Author: editor.udayarashmi@gmail.com

ಮುದ್ದೇಬಿಹಾಳ: ಜ.೨೨ರಂದು ಅಯೋದ್ಯೆಯ ಐತಿಹಾಸಿಕ ಮರ್ಯಾದಾ ಪುರುಶೋತ್ತಮರ ದೇವಸ್ಥಾನದಲ್ಲಿ ಶ್ರೀ ರಾಮರ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು ಅವತ್ತಿನ ದಿನ ಪ್ರತಿಯೊಬ್ಬರು ಬೆಳಿಗ್ಗೆ ೧೧ ಗಂಟೆಯಿಂದ ಮದ್ಯಾಹ್ನ ೧ಗಂಟೆಯವರೆಗೆ ೧೦೮ ಬಾರಿ ಶ್ರೀ ರಾಮ್ ಜಯ ರಾಮ್, ಜಯ್ ಜಯ ರಾಮ್ ಎಂದು ಮಹಾ ಮಂತ್ರ ಪಠಿಸಬೇಕು ಎಂದು ಜಿಲ್ಲಾ ಪಂಚಾಯತ ನ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕರೆ ನೀಡಿದರು.ತಾಲೂಕಿನ ಗೆದ್ದಲಮರಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ರಾಮಮಂದಿದ ಅಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂದು ದೇಶದಲ್ಲಿ ಎಲ್ಲೆಡೆ ಶ್ರೀ ರಾಮರ ಭಜನೆ, ಪೂಜಾ ವಿಧಿ ವಿಧಾನಗಳು ಜರುಗಲಿದ್ದು ಸಾಯಂಕಾಲ ಸೂರ್ಯಾಸ್ತದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ದೀಪ ಹಚ್ಚಬೇಕು. ನಾವು ನೀಡಿದ ಅಕ್ಷತೆಯನ್ನು ಪೂಜಿಸಿ ಅವುಗಳನ್ನು ಬಳಸಿ ನ್ನ ತಯಾರಿಸಿ ಇತತರಿಗೆ ಉಣಬಡಿಸುವಂತೆ ತಿಳಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪ್ರಭು ಕಡಿ, ಶಿವಯೋಗಪ್ಪ ರಾಂಪೂರ, ರವಿ…

Read More

ವಿಜಯಪುರ: ಜನವರಿ ೨೬ರಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಜನವರಿ ೧೧ರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಲಿದೆ.ಸಂಬಂಧಿಸಿದ ಅಧಿಕಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಭೆಗೆ ಹಾಜರಾಗಿ, ಅಗತ್ಯ ಸಲಹೆ ಅಭಿಪ್ರಾಯ ನೀಡುವಂತೆ ಅಪರ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಹಲವು ಜಿಲ್ಲೆಗಳಲ್ಲಿ ಕೋವಿಡ್-೧೯ ಉಪತಳಿಯ ಜೆಎನ್೧ ಪ್ರಕರಣ ವರದಿಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೋವಿಡ್-೧೯ ಮೂರನೇ ಡೋಸ್ ಪಡೆಯದೆ ಉಳಿದಿರುವ ೬೦ ವರ್ಷ ಮೇಲ್ಪಟ್ಟವರು, ಮಧುಮೇಹ, ಅಧೀಕ ರಕ್ತ ಒತ್ತಡ ಇತ್ಯಾದಿ ಕಾಯಿಲೆಯುಳ್ಳ, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕೋವಿಡ್-೧೯ ಲಸಿಕಾರಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈ ಹಿಂದೆ ಕೋವಿಡ್-೧೯ ಲಸಿಕೆಯನ್ನು ಪಡೆಯದೆ ಇರುವವರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಕೋವಿಡ್-೧೯ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯದಂಚಿನಲ್ಲಿರುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಬೂಸ್ಟರ್ ೩ನೇ ಡೋಸ್ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನ ಪ್ರಾರಂಭವಾಗಿದ್ದು, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಲಸಿಕೆಯ ೨ನೇ ಡೋಸ್ ಪಡೆದು ೬ ತಿಂಗಳುಗಳು ಅಥವಾ ೨೬ ವಾರಗಳನ್ನು ಪೂರೈಸಿದ ೧೮ ವರ್ಷ ಮೇಲ್ಪಟ್ಟು ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕಾಕರಣಕ್ಕೆ ಹೋಗಿ ಲಸಿಕೆ ಹಾಕಿಸಿ ಕೊಳ್ಳಬೇಕು. ಈಗಾಗಲೇ ಕೋವಿಡ್ ಬೂಸ್ಟರ್…

Read More

*- ಸಿದ್ರಾಮ .ಎಂ. ಮಾಳಿ*ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಈ ಸಿಂಹಗಢ ಮಹಾರಾಜರ ದೇವಾಲಯವು ದ್ರಾವಿಡ ಶೈಲಿಯ ಸಭಾಮಂಟಪ , ಪ್ರದಕ್ಷಣಾಪಥ ಕುರುಹುಗಳನ್ನು ಇರುವದು ನೋಡಿದರೆ, ಈ ದೇವಾಲಯಗಳು ಹಂಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಬೃಹತ್ ಗಾತ್ರದ ಮಹಾದೇವನ ಲಿಂಗವೂ ಇದೆ. ಸುಮಾರು ೬೪ ವರ್ಷಗಳ ಹಿಂದೆ ಅಂದರೆ, ೧೯೫೯ ರಲ್ಲಿ ಮಹಾದೇವನ ದೇವಾಲಯವೆಂದು ಕರೆಯುತ್ತಾರೆ.ಸುಮಾರು ೬೪ ವರ್ಷಗಳ ಹಿಂದೆ ರೇವತಗಾಂವ ಗ್ರಾಮಕ್ಕೆ ಆಗಮಿಸಿದ ಸಿಂಹಗಢ ಮಹಾರಾಜರು ಮೂಲತಃ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಮೀಪದಲ್ಲಿರುವ ಸಿಂಹಗಢ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತಿದ್ದ ಸಮಯದಲ್ಲಿ ಆ ವಾಹನವು ಅಪಘಾತಕ್ಕಿಡಾಗಿ ಬದುಕಿ ಉಳಿದ ಅವರು ಮುಂದೆ…

Read More

ಆಲಮೇಲ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಮನುಕುಲವನ್ನು ಆಧ್ಯಾತ್ಮದಿಂದ ಜಾಗೃತ ಮೂಡಿಸಿದವರು, ಅವರ ಜೀವನದ ಉದ್ದಕ್ಕೂ ಗಾಳಿ, ನೀರು, ಬೆಳಕು, ನಿಸರ್ಗವನ್ನು ಪ್ರೀತಿಸುತ್ತಿದ್ದರು ಎಂದು ಪೂಜ್ಯ ಅಮೃತಾನಂದ ಶ್ರೀಗಳು ಹೇಳಿದರು.ಅವರು ಪಟ್ಟಣದ ಅಳ್ಳೋಳ್ಳಿಮಠದಲ್ಲಿ ಹಮ್ಮಿಕೊಳ್ಳಲಾದ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾಂತ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸಿದ್ದೇಶ್ವರ ಶ್ರೀಗಳು ಹಾಕಿಕೊಟ್ಟ ಜ್ಞಾನ ದಾಸೋಹದ ಮೂಲಕ ಜನರ ಬದುಕನ್ನು ಪರಿವರ್ತನೆ ಮಾಡಿ ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕನ್ನು ಚೆಲ್ಲಿ, ಪ್ರತಿಯೊಬ್ಬರಲ್ಲಿ ಅವರ ಆರ್ದಶಗಳನ್ನು, ತತ್ವಗಳನ್ನು ಸರಳತೆಯ ಮೂಲಕ ಜನರಲ್ಲಿ ಬಿತ್ತಿದ ಅಪರೂಪದ ವ್ಯಕ್ತಿತ್ವ ಅವರದು ಎಂದು ಗುಣಗಾನ ಮಾಡಿದರು.ಆಲಮೇಲ ಹಿರೇಮಠದ ಚಂದ್ರಶೇಖರ ಶ್ರೀಗಳು, ಅಫಜಲಪುರ ಹಿರೇಮಠದ ವಿಶ್ವರಾಧ್ಯಮಳೇಂದ್ರ ಶ್ರೀಗಳು, ಮಲಘಾಣದ ಜಡೆಯಶಾಂತಲಿಂಗೇಶ್ವರ ಶ್ರೀಗಳು, ಪೀಠಾಧಿಪತಿ ಶ್ರೀಶೈಲ ಅಳ್ಳೊಳ್ಳಿಮಠ, ಪ್ರೋ.ಅರವಿಂದ ಮನಗೂಳಿ, ಸಂತ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಐಶ್ವರ್ಯ ಕೊಳಾರಿ ಅವರ ಸಂಗಡಿಗರಿಂದ ಸಂಗೀತ ಸೇವೆ ನಡೆಯಿತು.

Read More

ಇಂಡಿ: ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ಸುನೀಲ ಪಾಟೀಲ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಇಂಡಿ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿ. ನೌಕರರ ಸಂಘದ ಅಧ್ಯಕ್ಷ ಎಸ್.ಡಿ. ಪಾಟೀಲ್ ಆದೇಶ ಹೊರಡಿಸಿದ್ದಾರೆ.

Read More

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಮಾನವ ಕಲ್ಯಾಣ ಹಾಗೂ ಜನಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಎಂಟು ಕಲ್ಯಾಣ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲ್ಪಟ್ಟವು.ಪಟ್ಟಣದಲ್ಲಿ ಬುಧವಾರ ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ಜನಸಂದಣಿಯ ಮೂರು ಪ್ರದೇಶಗಳಲ್ಲಿ ಶಂಕರ ತೋಂಟಾಪೂರ ನೇತೃತ್ವದ ವಿಜಯಪುರ ರೇಣುಕಾ ಕಲಾ ತಂಡ, ಸ್ವನಿಧಿ ಸಮೃದ್ಧಿ ಯೋಜನೆಯಡಿ , ಬೀದಿ ಬದಿಯ ವ್ಯಾಪಾರ ಸೇರಿದಂತೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನಜ್ಯೋತಿ ಬಿಮಾ ಯೋಜನೆ, ಶ್ರಮಯೋಗಿ ಮನ್‌ಧನ್ ಯೋಜನೆ, ಒಂದು ರಾಷ್ಟ್ರ, ಒಂದು ಪಡಿತರ ವಿತರಣೆ, ಜನ್‌ಧನ್ ಯೋಜನೆ, ಕಾರ್ಮಿಕ ಇಲಾಖೆಯ ಸೌಲಭ್ಯಗಳು, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆಗಳ ಕುರಿತು ಬೀದಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಕೌಟುಂಬಿಕ ಜೀವನ ಸುಖಮಯವಾಗಿರಲಿ, ಸ್ವನಿಧಿಯಿಂದ ಸಮೃದ್ಧಿ, ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯ ಬಳಸಿ’ ಹೇಳಿಕೆಗಳಂತ ಘೋಷಣೆಗಳಿಂದ ಜನಜಾಗೃತಿ ಮೂಡಿಸಿತು.ಕಲಾವಿದರಾದ ರೇಣುಕಾ ತೋಂಟಪೂರ, ಪರಶುರಾಮ ವಿಜಾಪೂರ, ಪ್ರೀತಿ ಹೊಸಮನಿ, ರಾಜೇಶ್ವರಿ ಮಂಜಣ್ಣಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೋಮಶೇಖರ…

Read More

ಸಿಂದಗಿ: ತಾಲೂಕಿನ ಗಬಸಾವಳಗಿ ಹಂಚನಾಳ ಗ್ರಾಮದ ನಡುವಿನ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.ಈ ಬಸ್ಸು ಕಲಬುರಗಿ ಕಡೆಯಿಂದ ಬರುತ್ತಿತ್ತು. ಹಾಗೂ ಸಿಂದಗಿ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ.ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಸಿಪಿಐ ಡಿ ಹುಲುಗಪ್ಪ ಹಾಗೂ ಪಿ.ಎಸ್.ಐ ಭೀಮಪ್ಪ ರಭಕವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ವ್ಯಕ್ತಿ ಯಾರೆಂದು ಮಾಹಿತಿ ತಿಳಿದು ಬಂದಿಲ್ಲ.

Read More

– ಸಂಪದಾ ಹಿರೇಮಠಆಲಮಟ್ಟಿ: ಆಹಾ ! ಹೂವಾ ನೋಡು ಎಂಥಾ ಅಂದವಾಗಿದೆ.ಹಸಿರೆಲೆಗಳ ನಡುವೆ ಎಷ್ಟೊಂದು ಮಧುರ ಭಾವ ಬೀರಿದೆ. ಬೆಳ್ಳನೆಯ ದೈವೀ ಸೌಗಂಧಿತ ಹೂವಿನ ದಳಗಳು ಕಗ್ಗತ್ತಿನಲ್ಲಿ ರಾಣಿಯಂತೆ ಮಿನುಗಿ ಸುಗಂಧಿತ ಸುವಾಸನೆಯುತ ಪರಿಮಳ ತೆಲ್ಲಿದೆ.!      ಇದು ವರ್ಷಕ್ಕೊಮ್ಮೆ ತನ್ನ ವಿಶೇಷ ವ್ಯಯಾರ ಮೊನಚಿನೊಂದಿಗೆ ಅರಳಿ ಘಮಘಮಿಸುವ ದೈವೀ ಪುಷ್ಪ ಖ್ಯಾತಿಯ ಬ್ರಹ್ಮ ಕಮಲ ಹೂವಿನ ವರ್ಣಲೇಪನ !   ಆಲಮಟ್ಟಿ ರೈಲ್ವೆ ಸ್ಟೇಷನ್ ಬಡಾವಣೆಯಲ್ಲಿನ ನಿವೃತ್ತ ಹೈಸ್ಕೂಲ್ ನೌಕರ ಬಾಬು ಪಿ.ಲಮಾಣಿ ಅವರ ಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ ಬ್ರಹ್ಮಕಮಲ ನಾಲ್ಕೈದು ಹೂವುಗಳು ವೈವಿಧ್ಯಮಯವಾಗಿ ಅರಳಿ ಪುಷ್ಪರಸ ದೌತಣದೊಂದಿಗೆ ಹೃನ್ಮನ ತಣಿಸಿದವು.     ಪವಿತ್ರ ಭಾವದ ಈ ಬ್ರಹ್ಮ ಕಮಲದ ಬಳ್ಳಿ ಎಲೆಯಿಂದಲೇ ನಿರ್ಮಾಣಗೊಳ್ಳುತ್ತದೆ. ಹೂವು  ಮೊಗ್ಗುಗಳು ಎಲೆಯಿಂದಲೇ ಅರಳಿ ರಾತ್ರಿ ವೇಳೆ ಅರಳುವುದನ್ನು ಕಂಡು ಮನೆ ಮಂದಿ ಸಂತಸಗೊಂಡರು.ಈ ಹೂವು ಕಣ್ತುಂಬಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತೆ ಎಂಬ ನಂಬಿಕೆಯ ಪರಿಕಲ್ಪನೆಯಿಂದ ತನ್ನದೇ ವಿಶಿಷ್ಟತೆ ಛಾಪು ಬ್ರಹ್ಮ ಕಮಲ ಹೂವಿಗಿದೆ. ಹೀಗಾಗಿ ಅಪರೂಪಕ್ಕೆ ಅರಳುವ…

Read More

ಮೋರಟಗಿ: ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಕೆಜಿಎಸ್ ಶಾಲೆಗೆ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಬಿಳಿಯನಿಸಿದ್ದ ಒಡಿಯರ್ ಮತ್ತು ಉಪಾಧ್ಯಕ್ಷರಾಗಿ ಚನ್ನಬಸಪ್ಪ ಬಳಗಾನೂರ ಅವಿರೋಧ ಆಯ್ಕೆಯಾದರು.ಬುಧವಾರ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಎಸ್‌ಡಿಎಂಸಿ ರಚನಾ ಸಭೆ ಚುನಾವಣೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಶಿಕ್ಷಣ ಸಂಯೋಜಕ ಆರ್. ಎಸ್. ಬಿರಾದಾರ ಮಾತನಾಡಿದರು.ಇದೇ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಇನಾಯತ ದೊಡಮನಿ, ಶ್ರೀಮಂತ ಮಳಗಿ, ಸಂತೋಷ ಮದರಿ, ಶ್ರೀಶೈಲ್ ಕೆರಿಗೊಂಡ, ಶರಣು ವಸ್ತಾರಿ, ಶಿವು ಕೆರಿಗೊಂಡ, ಸುನೀಲ ಸಿಂಗೆ, ತಿಪ್ಪಣ್ಣ ಸಿನ್ನೂರ, ಸೇರಿದಂತೆ ಅನೇಕರಿದ್ದರು.

Read More