ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಅನುಷ್ಠಾನಗೊಳಿಸಲಿರುವ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜನವರಿ ೨೪ ರಿಂದ ಫೆ.೭ರವರೆಗೆ ೧೫ದಿನಗಳ ಕಾಲ ಬೆಂಗಳೂರಿನ ಶ್ರೀ ಜಯಪ್ರಕಾಶ ನಾರಾಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ೧೬ ರಿಂದ ೩೦ ವರ್ಷ ವಯಸ್ಸಿನ ದ್ವೀತಿಯ ಪಿಯುಸಿ ಪಾಸಾದವರಿಗೆ ಜಿಮ್/ಫಿಟ್ನೆಸ್ ತರಬೇತಿ, ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ೧೫ ರಿಂದ ೨೯ ವರ್ಷ ವಯಸ್ಸಿನ ಎಸ್.ಎಸ್.ಎಲ್.ಸಿ. ಫಾಸ್/ಫೇಲ್ ಆದವರಿಗೆ ಬ್ಯೂಟಿಷಿಯನ್ ತರಬೇತಿ ಹಾಗೂ ಹಾಗೂ ಜ.೨೭ರಿಂದ ಫೆ.೭ರವರೆಗೆ ೧೨ ದಿನಗಳ ಕಾಲ ದ್ವೀತಿಯ ಪಿಯುಸಿ ಪಾಸಾದವರಿಗೆ ವಿಡಿಯೋಗ್ರಾಫಿ ತರಬೇತಿ ಮತ್ತು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ೧೫ ರಿಂದ ೨೯ ವರ್ಷದ ಪದವಿ ಅಭ್ಯರ್ಥಿಗಳಿಗೆ (ಪತ್ರಿಕೋದ್ಯಮಗೆ ಪ್ರಾಮುಖ್ಯತೆ) ಜ.೩೧ ರಿಂದ ಫೆ.೭ರವರೆಗೆ ೮ ದಿನಗಳ ನಿರೂಪಣಾ ಮತ್ತು ವಾರ್ತಾ ವಾಚಕದ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸುವವರಿಗೆ ಊಟೋಪಹಾರ ಪ್ರಮಾಣ ಪತ್ರ ಹಾಗೂ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಪಡೆದು, ದಿನಾಂಕ :೧೮-೧೧-೨೦೨೪ ರೊಳಗಾಗಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ವಿಜಯಪುರ ದೂ: ೦೮೩೫೨-೨೫೧೦೮೫, ಮೊ: ೭೦೧೯೧೬೭೨೪೩ಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
