ತಿಕೋಟಾ: ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು ಎಂದು ಹಿರಿಯ ಉಪನ್ಯಾಸಕ ಎಸ್ ಜಿ ಲಕ್ಕುಂಡಿಮಠ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಕಾಲೇಜ್ (ಹೈಸ್ಕೂಲ್)ನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ಕೊನೆಯ ಮೂರು ಭವಿಷ್ಯವಾಣಿಗಳಲ್ಲಿ ಎರಡು ನಿಜವಾಗಿದ್ದು, ಕೊನೆಯ ಭವಿಷ್ಯವಾಣಿಯಾದ ಭಾರತ ವಿಶ್ವಗುರು ಆಗುವಲ್ಲಿ ದೇಶದ ಪ್ರತಿಯೊಬ್ಬರೂ ಶ್ರಮಿಸುವ ಸಂಕಲ್ಪ ಮಾಡಬೇಕೆಂದು ಆರ್ ಜಿ ಹಾಜೀವಗೋಳ ಹೇಳಿದರು.
ಭಾರತದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಯುವ ದಿನವು ದೇಶದ ಯುವ ಜನತೆಯ ಚೈತನ್ಯ, ಸಾಮರ್ಥ್ಯ ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು, ಏಕತೆಯನ್ನು ಬೆಳೆಸಲು ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರತಿ ಯುವ ಮನಸ್ಸಿನಲ್ಲಿರುವ ಸಾಮರ್ಥ್ಯವನ್ನು ಈ ದಿನವು ನೆನಪಿಸುತ್ತದೆ ಎಂದು ಪ್ರಾಚಾರ್ಯ ಎಂ ಎ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಎಂ ಜಿ ಕುಲಕರ್ಣಿ, ಶ್ರೀಮತಿ ಮಮತಾ ಹಿರೇಮಠ್, ಆರ್ ಬಿ ಶೇಡ್ಯಾಳ, ಎಸ್ ಎ ವಾಲಿಕಾರ, ನವೀನ್ ಹಿರೇಮಠ್, ಧರೆಪ್ಪ ಸಿದ್ನಾಥ, ನಿವೇದಿತಾ ಹಿರೇಮಠ ಹಾಗೂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

