ಚಿಮ್ಮಡ: ನಿತ್ಯ ಸಮಾಜದಲ್ಲಿ ನಾವು ಉತ್ತಮ ಬದುಕು ಕಂಡುಕೊಳ್ಳಬೇಕಾದರೆ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕೆಂದು ಸ್ಥಳಿಯ ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.
ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪ್ರಭುಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಪ್ರಭು ಮಹಾಸ್ವಾಮಿಗಳ ೫೩ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬೆಳಗುತ್ತಿರುವ ದೀಪಗಳನ್ನು ಆರಿಸಿ ಜನ್ಮದಿನ ಆಚರಿಸುವ ಸಂಸ್ಕತಿ ಪಾಶ್ಚಾತರದ್ದು. ಇನ್ನೊಬ್ಬರ ಜೀವನದಲ್ಲಿ ಬೆಳಗುವ ದೀಪವಾಗುವ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿ. ನಮ್ಮ ಪರಂಪರೆಯನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಆ ಕಾರಣಕ್ಕೆ ಶ್ರೀಮಠದ ಭಕ್ತ ಮಂಡಳಿ ಈ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಮಠಗಳಿಂದ ದೊರೆಯುತಿದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದಿಗೂ ಜೀವನದಲ್ಲಿ ತಪ್ಪು ಹೆಜ್ಜೆ ಇಡುವುದಿಲ್ಲ ಎಂದರು,
ಪ್ರಭು ನೇಸೂರ ಮಾತನಾಡಿದರು.
ಗ್ರಾಮದ ಪ್ರಮುಖರಾದ ರಾಮಣ್ಣಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯಾ ಮಠಪತಿ, ನಿಂಗಣ್ಣ ಪೂಜಾರಿ, ಪ್ರಭು ಮುಧೋಳ, ಮನೋಜ ಹಟ್ಟಿ, ಪ್ರಕಾಶ ಪೂಜೆರಿ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದಾರ ಗ್ರಾಮದ ಪ್ರಮುಖರು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಆಗಮಿಸಿದ್ದರು.
ಇದೇ ವೇಳೆ ಅರಣ್ಯ ಅಧಿಕಾರಿ ವಾಸುದೇವ ಇಗವೆ ದಂಪತಿಗಳು ವಿಶೇಷ ತಳಿಯ ಸಸಿ ನೀಡುವ ಮೂಲಕ ಶ್ರೀಗಳನ್ನು ಸತ್ಕರಿಸಿ ಗೌರವಿಸಿದರು.
ಶಿವಪ್ಪಾ ಉರಭಿನವರ ಕುಟುಂಬಸ್ಥರಿಂದ ಹಮ್ಮಿಕೊಳ್ಳಲಾಗಿದ್ದ ದಾಸೋಹ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

