Author: editor.udayarashmi@gmail.com

ದೇವರಹಿಪ್ಪರಗಿ: ರೈತ ಸಮುದಾಯದ ಹಬ್ಬವಾದ ಎಳ್ಳು ಅಮವಾಸ್ಯೆಯಂದು ಪಟ್ಟಣ ಸೇರಿದಂತೆ ತಾಲ್ಲೂಕಿನದಾದ್ಯಂತ ರೈತರು ತಮ್ಮ ಆಪ್ತರು, ಮಿತ್ರರೊಂದಿಗೆ ಹೊಲ, ತೋಟಗಳಿಗೆ ತೆರಳಿ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ, ಚರಗ ಚಲ್ಲಿ ಭೋಜನ ಸವಿದರು.ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಮವಾಸ್ಯೆಯ ಸಂಭ್ರಮ ಬೆಳಗಿನಿಂದಲೇ ಕಂಡು ಬಂತು. ಹಿಂದೆ ಎತ್ತಿನಗಾಡಿಗಳ ಮೂಲಕ ಹೊಲಗಳಿಗೆ ತೆರಳುತ್ತಿದ್ದ ರೈತಕುಟುಂಬಗಳು ಈಗ ವಿರಳವಾಗಿ ಬಹುತೇಕರು ಕಾರು, ಜೀಪ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ತಮ್ಮ ತೋಟಗಳಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂತು. ಮಧ್ಯಾನ್ಹದ ಸಮಯಕ್ಕೆ ಹೊಲದ ಬನ್ನಿಮರಗಳಿಗೆ ಪೂಜೆ ಸಲ್ಲಿಸಿ ನಂತರ ಚರಗ ಚಲ್ಲಿದ ಮೇಲೆ ಸಜ್ಜೆ ರೋಟ್ಟಿ, ಮೋಸರು, ಸಜ್ಜೆ ಕಡಬು, ಶೇಂಗಾ ಹೋಳಿಗೆ ಸಹಿತ ಮೃಷ್ಟಾನ್ನ ಭೋಜನ ಸವಿದರು.ಈ ಬಾರಿ ಮಳೆಗಾಲ ಉತ್ತಮವಾಗಿಲ್ಲದ ಕಾರಣ ಎರೆ ಹೊಲಗಳಲ್ಲಿ ಹಸಿಕಡಲೆ, ಜೋಳ ಬಹುತೇಕ ಕಾಣದಂತಾಗಿದೆ. ಅದಾಗ್ಯೂ ಸಂಪ್ರದಾಯದಂತೆ ರೈತ ಸಮುದಾಯ ಮಾತ್ರ ಮಕ್ಕಳು ಕುಟುಂಬ ಸಹಿತ ಎಳ್ಳು ಅಮವಾಸ್ಯೆಯಂದು ಭೂತಾಯಿಗೆ ಪೂಜೆ ಸಲ್ಲಿಸಿ, ನೈವಿಧ್ಯ ಅರ್ಪಿಸಿದರು.

Read More

‘ಸಕಾಲ’ ಪ್ರಗತಿ ಪರಿಶೀಲನಾ ಸಭೆ | ಸಕಾಲ ಸೇವೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲು ಸೂಚನೆ ಬೆಂಗಳೂರು: ‘ಸಕಾಲ’ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಬವಿಲ್ಲದೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.ವಿಧಾನಸೌಧದಲ್ಲಿ ಗುರುವಾರ ನಡೆದ “ಸಕಾಲ ಪ್ರಗತಿ ಪರಿಶೀಲನಾ ಸಭೆ”ಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ಸರ್ಕಾರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಲು ಇರುವ ಏಕೈಕ ಮಾರ್ಗ ಸಕಾಲ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು, ಜನರಿಗೆ ವಿಳಂಬವಿಲ್ಲದೆ ಎಲ್ಲಾ ಸೇವೆಗಳೂ ಲಭ್ಯವಾಗುವಂತಿರಬೇಕು ಎಂಬುದೇ ಸರ್ಕಾರ ಉದ್ದೇಶ. ಆದರೆ, ಕೆಲವು ಸೇವೆಗಳು ವಿಳಂಬವಾಗುತ್ತಿರುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.ಮುಂದುವರೆದು, “ಸಕಾಲ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಸುಧಾರಣೆಯಾಗಬೇಕಾದ್ದು ಇನ್ನೂ ಬಹಳಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ವರ ಕೊಟ್ಟು ಇಲ್ಲಿ ಕೂರಿಸಿದವರನ್ನೇ ಮನೆಯ…

Read More

ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ರೈತರು ಚರಗ ಚೆಲ್ಲುವ ಮೂಲಕ ಎಳ್ಳು ಅಮಾವಾಸ್ಯ ಆಚರಿಸಿದರು.ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಎಳ್ಳು ಅಮವಾಸ್ಯೆ ದಿನ ರೈತರು, ರೈತ ಮಹಿಳೆಯರು ಮಕ್ಕಳು ಸೇರಿದಂತೆ ಮನೆ ಮಂದಿ ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ.ಎಳ್ಳು ಹಚ್ಚಿದ ರೊಟ್ಟಿ, ಎಳ್ಳು ಕಡುಬು, ಕಡಲೆಗಡುಬು, ಬದನೆಕಾಯಿ ಪಲ್ಲೆ, ಚಟ್ನಿಯಂತಹ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋಗಿ, ಬೆಳೆದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಂಡರು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ’ ಎಂದು ಹೇಳುತ್ತಾ ಖಾದ್ಯಗಳನ್ನು ಹೊಲದ ತುಂಬೆಲ್ಲಾ ಚೆಲ್ಲುವುದೇ ಚರಗ. ಮನೆ ಮಂದಿ ಜೊತೆಗೆ ಹೊಲ ಇಲ್ಲದವರನ್ನು ಕರೆದುಕೊಂಡು ಚರಗ ಚೆಲ್ಲಲು ಹೋಗುವುದು ಇನ್ನೊಂದು ವಿಶೇಷ. ಮುತ್ತು ಹಿರೇಮಠ್ ಕುಟುಂಬದವರು ಎಲ್ಲ ಸ್ನೇಹಿತರೊಂದಿಗೆ ಅವರ ಹೊಲದಲ್ಲಿ ಚರಗ ಚೆಲ್ಲಿದ ಬಳಿಕ ಹೊಲದಲ್ಲಿ ಎಲ್ಲರೂ ಸೇರಿ ಸಹಭೋಜನ ಮಾಡಿಸಿದರು.

Read More

ಸಿಂದಗಿ: ತಾಲೂಕಿನ ರಾಂಪೂರ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು ೩ ಗಂಟೆ ೩೦ ನಿಮಿಷಕ್ಕೆ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಗೆ ನಾಲ್ಕು ಜನ ದರೋಡೆಕೋರರು ಒಳ ನುಗ್ಗಿ ಹಣ ಹಾಗೂ ಮದ್ಯ ತೆಗೆದುಕೊಂಡು ಪರಾರಿಯಾಗಿದ್ದಾರೆ.ಈ ವೇಳೆ ಮಧ್ಯದ ಅಂಗಡಿ, ಬಂಗಾರದ ಅಂಗಡಿ, ಬುಕ್ ಸ್ಟಾಲ್ ಸೇರಿ ಮೂರು ಅಂಗಡಿಗಳು ಕಳ್ಳತನ ಮಾಡಿರುತ್ತಾರೆ ಎಂದು ತಿಳಿದು ಬಂದಿದೆ.ಬೆಳಗ್ಗೆ ೧೧ಗಂಟೆಗೆ ಮಧ್ಯದ ಅಂಗಡಿಯ ಬಾಗಿಲು ತೆಗೆಯಲು ಹೋದ ಎಂ.ಎಸ್.ಐ.ಎಲ್ ಕೆಲಸಗಾರ ನೋಡಿ ಅನುಮಾನದಿಂದ ಮೇಲಧಿಕಾರಿಗಗಳಿಗೆ ವರದಿ ತಿಳಿಸಿರುತ್ತಾರೆ. ಸಿಂದಗಿ ಅಬಕಾರಿ ಉಪನಿರೀಕ್ಷಕರು ದಿಲೀಪ್ ಸಿಂಗ್ ರಜಪೂತ ಸ್ಥಳಕ್ಕೆ ಭೇಟಿ ನೀಡಿ ಒಳಗೆ ಹೋಗಿ ಸಿ.ಸಿ ಕ್ಯಾಮೆರಾ ಓಪನ್ ಮಾಡಿದಾಗ. ಮುಖಕ್ಕೆ ಬಟ್ಟೆಗಳು ಕಟ್ಟಿಕೊಂಡು ಒಳಗೆ ನುಗ್ಗಿರುವ ದೃಶ್ಯ ಕಂಡು ಬಂದಿದೆ. ೭ಸಾವಿರ ನಗದು ಹಣ ಹಾಗೂ ೮ ಬಿಯರ್ ಬಾಟಲ್ ಮತ್ತು ೫ಐಬೀ ವಿಸ್ಕಿ, ತೆಗೆದುಕೊಂಡು ಪರಾರಿಯಾಗಿದ್ದಾರೆ.ಸಿ.ಸಿ ಕ್ಯಾಮರಾದಲ್ಲಿ ೪ ಜನ ಕಳ್ಳರು ಕಾಣಿಸಿಕೊಂಡಿದ್ದಾರೆನ್ನಲಾಗಿದೆ.ಈ ವಿಷಯ ಸಿಂದಗಿ ಪೊಲೀಸ್ ಠಾಣೆಗೆ ತಿಳಿಸಿದಾಗ, ಸ್ಥಳಕ್ಕೆ ಸಿಂದಗಿ ಪಿ.ಎಸ್.ಐ ಭೀಮಪ್ಪ…

Read More

ಸಿಂದಗಿ: ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮನೆಕಳ್ಳತನ ಮಾಡಲು ಅಂತರಾಜ್ಯದಿಂದ ಚೆಡ್ಡಿ ಗ್ಯಾಂಗ ಬಂದಿದ್ದು, ಸದರಿ ಗ್ಯಾಂಗ ಸಕ್ರೀಯವಾಗಿರುತ್ತದೆ. ಸದರಿ ಗ್ಯಾಂಗನಲ್ಲಿ ಸುಮಾರು ನಾಲ್ಕೈದು ಜನರು ಇದ್ದಾರೆ. ಇವರು ರಾತ್ರಿ ವೇಳೆ ತಮ್ಮ ಮೈ ಮೇಲೆ ಕೇವಲ ಚಡ್ಡಿ, ಬನಿಯನ್, ಮಂಕಿಕ್ಯಾಪ ಹಾಕಿಕೊಂಡು ಮನೆ ಕಳ್ಳತನ ಮಾಡಲು ತಿರುಗಾಡುತ್ತಿದ್ದು, ಇಂತಹ ಜನರು ತಮ್ಮ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಕಂಡು ಬಂದಲ್ಲಿ ಸಾರ್ವಜನಿಕರು ಭಯಭೀತರಾಗದೇ ಕೂಡಲೇ ಪೊಲೀಸ ಠಾಣೆ ಮತ್ತು ಪೊಲೀಸ ಕಂಟ್ರೋಲ್ ರೂಮ್ ಅಥವಾ ೧೧೨ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಸಿಪಿಐ ಡಿ. ಹುಲುಗಪ್ಪ ಮತ್ತು ಪಿಎಸ್ಐ ಭೀಮಪ್ಪ ರಬಕವಿ ತಿಳಿಸಿದ್ದಾರೆ.*ಸಾರ್ವಜನಿಕರಿಗೆ ಸೂಚನೆ*ಸಾರ್ವಜನಿಕರು ಊರಿಗೆ ಹೋಗಬೇಕಾದ ಸಂದರ್ಭ ಬಂದಲ್ಲಿ ತಮ್ಮ ಮನೆಯಲ್ಲಿ ಬೆಲೆಬಾಳುವ ಆಭರಣಗಳು ಮತ್ತು ಹಣ ಇಟ್ಟು ಹೋಗಬಾರದು. ಮತ್ತು ಹೋಗುವ ಮುಂಚೆ ಸಿಂದಗಿ ಪೊಲೀಸ ಠಾಣೆಗೆ ಮಾಹಿತಿ ನೀಡಲು ಸಿಪಿಐ ಡಿ. ಹುಲುಗಪ್ಪ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಮನೆ ಕಳ್ಳತನ ಮಾಡುವ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದ್ದು ಈ ಗ್ಯಾಂಗ್ ನಲ್ಲಿ ೪ ರಿಂದ ೫ ಜನ ಇದ್ದಾರೆ.ಚಡ್ಡಿ, ಬನಿಯನ್ ಮತ್ತು ಮಂಕಿ ಕ್ಯಾಪ್ ಹಾಕಿಕೊಂಡು ತಿರುಗಾಡುತ್ತಿರುತ್ತಾರೆ. ಯಾರಾದರೂ ಇಂತಹ ಅಪರಿಚಿತರು ಕಂಡು ಬಂದಲ್ಲಿ ಯಾರೂ ಭಯಪಡದೇ, ಕೂಡಲೇ ಪೊಲೀಸ್ ಠಾಣೆಗೆ ತಿಳಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.

Read More

*- ಇಲಾಹಿ ಇ. ಜಮಖಂಡಿ*ಚಿಮ್ಮಡ: ಮಕ್ಕಳು ಈ ಹಿಂದೆ ಶಾಲೆಗೆ ರಜೆ ಸಿಕ್ಕರೆ ಸಾಕು ಜಿಗಿಯಿತ್ತ, ಕುಣಿಯುತ್ತ ಮನೆಗೆ ಓಡೋಡಿ ಬರುತಿದ್ದರು. ಈಗ ಕಾಲ ಬದಲಾಗಿದೆ, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಪೈಪೋಟಿ ಶುರುವಾಗಿದೆ. ಜ್ಞಾನಾರ್ಜನೆ ಎಲ್ಲಿ ಯಾವ ಸಮಯದಲ್ಲಿ ಸಿಕ್ಕರೂ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬೀಳುತಿದ್ದಾರೆ.ಇದಕ್ಕೆ ಉದಾಹರಣೆ ಎಂಬಂತೆ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಹಾಂತೇಶ ಬಡಿಗೇರ ಕಳೆದ ಹಲವು ತಿಂಗಳುಗಳಿಂದ ಎನ್‌ಎಂಎಂಎಸ್, ಮಾನಸಿಕ ಸ್ಥಿರತೆ, ಇಂಗ್ಲಿಷ ಸೇರಿದಂತೆ ಹಲವು ವಿಷಯಗಳ ಕುರಿತು ಬೆಳಿಗ್ಗೆ ೬ ರಿಂದ ೭ ಘಂಟೆಯವರೆಗೆ ವಿಶೇಷ ತರಬೇತಿ ತರಗತಿಗಳನ್ನು ಭೋದಿಸುತಿದ್ದು, ಈ ವಿಶೇಷ ತರಗತಿಗೆ ಬೆಳಗಿನ ಚುಮು ಚುಮು ಛಳಿಯಲ್ಲೂ ಪ್ರತಿದಿನ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿರುವುದು ವಿದ್ಯಾರ್ಥಿಗಳ ಜ್ಞಾನದ ದಾಹಕ್ಕೆ ಹಿಡಿದ ಕನ್ನಡಿ.ಹಲವು ವಿದ್ಯಾರ್ಥಿಗಳು ಬೆಳಿಗ್ಗೆ ೫ ಘಂಟೆಗೆ ಎದ್ದು ಛಳಿಗಾಳದ ವಿಪರೀತ ಛಳಿಯಲ್ಲಿ ಸುಮಾರು ಐದು ಕಿ.ಮಿ. ಸೈಕಲ್ ಸವಾರಿ ಮಾಡಿಕೊಂಡು ಬಂದು ಈ ವಿಶೇಷ…

Read More

ಚಿಮ್ಮಡ: ನಿತ್ಯ ಸಮಾಜದಲ್ಲಿ ನಾವು ಉತ್ತಮ ಬದುಕು ಕಂಡುಕೊಳ್ಳಬೇಕಾದರೆ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕೆಂದು ಸ್ಥಳಿಯ ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪ್ರಭುಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಪ್ರಭು ಮಹಾಸ್ವಾಮಿಗಳ ೫೩ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬೆಳಗುತ್ತಿರುವ ದೀಪಗಳನ್ನು ಆರಿಸಿ ಜನ್ಮದಿನ ಆಚರಿಸುವ ಸಂಸ್ಕತಿ ಪಾಶ್ಚಾತರದ್ದು. ಇನ್ನೊಬ್ಬರ ಜೀವನದಲ್ಲಿ ಬೆಳಗುವ ದೀಪವಾಗುವ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿ. ನಮ್ಮ ಪರಂಪರೆಯನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಆ ಕಾರಣಕ್ಕೆ ಶ್ರೀಮಠದ ಭಕ್ತ ಮಂಡಳಿ ಈ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಮಠಗಳಿಂದ ದೊರೆಯುತಿದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದಿಗೂ ಜೀವನದಲ್ಲಿ ತಪ್ಪು ಹೆಜ್ಜೆ ಇಡುವುದಿಲ್ಲ ಎಂದರು,ಪ್ರಭು ನೇಸೂರ ಮಾತನಾಡಿದರು.ಗ್ರಾಮದ ಪ್ರಮುಖರಾದ ರಾಮಣ್ಣಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ,…

Read More

ರೇವತಗಾಂವದಲ್ಲಿ ಎಳ್ಳ ಅಮವಾಸ್ಯ ಚರಗ ಚೆಲ್ಲುವ ಸಂಭ್ರಮ ಚಡಚಣ: ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ಕೆಂಬತ್ತಿ ವಸ್ತಿಯಲ್ಲಿನ ರೈತ ಮಹಿಳೆಯರು ಗುರುವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತೈದೆಯರಿಗೆ ಊಡಿ ತುಂಬುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಬೆಳೆದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜೆ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಭೂತಾಯಿಗೆ ಚರಗ ಚೆಲ್ಲಿದರು. ಗ್ರಾಮದ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯ ಸೇರಿದಂತೆ ಇತರ ವಿಶೇಷ ಭೋಜನವನ್ನು ಭೂತಾಯಿಗೆ ಅರ್ಪಿಸಿದರು.ಚರಗ ಚೆಲ್ಲುವ ಸಂಭ್ರಮ ಮುಗಿದ ನಂತರ ತುಂಬಿದ ಹೊಲದ ಮಧ್ಯ ಮುತ್ತೆöÊದೆಯರ ಊಟವಾದ ಮೇಲೆ ಎಲ್ಲರೂ ಸಹ ಭೋಜನವನ್ನು ಸವಿದರು. ಸ್ವಲ್ಪ ಹೊತ್ತು ಹೊಲದಲ್ಲಿ ವಿಶ್ರಾಂತಿ ಕಳೆದು ಸಂಜೆ ವೇಳೆಗೆ ಮನೆಗೆ ಮರುಳಿದರು.ರೇವತಗಾಂವ…

Read More

ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಪೂಜಾ ಸಾರವಾಡ ಇವರು ಕರ್ನಾಟಕ ಸರಕಾರದ ಕರ್ನಾಟಕ ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಆರ್.ಎಚ್. ರಮೇಶ ತಿಳಿಸಿದ್ದಾರೆ.ವಿಜಯಪುರ ಜಿಲ್ಲಾ ಪಂಚಾಯತಿಯ ಜಿಲ್ಲಾ ಸ್ವೀಪ್ ಸಮಿತಿ ಏರ್ಪಡಿಸಿದ್ದ ಸ್ಪರ್ಧೆಯಲ್ಲೂ ಜಿಲ್ಲೆಗೆ ಮೊದಲಿಗಳಾಗಿ ಆಯ್ಕೆಯಾಗಿದ್ದ ಪೂಜಾ ಅವರು ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ನಡೆದ ಕನ್ನಡ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈಗ ಫಲಿತಾಂಶ ಪ್ರಕಟವಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದು, ಕಾಲೇಜು ಅಭಿವೃದ್ದಿ ಸಮಿತಿಯು ವಿದ್ಯಾರ್ಥಿನಿಯನ್ನು ಅಭಿನಂದಿಸಿದೆ.

Read More