ಸಿಂದಗಿ: ತಾಲೂಕಿನ ರಾಂಪೂರ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು ೩ ಗಂಟೆ ೩೦ ನಿಮಿಷಕ್ಕೆ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಗೆ ನಾಲ್ಕು ಜನ ದರೋಡೆಕೋರರು ಒಳ ನುಗ್ಗಿ ಹಣ ಹಾಗೂ ಮದ್ಯ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಈ ವೇಳೆ ಮಧ್ಯದ ಅಂಗಡಿ, ಬಂಗಾರದ ಅಂಗಡಿ, ಬುಕ್ ಸ್ಟಾಲ್ ಸೇರಿ ಮೂರು ಅಂಗಡಿಗಳು ಕಳ್ಳತನ ಮಾಡಿರುತ್ತಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ೧೧ಗಂಟೆಗೆ ಮಧ್ಯದ ಅಂಗಡಿಯ ಬಾಗಿಲು ತೆಗೆಯಲು ಹೋದ ಎಂ.ಎಸ್.ಐ.ಎಲ್ ಕೆಲಸಗಾರ ನೋಡಿ ಅನುಮಾನದಿಂದ ಮೇಲಧಿಕಾರಿಗಗಳಿಗೆ ವರದಿ ತಿಳಿಸಿರುತ್ತಾರೆ. ಸಿಂದಗಿ ಅಬಕಾರಿ ಉಪನಿರೀಕ್ಷಕರು ದಿಲೀಪ್ ಸಿಂಗ್ ರಜಪೂತ ಸ್ಥಳಕ್ಕೆ ಭೇಟಿ ನೀಡಿ ಒಳಗೆ ಹೋಗಿ ಸಿ.ಸಿ ಕ್ಯಾಮೆರಾ ಓಪನ್ ಮಾಡಿದಾಗ. ಮುಖಕ್ಕೆ ಬಟ್ಟೆಗಳು ಕಟ್ಟಿಕೊಂಡು ಒಳಗೆ ನುಗ್ಗಿರುವ ದೃಶ್ಯ ಕಂಡು ಬಂದಿದೆ. ೭ಸಾವಿರ ನಗದು ಹಣ ಹಾಗೂ ೮ ಬಿಯರ್ ಬಾಟಲ್ ಮತ್ತು ೫ಐಬೀ ವಿಸ್ಕಿ, ತೆಗೆದುಕೊಂಡು ಪರಾರಿಯಾಗಿದ್ದಾರೆ.
ಸಿ.ಸಿ ಕ್ಯಾಮರಾದಲ್ಲಿ ೪ ಜನ ಕಳ್ಳರು ಕಾಣಿಸಿಕೊಂಡಿದ್ದಾರೆನ್ನಲಾಗಿದೆ.
ಈ ವಿಷಯ ಸಿಂದಗಿ ಪೊಲೀಸ್ ಠಾಣೆಗೆ ತಿಳಿಸಿದಾಗ, ಸ್ಥಳಕ್ಕೆ ಸಿಂದಗಿ ಪಿ.ಎಸ್.ಐ ಭೀಮಪ್ಪ ರಬಕವಿ ತಂಡದ ಸಮೇತ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

