ಮುದ್ದೇಬಿಹಾಳ: ಜ.೨೨ರಂದು ಅಯೋದ್ಯೆಯ ಐತಿಹಾಸಿಕ ಮರ್ಯಾದಾ ಪುರುಶೋತ್ತಮರ ದೇವಸ್ಥಾನದಲ್ಲಿ ಶ್ರೀ ರಾಮರ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು ಅವತ್ತಿನ ದಿನ ಪ್ರತಿಯೊಬ್ಬರು ಬೆಳಿಗ್ಗೆ ೧೧ ಗಂಟೆಯಿಂದ ಮದ್ಯಾಹ್ನ ೧ಗಂಟೆಯವರೆಗೆ ೧೦೮ ಬಾರಿ ಶ್ರೀ ರಾಮ್ ಜಯ ರಾಮ್, ಜಯ್ ಜಯ ರಾಮ್ ಎಂದು ಮಹಾ ಮಂತ್ರ ಪಠಿಸಬೇಕು ಎಂದು ಜಿಲ್ಲಾ ಪಂಚಾಯತ ನ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕರೆ ನೀಡಿದರು.
ತಾಲೂಕಿನ ಗೆದ್ದಲಮರಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ರಾಮಮಂದಿದ ಅಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂದು ದೇಶದಲ್ಲಿ ಎಲ್ಲೆಡೆ ಶ್ರೀ ರಾಮರ ಭಜನೆ, ಪೂಜಾ ವಿಧಿ ವಿಧಾನಗಳು ಜರುಗಲಿದ್ದು ಸಾಯಂಕಾಲ ಸೂರ್ಯಾಸ್ತದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ದೀಪ ಹಚ್ಚಬೇಕು. ನಾವು ನೀಡಿದ ಅಕ್ಷತೆಯನ್ನು ಪೂಜಿಸಿ ಅವುಗಳನ್ನು ಬಳಸಿ ನ್ನ ತಯಾರಿಸಿ ಇತತರಿಗೆ ಉಣಬಡಿಸುವಂತೆ ತಿಳಿಸಿದರು.
ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪ್ರಭು ಕಡಿ, ಶಿವಯೋಗಪ್ಪ ರಾಂಪೂರ, ರವಿ ಪವಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

