ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಮಾನವ ಕಲ್ಯಾಣ ಹಾಗೂ ಜನಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಎಂಟು ಕಲ್ಯಾಣ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲ್ಪಟ್ಟವು.
ಪಟ್ಟಣದಲ್ಲಿ ಬುಧವಾರ ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ಜನಸಂದಣಿಯ ಮೂರು ಪ್ರದೇಶಗಳಲ್ಲಿ ಶಂಕರ ತೋಂಟಾಪೂರ ನೇತೃತ್ವದ ವಿಜಯಪುರ ರೇಣುಕಾ ಕಲಾ ತಂಡ, ಸ್ವನಿಧಿ ಸಮೃದ್ಧಿ ಯೋಜನೆಯಡಿ , ಬೀದಿ ಬದಿಯ ವ್ಯಾಪಾರ ಸೇರಿದಂತೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನಜ್ಯೋತಿ ಬಿಮಾ ಯೋಜನೆ, ಶ್ರಮಯೋಗಿ ಮನ್‌ಧನ್ ಯೋಜನೆ, ಒಂದು ರಾಷ್ಟ್ರ, ಒಂದು ಪಡಿತರ ವಿತರಣೆ, ಜನ್‌ಧನ್ ಯೋಜನೆ, ಕಾರ್ಮಿಕ ಇಲಾಖೆಯ ಸೌಲಭ್ಯಗಳು, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆಗಳ ಕುರಿತು ಬೀದಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಕೌಟುಂಬಿಕ ಜೀವನ ಸುಖಮಯವಾಗಿರಲಿ, ಸ್ವನಿಧಿಯಿಂದ ಸಮೃದ್ಧಿ, ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯ ಬಳಸಿ’ ಹೇಳಿಕೆಗಳಂತ ಘೋಷಣೆಗಳಿಂದ ಜನಜಾಗೃತಿ ಮೂಡಿಸಿತು.
ಕಲಾವಿದರಾದ ರೇಣುಕಾ ತೋಂಟಪೂರ, ಪರಶುರಾಮ ವಿಜಾಪೂರ, ಪ್ರೀತಿ ಹೊಸಮನಿ, ರಾಜೇಶ್ವರಿ ಮಂಜಣ್ಣಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೋಮಶೇಖರ ಭೋವಿ ಸೇರಿದಂತೆ ವಾದ್ಯವೃಂದದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

