ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ, ತಾಳಿಕೋಟೆ, ಢವಳಗಿ ಮತ್ತು ನಾಲತ್ವಾಡ ಹೋಬಳಿಯ ರೈತರಿಗೆ ಜ.೧೬ ರಿಂದ ೧೯ರವರೆಗೆ ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೂಕ್ಷö್ಮ ನೀರಾವರಿ ಘಟಕಗಳ ಉಪಯೋಗಗಳು ಮತ್ತು ನಿರ್ವಹಣೆ ಕುರಿತು ತರಬೇತಿ ಆಯೋಜಿಸಲಾಗಿದೆ.
ಜನವರಿ ೧೬, ೧೭,೧೮ ಹಾಗೂ ೧೯ ರಂದು ಕ್ರಮವಾಗಿ ನಾಲ್ಕು ದಿನಗಳ ಕಾಲ ತರಬೇತಿ ಆಯೋಜಿಸಲಾಗಿದ್ದು, ಆಸಕ್ತ ರೈತರು ಭಾಗವಹಿಸಿ ತರಬೇತಿ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತಿಮಾ ಬಾನು ಸುತಾರ ಮೊ: ೯೮೮೬೧೩೪೩೧೦ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
