತಿಸುವಂತಹ ಸಾಹಸಮಯ ಪ್ರೋತ್ಸಾಹದಾಯಕ ಕತೆಗಳನ್ನು ಕೇಳಿದಾಗ ತಾವೂ ಅವರಂತೆ ಆಗಬೇಕೆಂದು ಬಯಸುತ್ತಾರೆ. ಇಷ್ಟ ಪಟ್ಟ ಕೆಲಸವನ್ನು…

Read More

ಆಲಮೇಲ: ತಾಲೂಕಿನ ಸುಕ್ಷೇತ್ರ ದೇವರನಾವದಗಿಯ ಜ್ಞಾನಲಿಂಗ ದೇವಸ್ಥಾನದ ಜಾತ್ರೆ ಅದ್ದೂರಿಯಾಗಿ ಜರುಗಿತು.ಬೆಳಿಗ್ಗೆ ಗದ್ದುಗೆಗೆ ರುದ್ರಾಭಿಷೇಕ, ಅರ್ಚನೆ, ಮಂಗಳಾರತಿ, ಪ್ರಸಾದವಿತರಣೆ ನಡೆಯಿತು.ಸಾಯಂಕಾಲ ಪಲ್ಲಕ್ಕಿ, ಕಳಸದ ಮೆರವಣಿಗೆ, ಪುರವಂತರ ಸೇವೆಯೊಂದಿಗೆ ರಥೊತ್ಸವವು ಅದ್ದೂರಿಯಾಗಿ ನೆರವೇರಿತು.ಜಾತ್ರಾ ಮಹೋತ್ಸವದಲ್ಲಿ ನಿರಗುಡಿಯ ಪರಮ ಪೂಜ್ಯ ಹವಾಮಲ್ಲಿನಾಥ ಮಹಾರಾಜ ಸಾನಿಧ್ಯವಹಿಸಿ ಭಕ್ತರಿಗೆ ದರ್ಶನ ಆಶೀರ್ವಾದ ನೀಡಿದರು.ಸಹಸ್ರಾರು ಭಕ್ತರು ಹವಾಮಲ್ಲಿನಾಥ ಮಹಾರಾಜರ ದರ್ಶನ ಪಡೆಯಲೆಂದೆ ಆಗಮಿಸಿ ಆಶಿರ್ವಾದ ಪಡೆದುಕೊಂಡರು.ದೇವರನಾವದಗಿ, ಆಸಂಗಿಹಾಳ,ಗುಂದಗಿ,ಬಮ್ಮನಹಳ್ಳಿ ಗ್ರಾಮಗಳ ಗಡಿರೇಖೆಯ ಮದ್ಯದಲ್ಲಿ ಈ ಜ್ಞಾನಲಿಂಗ ದೇವಸ್ಥಾನ ಇರುವದರಿಂದ ಸುತ್ತಮುತ್ತಲಿನ ಎಲ್ಲಗ್ರಾಮಗಳ ಜನರು ಇಲ್ಲಿ ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಿದರು.

Read More

ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ವಿಮಾನವನ್ನು ಹಾರಿಸಬೇಕು ಎಂಬ ಏಕೈಕ ಮಹದಾಕಾಂಕ್ಷೆ ಹೊಂದಿದ ಮಹಿಳೆಯೊಬ್ಬಳು ಪುರುಷ ಪ್ರಧಾನ ಮಿಲಿಟರಿ ವಾಯುಪಡೆ ಯೋಧರ ಗುಂಪಿನಲ್ಲಿ ಒಬ್ಬಳಾಗಿ ಸಾವಿರಾರು ಗಂಟೆಗಳ ಕಾಲ ಯುದ್ಧ ವಿಮಾನವನ್ನು ಹಾರಿಸಿದ ಭಾರತದ ಮೊದಲ ಪೈಲೆಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ. ಕಾರ್ಗಿಲ್ ಯುದ್ಧದಲ್ಲಿ ಮದ್ದು ಗುಂಡುಗಳ ಸಿಡಿತದ ನಡುವೆ ವೈರಿಗಳಿಂದ ಗಾಯಗೊಂಡ 900ಕ್ಕೂ ಹೆಚ್ಚು ಭಾರತೀಯ ಯೋಧರನ್ನು ರಕ್ಷಿಸುವಲ್ಲಿ ನಿರತಳಾದ ವೀರ ವನಿತೆ, 40ಕ್ಕೂ ಹೆಚ್ಚು ಬಾರಿ ತನ್ನ ಚೀತ ವಿಮಾನವನ್ನು ತುರ್ತು ಪರಿಸ್ಥಿತಿಗಳಲ್ಲಿ ಹಾರಿಸುತ್ತಾ ಯುದ್ಧ ದಲ್ಲಿ ಭಾಗಿಯಾದ ವೀರರಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸುವಲ್ಲಿ, ಗಾಯಗೊಂಡವರನ್ನು ರಕ್ಷಿಸುವಲ್ಲಿ ಮತ್ತು ವೈರಿ ಪಡೆಯವರು ನೆಲೆ ಮಾಡಿರುವ ಜಾಗಗಳನ್ನು ಗುರುತಿಸುವಲ್ಲಿ ಭಾರತೀಯ ಭೂಸೇನೆಯ ಯೋಧರ ಬೆನ್ನೆಲುಬಾಗಿ ತನ್ನ ಸ್ನೇಹಿತೆ ಕೇರಳ ರಾಜ್ಯದ ಇನ್ನೋರ್ವ ಫ್ಲೈಟ್ ಆಫೀಸರ್ ವಿದ್ಯಾ ರಾಜನರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಕಾರ್ಗಿಲ್ ವನಿತೆ ಎಂಬ ಹೆಸರನ್ನು ಪಡೆದ ವ್ಯಕ್ತಿ ಗುಂಜನ್ ಸಕ್ಸೇನ. 1975ರಲ್ಲಿ ಜನಿಸಿದ…

Read More

ವಿಜಯಪುರ: ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಮಹಾಪೌರರಾಗಿ ಶ್ರೀಮತಿ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಹಾಗೂ ಉಪ ಮಹಾಪೌರರಾಗಿ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಧ್ಯಕ್ಷಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಬಿ.ಶೆಟ್ಟೆಣ್ಣವರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಅವರ ಪರವಾಗಿ ೨೨ ಸದಸ್ಯರ ಮತ ಚಲಾಯಿಸಿದ್ದರಿಂದ ಹಾಗೂ ಉಪಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.ನಿಗದಿಯಂತೆ ಮಂಗಳವಾರ ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ಮಹಾಪೌರ ಸ್ಥಾನಕ್ಕೆ ೨ ಅಭ್ಯರ್ಥಿಗಳಿಂದ ೫ ನಾಮಪತ್ರಗಳು ಸ್ವೀಕೃತವಾಗಿದ್ದವು. ಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ ೫ ನಾಮಪತ್ರ ಹಾಗೂ ಉಪಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ ೨ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಮದ್ಯಾಹ್ನ…

Read More

ಬಿಜೆಪಿಗೆ ತೀವ್ರ ಮುಖಭಂಗ | ಸಚಿವ ಎಂ.ಬಿ.ಪಾಟೀಲರ ಮೇಲುಗೈ | ಬಿಜೆಪಿ ಸದಸ್ಯರಿಂದ ಚುನಾವಣೆ ಬಹಿಷ್ಕಾರ ವಿಜಯಪುರ: ನಗರದಲ್ಲಿ ಮಂಗಳವಾರ ನಡೆದ ವಿಜಯಪುರ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಕಾಂಗ್ರೆಸ್ ಪಕ್ಷದ ಮೆಹಜಬೀನ್ ಹೊರ್ತಿ, ಉಪಮೇಯರ್ ಆಗಿ ದಿನೇಶ ಹಳ್ಳಿ ಆಯ್ಕೆಯಾಗಿದ್ದಾರೆ.ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮಹಾಪೌರ ಸ್ಥಾನಕ್ಕೆ ೩೪ನೇ ವಾರ್ಡಿನ ಸದಸ್ಯೆ ಮಾಹೇಜಬೀನ್ ಹೊರ್ತಿ ಹಾಗೂ ಬಿಜೆಪಿಯಿಂದ ೧೨ನೇ ವಾರ್ಡಿನ ಸದಸ್ಯೆ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು. ಇನ್ನು ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ಉಪ ಮಹಾಪೌರ ಸ್ಥಾನಕ್ಕೆ ೧೮ ನೇ ವಾರ್ಡಿನ ಸದಸ್ಯ ದಿನೇಶ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು…

Read More

28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಸ್ಪಷ್ಠನೆ ವಿಜಯಪುರ: ನಗರದಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ನಗರದಲ್ಲಿ ಮಂಗಳವಾರ ಆರಂಭವಾದ ನಾಲ್ಕು ದಿನಗಳ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ 2023-24 ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರಕಾರ ನೀಡಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟಗಳು ರೋಡ್ ಸೈಕ್ಲಿಂಗ್ ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಇಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ…

Read More

ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆ (ಬೇನಾಳ ಬ್ರಿಜ್) ಮೇಲಿಂದ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ.ಮೃತಳು ಸಮೀಪದ ವಂದಾಲ ಗ್ರಾಮದ ದೀಪಾ ರಾಘವೇಂದ್ರ ವಡವಡಗಿ (34) ಎಂದು ತಿಳಿದುಬಂದಿದೆ. ಮೃತ ಮಹಿಳೆಗೆ ಪುತ್ರ, ಪುತ್ರಿ ಇದ್ದಾರೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುದ್ದೇಬಿಹಾಳ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆಸ್ಪತ್ರೆಗಳ ಸಹಯೋಗದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಚಿಕ್ಕ ಮಕ್ಕಳ ತಜ್ಞ ಡಾ ಪರಶುರಾಮ ವಡ್ಡರ ಮಾತನಾಡಿ, ಗರ್ಭಿಣಿ ಮಹಿಳೆಯರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜೊತೆಗೆ ಪೌಷ್ಟಿಕ ಆಹಾರ ಹಾಗೂ ತರಕಾರಿ ಸೊಪ್ಪುಗಳನ್ನು ದಿನನಿತ್ಯ ಹೆಚ್ಚಾಗಿ ಸೇವಿಸಬೇಕು. ಇದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿ ಆಗುವುದರ ಜೊತೆಗೆ ಪ್ರತಿಯೊಬ್ಬ ಗರ್ಭಿಣಿಯರು ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಎಚ್.ಐ.ವಿ ಸೋಂಕು ಇರುವುದು ಪತ್ತೆಯಾದರೆ ತಾಯಿಯಿಂದ ಮಗುವಿಗೆ ಎಚ್.ಐ.ವಿ ಹರಡುವುದನ್ನು ತಡೆಯಬಹುದು ಎಂದರು.ತಾಲೂಕ ಆಸ್ಪತ್ರೆಯ ಎ.ಆರ್.ಟಿ ಆಪ್ತ ಸಮಾಲೋಚಕಿ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ಗೌಡರ ಮಾತನಾಡಿದರು.ತಾಲೂಕ ಆಸ್ಪತ್ರೆಯ ಡಾ.ಮೊಹಮ್ಮದ್ ಆಸ್ಪಾಕ್ಅಹ್ಮದ ಜನರಲ್ ಸರ್ಜನ ಅಧ್ಯಕ್ಚತೆ ವಹಿಸಿದ್ದರು. ಡಾ.ಹಸನ ಬೀಳಗಿ, ಡಾ. ಆರ್.ಎಂ.ಇನಾಮದಾರ, ಹಿರಿಯ ಶುಶ್ರೂಷಣಾಧಿಕಾರಿ ಬಿ.ಎನ್.ಸಾರವಾಡ, ಎಸ್.ಬಿ.ಬೋಸ್ಲೆ, ಎಂ.ಬಿ.ಬಾಗವಾನ್, ಏನ್.ಎಸ್.ಹುಂಡೇಕರ್ಲ,…

Read More