ಬಸವನಬಾಗೇವಾಡಿ: ತಾಲೂಕಿನ ಉಪ್ಪಲದಿನ್ನಿ ತಾಂಡಾ ಆಶಾ ಕಾರ್ಯಕರ್ತೆ ತಾಂಡಾ ಜನರಿಗೆ ಆಮಿಷಯೊಡ್ಡಿ ಮತಾಂತರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮಂಗಳವಾರ ಉಪ್ಪಲದಿನ್ನಿ ತಾಂಡಾದ ಜನರು ವಾಹನ ಮುಖಾಂತರ ತಹಶೀಲ್ದಾರ ಕಚೇರಿ ಆಗಮಿಸಿ ಕಚೇರಿಯ ಮುಂದೆ ಧರಣಿ ನಡೆಸಿ ತಹಶೀಲ್ದಾರ ವಾಯ್.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೈ ಸೇವಾ ಲಾಲ, ಜೈ ದುರ್ಗಾ ಮಾತಾ ಎಂದು ಘೋಷಣೆ ಕೂಗಿ ಅನ್ಯ ಧರ್ಮಕ್ಕೆ ತಾಂಡಾದ ಮುಗ್ಧ ಜನರನ್ನು ಮತಾಂತರಗೊಳ್ಳಿಸುತ್ತಿರುವ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಅಶೋಕ(ಕುಮಾರ) ಲಮಾಣಿ ಅವರನ್ನು ಆಶಾ ಕಾರ್ಯಕರ್ತೆಯರ ಸ್ಥಾನದಿಂದ ತಗೆದು ಹಾಕಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಬಸವರಾಜ ಚವ್ಹಾಣ ಮಾತನಾಡಿದರು.
ಈ ಸಂದರ್ಭದಲ್ಲಿ ಸುರೇಶ ಕಾರಬಾರಿ, ರವಿ ಲಮಾಣಿ, ರಾಜು ಲಮಾಣಿ, ಮೋತಿಲಾಲ ಲಮಾಣಿ, ಸುರೇಶ ಲಮಾಣಿ, ಪುನೀತ ಲಮಾಣಿ, ಶಂಕರ ಲಮಾಣಿ, ಪ್ರಕಾಶ ಲಮಾಣಿ, ಗ್ರಾಪಂ ಸದಸ್ಯರಾದ ಸಂಗೀತಾ ಲಮಾಣಿ, ಸುಮಿತ್ರಾ ಲಮಾಣಿ, ನಾನು ಲಮಾಣಿ, ರಾಮಸ್ವಾಮಿ ಲಮಾಣಿ, ರಾಜು ನಾಯಕ, ತಾವರು ಲಮಾಣಿ, ಗಂಗಾಬಾಯಿ ಲಮಾಣಿ, ಶಾರುಬಾಯಿ ಲಮಾಣಿ, ಸುಶೀಲಾಬಾಯಿ ಲಮಾಣಿ, ಪಾರುಬಾಯಿ ಲಮಾಣಿ, ಶಾಂತಾಬಾಯಿ ಸೇರಿ ನೂರಾರು ಜನರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

