ಸಿಂದಗಿ: ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮನೆಕಳ್ಳತನ ಮಾಡಲು ಅಂತರಾಜ್ಯದಿಂದ ಚೆಡ್ಡಿ ಗ್ಯಾಂಗ ಬಂದಿದ್ದು, ಸದರಿ ಗ್ಯಾಂಗ ಸಕ್ರೀಯವಾಗಿರುತ್ತದೆ. ಸದರಿ ಗ್ಯಾಂಗನಲ್ಲಿ ಸುಮಾರು ನಾಲ್ಕೈದು ಜನರು ಇದ್ದಾರೆ. ಇವರು ರಾತ್ರಿ ವೇಳೆ ತಮ್ಮ ಮೈ ಮೇಲೆ ಕೇವಲ ಚಡ್ಡಿ, ಬನಿಯನ್, ಮಂಕಿಕ್ಯಾಪ ಹಾಕಿಕೊಂಡು ಮನೆ ಕಳ್ಳತನ ಮಾಡಲು ತಿರುಗಾಡುತ್ತಿದ್ದು, ಇಂತಹ ಜನರು ತಮ್ಮ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಕಂಡು ಬಂದಲ್ಲಿ ಸಾರ್ವಜನಿಕರು ಭಯಭೀತರಾಗದೇ ಕೂಡಲೇ ಪೊಲೀಸ ಠಾಣೆ ಮತ್ತು ಪೊಲೀಸ ಕಂಟ್ರೋಲ್ ರೂಮ್ ಅಥವಾ ೧೧೨ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಸಿಪಿಐ ಡಿ. ಹುಲುಗಪ್ಪ ಮತ್ತು ಪಿಎಸ್ಐ ಭೀಮಪ್ಪ ರಬಕವಿ ತಿಳಿಸಿದ್ದಾರೆ.
*ಸಾರ್ವಜನಿಕರಿಗೆ ಸೂಚನೆ*
ಸಾರ್ವಜನಿಕರು ಊರಿಗೆ ಹೋಗಬೇಕಾದ ಸಂದರ್ಭ ಬಂದಲ್ಲಿ ತಮ್ಮ ಮನೆಯಲ್ಲಿ ಬೆಲೆಬಾಳುವ ಆಭರಣಗಳು ಮತ್ತು ಹಣ ಇಟ್ಟು ಹೋಗಬಾರದು. ಮತ್ತು ಹೋಗುವ ಮುಂಚೆ ಸಿಂದಗಿ ಪೊಲೀಸ ಠಾಣೆಗೆ ಮಾಹಿತಿ ನೀಡಲು ಸಿಪಿಐ ಡಿ. ಹುಲುಗಪ್ಪ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
