ಬಸವನಬಾಗೇವಾಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಜ.೧೨ ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯುತ್ ಸುರಕ್ಷತೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸ್ಕಾಂ ಇಲಾಖೆಯ ವಿಜಯಪುರದ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಸ್ಕಾಂ ಇಲಾಖೆಯ ಬೆಳಗಾವಿ ವಲಯದ ಮುಖ್ಯ ಅಭಿಯಂತರ ವಿ.ಪ್ರಕಾಶ, ಅತಿಥಿಗಳಾಗಿ ನಿವೃತ್ತ ಅಧೀಕ್ಷಕ ಅಭಿಯಂತರ ಬಿ.ಕೆ.ಗೊಟ್ಯಾಳ, ಉಪವಿದ್ಯುತ್ ಪರಿವೀಕ್ಷಕ ಎಸ್.ಎಚ್.ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ಜೆ.ಎಲ್.ಜಾಧವ, ಕಾರ್ಯನಿರ್ವಾಹಕ ಅಭಿಯಂತರರಾದ ಸುನಂದಾ ಜಂಬಗಿ, ವ್ಹಿ.ಬಿ.ಕೋಲೆ, ಎಂ.ಎನ್.ಚನ್ನಗೊಂಡ, ಎಸ್.ಎ.ಬಿರಾದಾರ, ಹೆಸ್ಕಾಂ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ವೈ.ಉಕ್ಕಲಿ, ಸಿ.ಎಸ್.ರೆಡ್ಡಿ, ಬಿ.ಟಿ.ಮ್ಯಾಗೇರಿ, ಎನ್ಟಿಪಿಸಿಯ ಎಜಿಎಂಗಳಾದ ಟಿ.ಆರ್. ಶಿವಪ್ರಸಾದ,ಎಂ. ಶ್ರೀನಾಥ, ಅಟ್ರಿಯಾ ವಿಂಡ ಪವರ ಪ್ರೈ.ಲಿ.ದ ಡೆಪ್ಯೂಟ ಮ್ಯಾನೇಜರ ಮೊಹಮದ್ ಯುಸುಫ್,ಆರ್.ಬಿ.ಆರ್.ಕೆ. ಪ್ರೈ.ಲಿ.ದ ಮಹೇಶ ಶಿವಾಜಿರಾವ ಸಣಪ್, ಗ್ರೀನ್ಕೋ ಮತ್ತು -ರ್ಚುನ್ ಪೈವ್ ಪ್ರೈ.ಲಿ.ದ ಬಿ.ಬುನಿಯಾಮಿನ್, ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ ಆಗಮಿಸುವರು ಎಂದು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಂ.ಬಿರಾದಾರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
