Author: editor.udayarashmi@gmail.com

ಮುದ್ದೇಬಿಹಾಳ: ಯುವಕರಲ್ಲಿನ ರಾಷ್ಟ್ರಪ್ರೇಮ, ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ ಎಂದು ಯರನಾಳ ಹಿರೇಮಠದ ಪ್ರವಚನ ಭಾಸ್ಕರ, ಶಿವಪ್ರಸಾದ ದೇವರು ನುಡಿದರು.ತಾಲೂಕಿನ ನಾಗರಬೆಟ್ಟ ಗ್ರಾಮದ ಪಾಟೀಲ್ ಆಕ್ಸಫರ್ಡ ಪಿಯು ಕಾಲೇಜಿನ ಆವರಣದಲ್ಲಿ, ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವದ ನಿಮಿತ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ರುದ್ರಾಕ್ಷ ದೀಕ್ಷೆ ನೀಡಿ ಅವರು ಮಾತನಾಡಿದರು.ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷದ ಭಾವ ಮೂಡಿಸಲಾಗುತ್ತಿದೆ. ದೇಶದ ಐಕ್ಯತೆಯನ್ನ ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಧರ್ಮ ಧರ್ಮಗಳಲ್ಲಿ ಸಹಿಷ್ಣುತೆ ಭಾವ, ಸಾಮರಸ್ಯದ ಜೀವನ ರೂಪಿಸಿಕೊಳ್ಳಬೇಕು. ನಮ್ಮ ಧರ್ಮದ ಆಚರಣೆ ಮನೆಯಲ್ಲಿಯೇ ಇರಬೇಕು. ಶಾಲಾ ಕಾಲೇಜುಗಳಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು.ದೋಟಿಹಾಳದ ಪೂಜ್ಯರಾದ ಚಂದ್ರಶೇಖರ ದೇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಧಾನವಾದದ್ದು. ವಿದ್ಯಾರ್ಥಿ ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾದರೆ, ಶಿಕ್ಷಣ ಮಹೋನ್ನತ ಪಾತ್ರ ನಿರ್ವಹಿಸುತ್ತದೆ. ಗುರುವಿನಿಂದ ಸಂಸ್ಕಾರ ಶಿಕ್ಷಣದಿಂದ ಸಂಸ್ಕೃತಿ ಕಲಿತಾಗ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಎಂದರು.ಪಿ.ಬಿ.ಹುಣಷ್ಯಾಳ ಹಿರೇಮಠದ ಆನಂದ ದೇವರು ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಡಾ.ಚನ್ನವೀರದೇವರು…

Read More

ವಿಶೇಷ ಲೇಖನ- ಸಂತೋಷ ಎಸ್ ಬಂಡೆ ಶಿಕ್ಷಕರು, ನಾಗಠಾಣ. ಸಂಕ್ರಾಂತಿ ಹಬ್ಬವು ತುಂಬಾ ಮಹತ್ವವನ್ನು ಹೊಂದಿರುವಂತಹ ಹಬ್ಬವಾಗಿದೆ. ಈ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಜನರೊಂದಿಗೆ ಬೆರೆಯುವ ಮೂಲಕ ಸಂತೋಷವನ್ನು ಹಂಚುವ ಹಬ್ಬವಾಗಿದೆ. ನಮ್ಮ ಜೀವನವನ್ನು ಹಾಗೂ ನಮ್ಮ ಜೊತೆ ಇದ್ದವರನ್ನು ಸಂತೋಷದಿಂದಿಡುವ ಹಬ್ಬವಾಗಿದೆ. ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ಗುರಿಯನ್ನು ಕೂಡ ಹೊಂದಿದ ಹಬ್ಬವಾಗಿದೆ. ಈ ಹಬ್ಬವನ್ನು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ನಮ್ಮ ಆಹಾರ ಬೆಳೆಯುವ ಕೃಷಿ ಭೂಮಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿರಬೇಕು ಎಂಬುದೇ ಈ ಹಬ್ಬದ ಸುಂದರ ಸಂದೇಶವಾಗಿದ್ದು, ಎಲ್ಲರ ನಡುವೆ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಪಸರಿಸುವುದೇ ಹಬ್ಬದ ಸತ್ವವಾಗಿದೆ. ಈ ಹಬ್ಬದ ದಿನದಂದು ನೀವು ಎಲ್ಲೆಡೆ ಆಚರಣೆಗಳು, ಒಳ್ಳೆಯ ಆಹಾರ, ಹೊಸ ಬಟ್ಟೆ, ಸಂತೋಷ, ಸಂಭ್ರಮ, ಜನರನ್ನು ಭೇಟಿ ಮಾಡಿ ಶುಭಾಶಯ ಕೋರುವುದು ಮತ್ತು ಸಿಹಿ ವಿನಿಮಯ ಮಾಡಿಕೊಳ್ಳುವುದನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ನೋಡಲು ಸಾಧ್ಯ. ಈ…

Read More

ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳು ಜಾರಿಗೆ :ಸಿಎಂ ಸಿದ್ದರಾಮಯ್ಯ ಬೆಂಗಳೂರು: ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳ ಪೈಕಿ ಐದನೇ ಗ್ಯಾರಂಟಿ ‘ಯುವನಿಧಿ ಯೋಜನೆ’ಗೆ ಶುಕ್ರವಾರ (ಜ.12) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.ಶಿವಮೊಗ್ಗ ನಗರ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ವಿವಿದಡೆಗಳಿಂದ ಆಗಮಿಸಿದ್ದ 15 ಮಂದಿ ಯುವ ಜನರಿಗೆ ಸಾಂಕೇತಿಕವಾಗಿ ನಿರುದ್ಯೋಗ ಭತ್ಯೆಯ ಚೆಕ್ ನೀಡುವ ಮೂಲಕ ಸಿಎಂ ಯೋಜನೆಯನ್ನು ಉದ್ಘಾಟಿಸಿದರು.ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ಬಿ.ನಾಗೇಂದ್ರ, ಮಂಕಾಳ್ ವೈದ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು.ಕಾರ್ಯಕ್ರಮದ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, “ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಅವರ ಜನ್ಮ ದಿನದಂದೇ ನನ್ನ ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದಿದ್ದಾರೆ.“ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು…

Read More

ಮುದ್ದೇಬಿಹಾಳ: ತಾಲ್ಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.ಇದೇ ವೇಳೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ, ಜೆ ಎಸ್ ಪಾಟೀಲ, ಬಿ ಎಸ್ ಪಾಟೀಲ, ಎಸ್ ಬಿ ಬಿರಾದಾರ, ಎಸ್ ಎಸ್ ಅವಟಿ,ಹರಿನಾಥ ಎನ್ ಹಾಗೂ ಅತಿಥಿ ಶಿಕ್ಷಕರಾದ ಪರಶುರಾಮ ಮೂಲಿಮನಿ, ಹಾಗೂ ಬಿಬಿ ಫಾತಿಮಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.

Read More

ತಿಕೋಟಾ: ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು ಎಂದು ಹಿರಿಯ ಉಪನ್ಯಾಸಕ ಎಸ್ ಜಿ ಲಕ್ಕುಂಡಿಮಠ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಕಾಲೇಜ್ (ಹೈಸ್ಕೂಲ್)ನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ವಿವೇಕಾನಂದರ ಕೊನೆಯ ಮೂರು ಭವಿಷ್ಯವಾಣಿಗಳಲ್ಲಿ ಎರಡು ನಿಜವಾಗಿದ್ದು, ಕೊನೆಯ ಭವಿಷ್ಯವಾಣಿಯಾದ ಭಾರತ ವಿಶ್ವಗುರು ಆಗುವಲ್ಲಿ ದೇಶದ ಪ್ರತಿಯೊಬ್ಬರೂ ಶ್ರಮಿಸುವ ಸಂಕಲ್ಪ ಮಾಡಬೇಕೆಂದು ಆರ್ ಜಿ ಹಾಜೀವಗೋಳ ಹೇಳಿದರು.ಭಾರತದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಯುವ ದಿನವು ದೇಶದ ಯುವ ಜನತೆಯ ಚೈತನ್ಯ, ಸಾಮರ್ಥ್ಯ ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು, ಏಕತೆಯನ್ನು ಬೆಳೆಸಲು ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರತಿ ಯುವ ಮನಸ್ಸಿನಲ್ಲಿರುವ ಸಾಮರ್ಥ್ಯವನ್ನು ಈ…

Read More

ವಿಜಯಪುರ: ತಾಲ್ಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ “ಅಡುಗೆ ಕೋಣೆ”ಯನ್ನು ಶುಕ್ರವಾರ ವಿಜಯಪುರ ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕರಾದ ಕಾಸಿಂಮಸಾಬ ಮಸಳಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರಿಗೆ ೩೧೬ ರೂ ಕೂಲಿ ಜೊತೆಗೆ ೧೦೦ ದಿನಗಳ ಉದ್ಯೋಗ ಖಾತರಿ ನೀಡುವವರ ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ನೆರವು ನೀಡುತ್ತಿದೆ. ಸರಕಾರಿ ಪ್ರಾರ್ಥಮಿಕ & ಪ್ರೌಢಶಾಲೆಗಳಲ್ಲು ಶಾಲಾ ಆಟದ ಮೈದಾನ, ಶೌಚಾಲಯ, ಕಂಪೌಂಡ ಗೋಡೆ, ಅಡುಗೆ ಕೋಣೆಯಂತಹ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರುಗಳು ಮತ್ತು ಶಾಲಾ ಶಿಕ್ಷಕರು ಸಮನ್ವಯತೆಯಿಂದ ಈ ಮೇಲಿನ ಕಾಮಗಾರಿಗಳನ್ನು ಪಡೆದುಕೊಂಡು ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಬಸಪ್ಪ ಹಳ್ಳಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್.ರಾಠೋಡ್, ತಾಲೂಕು ತಾಂತ್ರಿಕ ಸಂಯೋಜಕ…

Read More

ಜ.೧೩ ರಿಂದ ನಡೆಯುವ ಪ್ರದರ್ಶನ | ಉತ್ತಮ ಕೈತೋಟ, ತಾರಸಿತೋಟ ಪ್ರದರ್ಶನಕ್ಕೆ ಬಹುಮಾನ ವಿಜಯಪುರ: ನಗರದ ತೋಟಗಾರಿಕೆ ಇಲಾಖೆಯ ಆವರಣದ ಬಸವವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜನವರಿ ೧೩ರಿಂದ ೧೫ರವರೆಗೆ ಮೂರು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಹುಲ ಬಾಗಲದೊಡ್ಡಿ ತಿಳಿಸಿದ್ದಾರೆ.ವಿವಿಧ ಬಗೆಯ ಸಿರಿಧಾನ್ಯಗಳನ್ನು ಹಾಗೂ ವಿವಿಧ ಬಣ್ಣ-ಬಣ್ಣದ ಹೂಗಳನ್ನು ಬಳಸಿ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ ನಿರ್ಮಿಸಿ, ಶತಮಾನದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಲಾಗುತ್ತಿದೆ.ಅದರಂತೆ ಗಣಪತಿ, ನವಿಲು, ಪ್ರಾಣಿಗಳ ಆಕೃತಿಯ ಕಲಾಕೃತಿಯ ಪ್ರದರ್ಶನವೂ ಸಹ ನಡೆಯಲಿದೆ. ಈ ತೋಟಗಾರಿಕೆ ಅಭಿಯಾನದಲ್ಲಿ ಐತಿಹಾಸಿಕ ಚಂದ್ರಯಾನ-೩ರ ಯಶೋಗಾಥೆಯನ್ನು ಸಾರುವ ನಿಟ್ಟಿನಲ್ಲಿ ಫಲ-ಪುಷ್ಪಗಳಿಂದ ವಿಕ್ರಮ್ ಲ್ಯಾಂಡರ್‌ನ ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ತರಬೇತಿ: ಈ…

Read More

ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ, ತಾಳಿಕೋಟೆ, ಢವಳಗಿ ಮತ್ತು ನಾಲತ್ವಾಡ ಹೋಬಳಿಯ ರೈತರಿಗೆ ಜ.೧೬ ರಿಂದ ೧೯ರವರೆಗೆ ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೂಕ್ಷö್ಮ ನೀರಾವರಿ ಘಟಕಗಳ ಉಪಯೋಗಗಳು ಮತ್ತು ನಿರ್ವಹಣೆ ಕುರಿತು ತರಬೇತಿ ಆಯೋಜಿಸಲಾಗಿದೆ.ಜನವರಿ ೧೬, ೧೭,೧೮ ಹಾಗೂ ೧೯ ರಂದು ಕ್ರಮವಾಗಿ ನಾಲ್ಕು ದಿನಗಳ ಕಾಲ ತರಬೇತಿ ಆಯೋಜಿಸಲಾಗಿದ್ದು, ಆಸಕ್ತ ರೈತರು ಭಾಗವಹಿಸಿ ತರಬೇತಿ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತಿಮಾ ಬಾನು ಸುತಾರ ಮೊ: ೯೮೮೬೧೩೪೩೧೦ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಪಾಲಿಕೆಯ ವ್ಯಾಪ್ತಿಯ ಇಂಡಿ ರಸ್ತೆಯಲ್ಲಿರುವ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿ ಕಸ ಪ್ರತ್ಯೇಕಿಸುವ ಯಂತ್ರದ ಅಳವಡಿಕೆಯ ಕಾಮಗಾರಿ ಆದಷ್ಟು ಬೇಗನೆ ಯಂತ್ರದ ಅಳವಡಿಕೆ ಕೆಲಸ ಪೂರ್ಣಗೊಳಿಸಬೇಕು ಹಾಗೂ ಈ ಸ್ಥಳದಲ್ಲಿರುವ ಘನ ತ್ಯಾಜ್ಯ ಕೂಡಲೇ ವಿಲೇವಾರಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ, ಮತ್ತು ಸುತ್ತಮುತ್ತಲಿನ ಗಿಡ ಮರಗಳಿಗೆ ಬೇಸಿಗೆ ಕಾಲದಲ್ಲಿ ಸರಿಯಾಗಿ ನೀರು ಒದಗಿಸಿ ಪರಿಸರ ಕಾಳಜಿವಹಿಸಬೇಕು ಎಂದು ಪಾಲಿಕೆ ಪರಿಸರ ಅಭಿಯಂತರರಾದ ಅಶೋಕ ಸಜ್ಜನ ಅವರಿಗೆ ಸೂಚಿಸಿದರು.ಹಂಚನಾಳ ತಾಂಡಾ ಹತ್ತಿರ ಇರುವ ಕೆರೆಗೆ ಭೇಟಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದಂತೆ, ಕೆರೆಯ ನೀರಿಗೆ ಕೆಮಿಕಲ್ ಟ್ರೀಟ್‌ಮೆಂಟ್ ಮಾಡಬೇಕು ಹಾಗೂ ಒಳಚರಂಡಿ ನೀರು ವೈಜ್ಞಾನಿಕವಾಗಿ ಸ್ವಚ್ಚಗೊಳಿಸುವ ಬಗ್ಗೆ ಕ್ರಮವಹಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.ಬರಟಗಿ ತಾಂಡಾ ಹತ್ತಿರ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದ ಕಟ್ಟಡ…

Read More