ಆಲಮೇಲ: ತಾಲೂಕಿನ ಸುಕ್ಷೇತ್ರ ದೇವರನಾವದಗಿಯ ಜ್ಞಾನಲಿಂಗ ದೇವಸ್ಥಾನದ ಜಾತ್ರೆ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಗದ್ದುಗೆಗೆ ರುದ್ರಾಭಿಷೇಕ, ಅರ್ಚನೆ, ಮಂಗಳಾರತಿ, ಪ್ರಸಾದವಿತರಣೆ ನಡೆಯಿತು.
ಸಾಯಂಕಾಲ ಪಲ್ಲಕ್ಕಿ, ಕಳಸದ ಮೆರವಣಿಗೆ, ಪುರವಂತರ ಸೇವೆಯೊಂದಿಗೆ ರಥೊತ್ಸವವು ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವದಲ್ಲಿ ನಿರಗುಡಿಯ ಪರಮ ಪೂಜ್ಯ ಹವಾಮಲ್ಲಿನಾಥ ಮಹಾರಾಜ ಸಾನಿಧ್ಯವಹಿಸಿ ಭಕ್ತರಿಗೆ ದರ್ಶನ ಆಶೀರ್ವಾದ ನೀಡಿದರು.
ಸಹಸ್ರಾರು ಭಕ್ತರು ಹವಾಮಲ್ಲಿನಾಥ ಮಹಾರಾಜರ ದರ್ಶನ ಪಡೆಯಲೆಂದೆ ಆಗಮಿಸಿ ಆಶಿರ್ವಾದ ಪಡೆದುಕೊಂಡರು.
ದೇವರನಾವದಗಿ, ಆಸಂಗಿಹಾಳ,ಗುಂದಗಿ,ಬಮ್ಮನಹಳ್ಳಿ ಗ್ರಾಮಗಳ ಗಡಿರೇಖೆಯ ಮದ್ಯದಲ್ಲಿ ಈ ಜ್ಞಾನಲಿಂಗ ದೇವಸ್ಥಾನ ಇರುವದರಿಂದ ಸುತ್ತಮುತ್ತಲಿನ ಎಲ್ಲಗ್ರಾಮಗಳ ಜನರು ಇಲ್ಲಿ ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

