Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜನವರಿ ೨೧ ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ಸರ್ಕಾರದ ವಿಶೇಷ ಪ್ರತಿನಿಧಿ-೨ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ವಿ. ಪಾಟೀಲ, ಹಣಮಂತ್ ಆರ್. ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ. ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ (ರಾಜುಗೌಡ) ಪಾಟೀಲ, ಅಶೋಕ ಮನಗೂಳಿ, ಮಹಾನಗರ…
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜನವರಿ ೧೫ ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿದಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ರಂಗಮಂದಿರದವರೆಗೆ ಶಿವಯೋಗಿ ಸಿದ್ಧರಾಮರ ಭಾವಚಿತ್ರ ಮೆರವಣಿಗೆ ಹಾಗೂ ಬೆಳಿಗ್ಗೆ ೧೧ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ಸರ್ಕಾರದ ವಿಶೇಷ ಪ್ರತಿನಿಧಿ-೨ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ವಿ.…
ವಿಜಯಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ೨೦೨೪ರ ಮಾರ್ಚ್ ೦೯ರಂದು ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕಾ ಕೇಂದ್ರದ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ರಾಷ್ಟ್ರೀಯ ಲೋಕ್-ಅದಾಲತ್‌ನಲ್ಲಿ ರಾಜಿಯಾಗಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ಪಾಲು ವಿಭಾಗ ಕೋರಿ ಸಲ್ಲಿಸಿರುವ ದಾವೆಗಳು, ದೂರವಾಣಿ ಬಾಕಿ ಬಿಲ್ಲು ಪಾವತಿ ಪ್ರಕರಣಗಳು, ನೀರಿನ ಬಿಲ್ಲು ಬಾಕಿ ಪಾವತಿ ಪ್ರಕರಣಗಳು, ಜೀವನಾಂಶ ಕೊರಿ ಸಲ್ಲಿಸಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವಿಲ್ ಪ್ರಕರಣಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುವುದು.ಮಾ.೯ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಲು ಸುವರ್ಣಾವಕಾಶವಿದ್ದು, ಹೆಚ್ಚಿನ ಸಂಖ್ಯೆಗೆ ಭಾಗವಹಿಸಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ…
ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಅನುಷ್ಠಾನಗೊಳಿಸಲಿರುವ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಜನವರಿ ೨೪ ರಿಂದ ಫೆ.೭ರವರೆಗೆ ೧೫ದಿನಗಳ ಕಾಲ ಬೆಂಗಳೂರಿನ ಶ್ರೀ ಜಯಪ್ರಕಾಶ ನಾರಾಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ೧೬ ರಿಂದ ೩೦ ವರ್ಷ ವಯಸ್ಸಿನ ದ್ವೀತಿಯ ಪಿಯುಸಿ ಪಾಸಾದವರಿಗೆ ಜಿಮ್/ಫಿಟ್ನೆಸ್ ತರಬೇತಿ, ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ೧೫ ರಿಂದ ೨೯ ವರ್ಷ ವಯಸ್ಸಿನ ಎಸ್.ಎಸ್.ಎಲ್.ಸಿ. ಫಾಸ್/ಫೇಲ್ ಆದವರಿಗೆ ಬ್ಯೂಟಿಷಿಯನ್ ತರಬೇತಿ ಹಾಗೂ ಹಾಗೂ ಜ.೨೭ರಿಂದ ಫೆ.೭ರವರೆಗೆ ೧೨ ದಿನಗಳ ಕಾಲ ದ್ವೀತಿಯ ಪಿಯುಸಿ ಪಾಸಾದವರಿಗೆ ವಿಡಿಯೋಗ್ರಾಫಿ ತರಬೇತಿ ಮತ್ತು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ೧೫ ರಿಂದ ೨೯ ವರ್ಷದ ಪದವಿ ಅಭ್ಯರ್ಥಿಗಳಿಗೆ (ಪತ್ರಿಕೋದ್ಯಮಗೆ ಪ್ರಾಮುಖ್ಯತೆ) ಜ.೩೧ ರಿಂದ ಫೆ.೭ರವರೆಗೆ ೮ ದಿನಗಳ ನಿರೂಪಣಾ ಮತ್ತು ವಾರ್ತಾ ವಾಚಕದ ತರಬೇತಿ ಶಿಬಿರ ಆಯೋಜಿಸಲಾಗಿದೆ.ಶಿಬಿರದಲ್ಲಿ ಭಾಗವಹಿಸುವವರಿಗೆ ಊಟೋಪಹಾರ ಪ್ರಮಾಣ ಪತ್ರ ಹಾಗೂ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು…
ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಗೊಂದಲ ಮಾಡಿಕೊಳ್ಳದೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ, ವಹಿಸಿದ ಜವಾಬ್ದಾರಿ ಕೈಗೊಂಡು ಯಶಸ್ವಿಗೊಳಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ,ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಕ್ರಮವಹಿಸಬೇಕು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಉಪ ನಿರ್ದೇಶಕರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ವೇದಿಕೆ ಸಿದ್ಧತೆ,ಆಕರ್ಷಕ ಪಥಸಂಚಲನ, ಸನ್ಮಾನ,ಅಲ್ಫೋಪಹಾರ ವ್ಯವಸ್ಥೆ ಅಚ್ಚುಕಟ್ಟು ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಭದ್ರತಾ ವ್ಯವಸ್ಥೆ,ಕುಡಿಯುವ ನೀರು,ಸ್ವಚ್ಛತೆ, ದೀಪಾಲಂಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ನಿಗದಿತ ಸಮಯದಲ್ಲಿ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ…
ಇಂಡಿ: ಸಕಲ ಜೀವಿಗಳಿಗೂ ಅನ್ನ ನೀಡುವ ಭೂತಾಯಿಗೆ ಎಲ್ಲ ರೈತ ಸಮುದಾಯ ನೈವೆಧ್ಯ ತೋರಿಸಿ ಕೃತಜ್ಞತೆ ಅರ್ಪಿಸುವುದೇ ಎಳ್ಳ ಅಮವಾಸ್ಯೆಯ ವಿಶೇಷ. ಭೂಮಿ ಉಳ್ಳ ಪ್ರತಿಯೊಬ್ಬ ರೈತರು ಈ ಅಮವಾಸ್ಯೆಯನ್ನು ಅತ್ಯಂತ ಸಂಭ್ರಮದೊಂದಿಗೆ ಆಚರಿಸಿದರು.ತನ್ಮಿತ್ತವಾಗಿ ಬೆಳಗ್ಗೆಯಿಂದಲೇ ಮಹಿಳೆಯರು ತರಹೇವಾರಿ ತರಕಾರಿಯ ಪಲ್ಲೆಗಳು, ಸಿಹಿ ದಿನಸಿಗಳು ಭಕ್ಷಗಳು ಮಾಡಿದ್ದರು.ನಂತರ ಎತ್ತಿನ ಗಾಡಿ, ದ್ವೀ ಚಕ್ರ, ಜೀಪು,ಕಾರು, ರಿಕ್ಷಾ, ಟಂ ಟಂ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತಮ್ಮ ಹೊಲಗಳಿಗೆ ಮಧ್ಯಾನ್ಹ ೧೧ ರಿಂದ ೧೨ ರ ವರೆಗೆ ತೆರಳಿದರು.ತೋಟಗಳಿಲ್ಲದವರಿಗೆ ಹೊಲಗಳಿದ್ದವರು ಕರೆದುಕೊಂಡು ಹೋಗುವದು ವಿಶೇಷವಾಗಿತ್ತು.ಹೊಲಗಳಲ್ಲಿರುವ ಬೆಳೆಗೆ, ಭಾವಿಗಳಿಗೆ, ಕರೆಂಟು ಇಂಜಿನುಗಳಿಗೆ ಮತ್ತು ಹೊಲದಲ್ಲಿರುವ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ ಚೆರಗ ಚೆಲ್ಲುವದು ವಿಶೇಷವಾಗಿತ್ತು.ಮಹಿಳೆಯರು ಭಾವಿಗಳಲ್ಲಿ ತೆಪ್ಪಗಳನ್ನು ಮಾಡಿ ಪೂಜೆ ಸಲ್ಲಿಸಿದರು.ಭೂಮಿತಾಯಿಗೆ ನೈವೆಧ್ಯ ರೂಪದಲ್ಲಿ ರೈತರು ಚೆರಗ ಚೆಲ್ಲುವದು ವಿಶೇಷವಾಗಿತ್ತು.ಸಜ್ಜೆ ರೊಟ್ಟಿ, ಸಜ್ಜೆ ಹಿಟ್ಟಿನ ಕಡಬು, ಚವಳಿಕಾಯಿ, ಬೆಂಡೆಕಾಯಿ , ಪುಂಡಿ ಪಲ್ಲೆ, ಕಾಳು ಪಲ್ಲೆ , ಹೆಸರು ಕಾಳು, ಮೂಕಣಿ ಪಲ್ಲೆ, ಬದನೆಕಾಯಿ, ಎಳ್ಳು…
ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ವಿವಿಧೆಡೆ ಸುಮಾರು ೪.೧೫ ಲಕ್ಷ ಮೌಲ್ಯದ ಬೈಕ್‌ಗಳನ್ನು ಕದ್ದ ಹಾಗೂ ಮಲ್ಲಯ್ಯ ದೇವಸ್ಥಾನ ದೋಚಲು ಯತ್ನಿಸಿದ ಮೂವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಪಟ್ಟಣದಲ್ಲಿ ಗುರುವಾರ ನಸುಕಿನ ಜಾವ ಮಡಿವಾಳ ಮಾಚಿದೇವರ ದೇವಸ್ಥಾನದ ಮುಂದೆ ಅನುಮಾನಸ್ಪದವಾಗಿ ಅಲೆಯುತ್ತಿದ್ದ ಮೂವರು ವ್ಯಕ್ತಿಗಳನ್ನು ಸ್ಥಳೀಯ ಪೊಲೀಸ್ ಸಿಬ್ಬಂದಿ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಾವು ಪಟ್ಟಣ ಸೇರಿದಂತೆ ಯಾದಗಿರಿ ಜಿಲ್ಲೆಯ ವಿವಿಧೆಡೆ ಕದ್ದ ೧೦ ಬೈಕ್ ಹಾಗೂ ಕಳೆದ ಕೆಲವು ದಿನಗಳ ಹಿಂದೆ ಮಲ್ಲಯ್ಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದನ್ನು ಒಪ್ಪಿಕೊಂಡಿದ್ದಾರೆ.ಆರೋಪಿಗಳು ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಅನೀಲಕುಮಾರ ಬಾಗೋಡಿ, ವೆಂಕಟೇಶ ನೀಡಗಿ, ಶರಣಯ್ಯಸ್ವಾಮಿ ಗೊಬ್ಬಿ ಎಂದು ತಿಳಿದು ಬಂದಿದೆ.ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳು ಪೊಲೀಸ್ ಇಲಾಖೆಗೆ ಸವಾಲಾಗಿದ್ದವು. ಇವುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ…
ಬಸವನಬಾಗೇವಾಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಜ.೧೨ ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯುತ್ ಸುರಕ್ಷತೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸ್ಕಾಂ ಇಲಾಖೆಯ ವಿಜಯಪುರದ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಸ್ಕಾಂ ಇಲಾಖೆಯ ಬೆಳಗಾವಿ ವಲಯದ ಮುಖ್ಯ ಅಭಿಯಂತರ ವಿ.ಪ್ರಕಾಶ, ಅತಿಥಿಗಳಾಗಿ ನಿವೃತ್ತ ಅಧೀಕ್ಷಕ ಅಭಿಯಂತರ ಬಿ.ಕೆ.ಗೊಟ್ಯಾಳ, ಉಪವಿದ್ಯುತ್ ಪರಿವೀಕ್ಷಕ ಎಸ್.ಎಚ್.ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ಜೆ.ಎಲ್.ಜಾಧವ, ಕಾರ್ಯನಿರ್ವಾಹಕ ಅಭಿಯಂತರರಾದ ಸುನಂದಾ ಜಂಬಗಿ, ವ್ಹಿ.ಬಿ.ಕೋಲೆ, ಎಂ.ಎನ್.ಚನ್ನಗೊಂಡ, ಎಸ್.ಎ.ಬಿರಾದಾರ, ಹೆಸ್ಕಾಂ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ವೈ.ಉಕ್ಕಲಿ, ಸಿ.ಎಸ್.ರೆಡ್ಡಿ, ಬಿ.ಟಿ.ಮ್ಯಾಗೇರಿ, ಎನ್ಟಿಪಿಸಿಯ ಎಜಿಎಂಗಳಾದ ಟಿ.ಆರ್. ಶಿವಪ್ರಸಾದ,ಎಂ. ಶ್ರೀನಾಥ, ಅಟ್ರಿಯಾ ವಿಂಡ ಪವರ ಪ್ರೈ.ಲಿ.ದ ಡೆಪ್ಯೂಟ ಮ್ಯಾನೇಜರ ಮೊಹಮದ್ ಯುಸುಫ್,ಆರ್.ಬಿ.ಆರ್.ಕೆ. ಪ್ರೈ.ಲಿ.ದ ಮಹೇಶ ಶಿವಾಜಿರಾವ ಸಣಪ್, ಗ್ರೀನ್ಕೋ ಮತ್ತು -ರ್ಚುನ್ ಪೈವ್ ಪ್ರೈ.ಲಿ.ದ ಬಿ.ಬುನಿಯಾಮಿನ್, ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ ಆಗಮಿಸುವರು ಎಂದು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಂ.ಬಿರಾದಾರ…
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಎಳ್ಳ ಅಮವಾಸ್ಯೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಬೆಳೆಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸಿದರು.ಈ ಸಲ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವದರಿಂದಾಗಿ ಬರಮಧ್ಯೆಯಲ್ಲಿಯೂ ಇರುವ ಅಲ್ಪಸ್ವಲ್ಪ ಬೆಳೆಯಲ್ಲಿ ಸಂಪ್ರದಾಯದ ಎಳ್ಳ ಅಮವಾಸ್ಯೆಯನ್ನು ರೈತ ಬಾಂಧವರು ಆಚರಿಸಿದರು.ಎತ್ತಿನ ಬಂಡಿಗಳಲ್ಲಿ ಹೋಗುವದು ಅಷ್ಟಾಗಿ ಕಂಡುಬರಲಿಲ್ಲ. ಕೆಲ ರೈತ ಬಾಂಧವರು ತಮ್ಮ ಹೊಲಗಳಿಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತೆರಳಿದರೆ, ಅಲ್ಪಸ್ವಲ್ಪ ಬೆಳೆ ಇದ್ದ ರೈತ ಬಾಂಧವರು ಮನೆಯವರೊಂದಿಗೆ ಹೋಗಿ ಚೆರಗ ಚೆಲ್ಲುವ ಹಬ್ಬ ಆಚರಿಸಿದರು. ಬೆಳಗ್ಗೆಯಿಂದಲೇ ಮನೆಗಳಲ್ಲಿ ಮಹಿಳೆಯರು ಎಳ್ಳ ಅಮವಾಸ್ಯೆ ಹಬ್ಬಕ್ಕಾಗಿ ಸಜ್ಜಿ ಕಡಬು, ಹೂರಣದ ಕಡಬು, ಹೂರಣದ ಹೋಳಗಿ, ಶೇಂಗಾದ ಹೋಳಗಿ, ಸಜ್ಜಿ ರೊಟ್ಟಿ, ಚಪಾತಿ, ವಿವಿಧ ತರಹದ ಕಾಳು, ತರಕಾರಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನಂತರ ಊರ ದೇವರಿಗೆ ನೈವೇದ್ಯ ಹಿಡಿದು ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ…
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮಹಾದ್ವಾರದ ಮುಂಭಾಗ ಬುಧವಾರ ರಾತ್ರಿ ಟೇಲರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಾದಚಾರಿ ರಸ್ತೆ ಮೇಲೆ ನುಗ್ಗಿ ಅಲ್ಲಿನ ಅಲಂಕಾರಿಕ ವಿದ್ಯುತ್ ಕಂಬ ಹಾಗೂ ಪಾದಚಾರಿ ರಸ್ತೆಯಲ್ಲಿಟ್ಟಿದ್ದ ಒತ್ತು ಗಾಡಿ, ವಿವಿಧ ವ್ಯಾಪಾರಸ್ಥರು ಇಟ್ಟಿದ್ದ ಹಣ್ಣು-ಹಂಪಲ, ವಿಭೂತಿ ಸೇರಿದಂತೆ ವಿವಿಧ ಸಾಮಗ್ರಿಗಳು ಹಾನಿಯಾದ ಘಟನೆ ನಡೆದಿದೆ.ವಿಜಯಪುರದಿಂದ ಹೂವಿನಹಿಪ್ಪರಗಿ ಕಡೆಗೆ ಹೊರಟಿದ್ದ ಟೇಲರ್ ಲಾರಿಯಲ್ಲಿ ಯಾವುದೇ ಸಾಮಗ್ರಿಗಳು ಇರಲಿಲ್ಲ. ರಭಸವಾಗಿ ಬರುತ್ತಿದ್ದ ಟೇಲರ್ ಲಾರಿ ಬುಧವಾರ ರಾತ್ರಿ ಸುಮಾರು ೯ ಗಂಟೆಯ ನಂತರ ನೋಡುತ್ತಿದ್ದಂತೆ ರಸ್ತೆಯ ಬಲಕ್ಕೆ ಇರುವ ವಿಭಾಜಕದ ಮಧ್ಯದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಒಂದು ವಿದ್ಯುತ್ ಕಂಬ ನೆಲಕ್ಕೆರುಳಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ಟೇಲರ್ ಲಾರಿ ಎಡಕ್ಕೆ ಬಸವೇಶ್ವರ ದೇವಸ್ಥಾನದ ಮಹಾದ್ವಾರದ ಮುಂಭಾಗವಿರುವ ಪಾದಚಾರಿ ರಸ್ತೆ ಮೇಲೆ ಒಮ್ಮೆಲೆ ನುಗ್ಗಿದೆ. ಈ ವೇಳೆಯಲ್ಲಿ ಯಾವುದೇ ವಾಹನ, ಜನರ ಸಂಚಾರವಿಲ್ಲದೇ ಇರುವದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಟೇಲರ್…
