ಸಿಂದಗಿ: ತಾಲೂಕಿನ ಗಬಸಾವಳಗಿ ಹಂಚನಾಳ ಗ್ರಾಮದ ನಡುವಿನ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಬಸ್ಸು ಕಲಬುರಗಿ ಕಡೆಯಿಂದ ಬರುತ್ತಿತ್ತು. ಹಾಗೂ ಸಿಂದಗಿ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ.
ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.
ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಸಿಪಿಐ ಡಿ ಹುಲುಗಪ್ಪ ಹಾಗೂ ಪಿ.ಎಸ್.ಐ ಭೀಮಪ್ಪ ರಭಕವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವ್ಯಕ್ತಿ ಯಾರೆಂದು ಮಾಹಿತಿ ತಿಳಿದು ಬಂದಿಲ್ಲ.
Subscribe to Updates
Get the latest creative news from FooBar about art, design and business.
Related Posts
Add A Comment

