ಮುದ್ದೇಬಿಹಾಳ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆಸ್ಪತ್ರೆಗಳ ಸಹಯೋಗದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಚಿಕ್ಕ ಮಕ್ಕಳ ತಜ್ಞ ಡಾ ಪರಶುರಾಮ ವಡ್ಡರ ಮಾತನಾಡಿ, ಗರ್ಭಿಣಿ ಮಹಿಳೆಯರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜೊತೆಗೆ ಪೌಷ್ಟಿಕ ಆಹಾರ ಹಾಗೂ ತರಕಾರಿ ಸೊಪ್ಪುಗಳನ್ನು ದಿನನಿತ್ಯ ಹೆಚ್ಚಾಗಿ ಸೇವಿಸಬೇಕು. ಇದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿ ಆಗುವುದರ ಜೊತೆಗೆ ಪ್ರತಿಯೊಬ್ಬ ಗರ್ಭಿಣಿಯರು ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಎಚ್.ಐ.ವಿ ಸೋಂಕು ಇರುವುದು ಪತ್ತೆಯಾದರೆ ತಾಯಿಯಿಂದ ಮಗುವಿಗೆ ಎಚ್.ಐ.ವಿ ಹರಡುವುದನ್ನು ತಡೆಯಬಹುದು ಎಂದರು.
ತಾಲೂಕ ಆಸ್ಪತ್ರೆಯ ಎ.ಆರ್.ಟಿ ಆಪ್ತ ಸಮಾಲೋಚಕಿ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ಗೌಡರ ಮಾತನಾಡಿದರು.
ತಾಲೂಕ ಆಸ್ಪತ್ರೆಯ ಡಾ.ಮೊಹಮ್ಮದ್ ಆಸ್ಪಾಕ್ಅಹ್ಮದ ಜನರಲ್ ಸರ್ಜನ ಅಧ್ಯಕ್ಚತೆ ವಹಿಸಿದ್ದರು. ಡಾ.ಹಸನ ಬೀಳಗಿ, ಡಾ. ಆರ್.ಎಂ.ಇನಾಮದಾರ, ಹಿರಿಯ ಶುಶ್ರೂಷಣಾಧಿಕಾರಿ ಬಿ.ಎನ್.ಸಾರವಾಡ, ಎಸ್.ಬಿ.ಬೋಸ್ಲೆ, ಎಂ.ಬಿ.ಬಾಗವಾನ್, ಏನ್.ಎಸ್.ಹುಂಡೇಕರ್ಲ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ಎ. ಎಂ. ಹಾಲ್ಯಾಳ, ವಿ.ವಿ.ಪವಾಡಶೆಟ್ಟಿ, ಮುತ್ತು ಪಾಟೀಲ, ರಫೀಕ ಬಾಗವಾನ, ಎಂ.ಎಚ್.ಮಕಾನದಾರ, ವಿಜಯಕುಮಾರ್ ಹಳ್ಳಿ, ಚನ್ನಮ್ಮ ಛಲವಾದಿ, ಏಡ್ಸ್ ಜಾಗೃತಿ ಮಹಿಳಾ ಸಂಘದ ಶ್ರೀಮಂತ ಚೌಹಾಣ ನವಸ್ಪೂರ್ತಿ, ಸೇರಿದಂತೆ ತಾಲೂಕ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.
ಮಲ್ಲನಗೌಡ ದ್ಯಾಪುರ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

