Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂಡಿ: ಚೆರಗ ಚೆಲ್ಲಿ ಸಂಭ್ರಮಿಸಿದ ಜನತೆ
(ರಾಜ್ಯ ) ಜಿಲ್ಲೆ

ಇಂಡಿ: ಚೆರಗ ಚೆಲ್ಲಿ ಸಂಭ್ರಮಿಸಿದ ಜನತೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಸಕಲ ಜೀವಿಗಳಿಗೂ ಅನ್ನ ನೀಡುವ ಭೂತಾಯಿಗೆ ಎಲ್ಲ ರೈತ ಸಮುದಾಯ ನೈವೆಧ್ಯ ತೋರಿಸಿ ಕೃತಜ್ಞತೆ ಅರ್ಪಿಸುವುದೇ ಎಳ್ಳ ಅಮವಾಸ್ಯೆಯ ವಿಶೇಷ. ಭೂಮಿ ಉಳ್ಳ ಪ್ರತಿಯೊಬ್ಬ ರೈತರು ಈ ಅಮವಾಸ್ಯೆಯನ್ನು ಅತ್ಯಂತ ಸಂಭ್ರಮದೊಂದಿಗೆ ಆಚರಿಸಿದರು.
ತನ್ಮಿತ್ತವಾಗಿ ಬೆಳಗ್ಗೆಯಿಂದಲೇ ಮಹಿಳೆಯರು ತರಹೇವಾರಿ ತರಕಾರಿಯ ಪಲ್ಲೆಗಳು, ಸಿಹಿ ದಿನಸಿಗಳು ಭಕ್ಷಗಳು ಮಾಡಿದ್ದರು.
ನಂತರ ಎತ್ತಿನ ಗಾಡಿ, ದ್ವೀ ಚಕ್ರ, ಜೀಪು,ಕಾರು, ರಿಕ್ಷಾ, ಟಂ ಟಂ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತಮ್ಮ ಹೊಲಗಳಿಗೆ ಮಧ್ಯಾನ್ಹ ೧೧ ರಿಂದ ೧೨ ರ ವರೆಗೆ ತೆರಳಿದರು.
ತೋಟಗಳಿಲ್ಲದವರಿಗೆ ಹೊಲಗಳಿದ್ದವರು ಕರೆದುಕೊಂಡು ಹೋಗುವದು ವಿಶೇಷವಾಗಿತ್ತು.
ಹೊಲಗಳಲ್ಲಿರುವ ಬೆಳೆಗೆ, ಭಾವಿಗಳಿಗೆ, ಕರೆಂಟು ಇಂಜಿನುಗಳಿಗೆ ಮತ್ತು ಹೊಲದಲ್ಲಿರುವ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ ಚೆರಗ ಚೆಲ್ಲುವದು ವಿಶೇಷವಾಗಿತ್ತು.
ಮಹಿಳೆಯರು ಭಾವಿಗಳಲ್ಲಿ ತೆಪ್ಪಗಳನ್ನು ಮಾಡಿ ಪೂಜೆ ಸಲ್ಲಿಸಿದರು.
ಭೂಮಿತಾಯಿಗೆ ನೈವೆಧ್ಯ ರೂಪದಲ್ಲಿ ರೈತರು ಚೆರಗ ಚೆಲ್ಲುವದು ವಿಶೇಷವಾಗಿತ್ತು.
ಸಜ್ಜೆ ರೊಟ್ಟಿ, ಸಜ್ಜೆ ಹಿಟ್ಟಿನ ಕಡಬು, ಚವಳಿಕಾಯಿ, ಬೆಂಡೆಕಾಯಿ , ಪುಂಡಿ ಪಲ್ಲೆ, ಕಾಳು ಪಲ್ಲೆ , ಹೆಸರು ಕಾಳು, ಮೂಕಣಿ ಪಲ್ಲೆ, ಬದನೆಕಾಯಿ, ಎಳ್ಳು ಹಚ್ಚಿದ ಕಟಿರೊಟ್ಟಿ, ಹೂರಣ ಹೊಳಿಗೆ, ದಪಾಟಿ, ಶೆಂಗಾ ಹೊಳಿಗೆ, ತುಪ್ಪ, ಬಿಳಿ ಅನ್ನ, ಮಸಾಲಾ ಅನ್ನ, ಸಾಂಬಾರು, ಸೆಂಡಗಿ ಇನ್ನಿತರ ವಿಶೇಷ ಭಕ್ಷಗಳನ್ನು ಹೊಲದ ಪ್ರತಿಯೊಂದು ಮೂಲೆಗೂ ಅರ್ಪಿಸಿ ಪೂಜೆ ಮಾಡಿ ಸಜ್ಜೆ ರೊಟ್ಟಿ ಚವಳಿಕಾಯಿ ಚೆಂಗೆ ಭಲೋ ಎಂದು ಹೇಳುತ್ತ ನೈವೇಧ್ಯ ಸಮರ್ಪಿಸಿದರು. ಬಹುತೇಕ ರೈತರು ಹೊಲಗಳಲ್ಲಿ ಜೋಳ, ಗೋಧಿ, ಕಡಲೆ ಸೇರಿದಂತೆ ಇನ್ನಿತರ ಬೆಳೆ ಮೈ ದುಂಬಿ ಕೊಂಡಿರುವ ಮಾಗಿ ಹಬ್ಬದ ಕಾಲದಲ್ಲಿ ಹೊಲದಲ್ಲಿ ಕುಳಿತುಕೊಂಡು ಒಂದು ಸಂಭ್ರಮ ಹೀಗಾಗಿ ರೈತರು ತಮ್ಮ ಹೊಲಗಳಿಗೆ ತಮ್ಮ ಆತ್ಮೀಯರನ್ನು ಕರೆದು ಕೊಂಡು ಹೋಗಿ ಹೊಲದಲ್ಲಿ ಎಳ್ಳ ಅಮವಾಸೆಯ ವಿಶೇಷ ಊಟ ಮಾಡಿದರು. ಇದರಿಂದ ಭೂತಾಯಿ ಪ್ರಸನ್ನಳಾಗಿ ಫಸಲು ಹುಲುಸಾಗಿ ಬೆಳೆಯಲೆಂದು ಫ್ರಾರ್ಥಿಸುತ್ತಾರೆ.
ನಂತರ ಸಂಜೆ ಗೌಡರ ಮನೆಯ ಎತ್ತಿನ ಗಾಡಿಯನ್ನು ಜೋಳದ ದಂಟುಗಳಿಂದ ಸಿಂಗಾರ ಮಾಡಿ ದೀಪ ಹಚ್ಚಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೈತರೆಲ್ಲರೂ ಸೇರಿ ಮೆರವಣಿಗೆ ತೆಗೆದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಅಂಬರ ಚುಂಬಿತ ಪ್ರೇಮ ಪ್ರೇಮ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ
    In (ರಾಜ್ಯ ) ಜಿಲ್ಲೆ
  • ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ
    In (ರಾಜ್ಯ ) ಜಿಲ್ಲೆ
  • ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ
    In (ರಾಜ್ಯ ) ಜಿಲ್ಲೆ
  • ಅಂಬರ ಚುಂಬಿತ ಪ್ರೇಮ ಪ್ರೇಮ
    In ವಿಶೇಷ ಲೇಖನ
  • ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಯ ಪ್ರಾರಂಭಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಇಡ್ಲಿ-ವಡೆ ಜೊತೆಗೆ ಗ್ಯಾಸ್​ಗೂ ಬಿಲ್! :ಭಾರಿ ವೈರಲ್
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ
    In (ರಾಜ್ಯ ) ಜಿಲ್ಲೆ
  • ಸಿಲಿಂಡರ್ ಸ್ಟಾಕ್ ಇಲ್ಲ :ಸಚಿವ ಮುನಿಯಪ್ಪ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.