Author: editor.udayarashmi@gmail.com

ಇಂಡಿ: ಅಯೋಧ್ಯೆಯಲಿ ಪ್ರಭು ಶ್ರೀರಾಮ ಮಂದಿರ ಉದ್ಘಾಟನೆ ಪೂರ್ವಭಾವಿಯಾಗಿ ನಮೋ ಬ್ರಿಗೇಡ್ ವತಿಯಿಂದ ನೀನೇ ಹನುಮ ರಥಯಾತ್ರೆ ಪ್ರಾರಂಭವಾಗಿದ್ದು ಶುಕ್ರವಾರ ರಥ ಯಾತ್ರೆ ತಾಲೂಕಿನ ತಡವಲಗಾ ಗ್ರಾಮಕ್ಕೆ ಬಂದಿತು.ತಾಲೂಕಿನಲ್ಲಿ ಝಳಕಿಯಿಂದ ರಥಯಾತ್ರೆ ಪ್ರಾರಂಭವಾಗಿದ್ದು ಬಳ್ಳೊಳ್ಳಿ, ತಡವಲಗ ಬೋಳೆಗಾಂವ, ಹಿರೇರೂಗಿ, ಇಂಡಿ, ಅಗರಖೇಡ ಗ್ರಾಮಗಳಿಗೆ ಆಗಮಿಸಿ ಅಲ್ಲಿನ ಸಾವಿರಾರು ಸಂಖ್ಯೆಯಲ್ಲಿನ ಹಿಂದೂ ಭಾಂಧವರು ಭಾಗವಹಿಸಿ ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡರು.ತಡವಲಗಾ ಗ್ರಾಮಕ್ಕೆ ರಥಯಾತ್ರೆ ಆಗಮಿಸುತ್ತಿದ್ದಂತೆ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಬೈಕ್ ಯಾತ್ರೆ ಅಗರಖೇಡ ಗ್ರಾಮದಲ್ಲಿ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಂದು ಶ್ರೀರಾಮಮಂದಿರ ಸಲುವಾಗಿ ನಡೆದ ಹೋರಾಟ ಹಾಗೂ ಕಾರ‍್ಯಕರ್ತರ ಬಲಿದಾನದ ಫಲ ರಾಮ ಮಂದಿರ ನಿರ್ಮಾಣ ಆಗುತ್ತಿದ್ದು ಸಂತಸದ ವಿಷಯ. ಇಂದು ಹನುಮ, ರಾಮ ಯಾತ್ರೆ ನಮ್ಮ ನಿಮ್ಮ ಗ್ರಾಮಗಳಿಗೆ ಆಗಮಿಸಿದ್ದು ರಥಯಾತ್ರೆ ನೋಡುವುದೇ ನಮ್ಮ ನಿಮೆಲ್ಲರ ಸೌಭಾಗ್ಯವಾಗಿದೆ ಎಂದರು.

Read More

ಇಂಡಿ: ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಮಾದರಿ ಅವರ ಆದರ್ಶ ತತ್ವಗಳನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶಶಿಕಾಂತ ಹವಳಗಿ ಹೇಳಿದರು.ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಐ.ಕ್ಯೂ.ಎ.ಸಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳಾದ ಪೂಜಾ ಸಾರವಾಡ, ಬಸವರಾಜ ಪೂಜಾರಿ, ಬೀರಪ್ಪ ನಂದಗೊಂಡ, ಬಸವರಾಜ ಹಿರೇಕುರಬರ, ಜಯಣ್ಣ ಕುಂಬಾರ, ಚಂದನಾ ಕೆಂಗನಾಳ ಮೊದಲಾದವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐ.ಕ್ಯೂ.ಎ.ಸಿ ವಿಭಾಗದ ಸಂಯೋಜಕ ಡಾ. ಶೀರಿನುಸುಲ್ತಾನಾ ಎಸ್, ಇನಾಮದಾರ ವಹಿಸಿಕೊಂಡಿದ್ದರು.ವೇದಿಯಲ್ಲಿ ಪ್ರೊ.ಕಿರಣ ರೇವಣಕರ, ಪ್ರೊ.ಎಸ್.ಜೆ. ಮಾಡ್ಯಾಳ, ಪ್ರೊ. ಪರಸಪ್ಪ ಎಸ್. ದೇವರ, ಡಾ.ವಿಜಯಮಹಾಂತೇಶ ದೇವರ, ಡಾ.ಸುರೇಖಾ ವಾರದ, ಪ್ರೊ.ಭಾರತಿ ಹೊನವಾಡ, ಪ್ರೊ. ಆರ್.ಬಿ.ಮುದ್ದೇಬಿಹಾಳ, ಸೋಮಲಿಂಗ ಎಸ್. ಗಂಜಿ ಇದ್ದರು.

Read More

ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್. ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಂಬಾ ಗ್ರಾಮದ ಎಸ್.ಆರ್. ಮಾಳಗೆ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಶಿವಾನಂದ ವಾಲೀಕಾರ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ. ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. ೧೮೯೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಸ್.ಬಿ. ಜಾಧವ ಮಾತನಾಡಿ, ಸ್ವಾಮಿ ವಿವೇಕಾನಂದ ಭಾರತದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಒಬ್ಬರು ಆಧ್ಯಾತ್ಮದ ಮಾರ್ಗ ಅನುಸರಿಸಿದರು. ಅವರ ಉದ್ದೇಶವು ಭಾರತದ ಏಳಿಗೆ ಆಗಿತ್ತು…

Read More

ಇಂಡಿ: ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತ ಆದರ್ಶ ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕು ಅಂದಾಗ ಮಾತ್ರ ವಿವೇಕಾನಂದರ ಜಯಂತ್ಯುತ್ಸವಕ್ಕೆ ಮೆರಗು ಬರುತ್ತದೆ ಎಂದು ತಹಸೀಲ್ದಾರ ಬಿ.ಎಸ್. ಕಡಕಭಾವಿ ಹೇಳಿದರು.ಶುಕ್ರವಾರ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ೧೬೧ ನೇ ಜಯಂತ್ಯೋತ್ಸವದ ಪ್ರಯುಕ್ತ ಯುವ ಶಕ್ತಿ ಸಂಘ ಹಮ್ಮಿಕೊಂಡಿದ್ದ ಕಾರ‍್ಯಕ್ರಮದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.ಸಂಘದ ಅಧ್ಯಕ್ಷ ರಾಮಸಿಂಗ ಕನ್ನೂಳ್ಳಿ, ಅವಿನಾಶ ಬಗಲಿ ಪ್ರಾಸ್ತಾವಿಕ ಮಾತನಾಡಿದರು.ಮುಖಂಡರಾದ ಜಗದೀಶ ಕ್ಷತ್ರಿ, ಸತೀಶ ಕುಂಬಾರ, ಶ್ರೀಕಾಂತ ಕುಡಿಗನೂರ, ಬಾಳು ಮುಳಜಿ, ಪ್ರಕಾಶ ಬಿರಾದಾರ, ಸಂತೋಷ ಪಾಟೀಲ, ವೆಂಕಟೇಶ ಕುಲಕರ್ಣಿ, ಮಲ್ಲಿಕಾರ್ಜುನ ಹತ್ತಿ, ಅರವಿಂದ ಪಾಟೀಲ, ಚಂದು ದೇವರ, ನಾಗರಾಜ ದಶವಂತ, ಆನಂದ ದೇವರ ಸೇರಿದಂತೆ ಮತ್ತಿತರರು ಇದ್ದರು.

Read More

ಇಂಡಿ: ದೇಶದಲ್ಲಿ ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪ್ರತೀ ವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವಕರೇ ಈ ದೇಶದ ಶಕ್ತಿ ಎಂದು ಯುವ ಜನಸಮೂಹವನ್ನು ಒಂದುಗೂಡಿಸುವ ಕಾರ್ಯ ಮಾಡಿದ್ದು ಸ್ವಾಮಿ ವಿವೇಕಾನಂದರು ಎಂದು ಶಿವಾನಂದ ಕಾಮಗೊಂಡ ಹೇಳಿದರು.ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯ ಸಿ.ವಿ. ವ್ಹಿರಾಮನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು,ಯುವಕರು ದುಶ್ಚಟಗಳಿಂದ ದೂರವಾಗಬೇಕು. ಈ ನೆಲದ ಸಂಸ್ಕೃತಿ, ಸಂಸ್ಕಾರ, ಬೆಳೆಸಿಕೊಳ್ಳಬೇಕು. ಯುವಕರು ಮನಸ್ಸು ಮಾಡಿದ್ದಲ್ಲಿ ಜಗತ್ತಿನ ಅತ್ಯಂತ ಸದೃಢ ದೇಶವನ್ನಾಗಿ ಮಾಡಬಹುದು ಎಂದರು.ನಿರ್ದೇಶಕ ಮಹಾವೀರ್ ವರ್ಧಮಾನ ಮಾತನಾಡಿದರು.ವಿದ್ಯಾರ್ಥಿಗಳಾದ ತೇಜಸ್ವಿನಿ ಗೋಳಗಿ, ಶ್ರೇಯಸ್ ಹಿರೇಮಠ, ದಿನಾಚರಣೆ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಾರಿತೋಷಕ ಪಡೆದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.ಎಬಿವಿಪಿ ಕಾರ‍್ಯಕರ್ತರಾದ ಕುಮಾರ ಸಚಿನ ಧನಗೊಂಡ ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದರು.ಸನ್ಮತಿ ಹಳ್ಳಿ, ಶೈಲೇಶ ಬೀಳಗಿ, ಪ್ರಸನ್ನ ನಾಡಗೌಡ, ಶೋಭಾ…

Read More

ಸಿಂದಗಿ: ಬೆಂಗಳೂರಿನ ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯ ಘಟಕ ಕೊಡಮಾಡುವ ಸ್ನೇಹಜೀವಿ ಆರಕ್ಷಕ ಪ್ರಶಸ್ತಿಗೆ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಆಯ್ಕೆಯಾಗಿದ್ದಾರೆ.ಪೊಲೀಸ್ ಇಲಾಖೆಯಲ್ಲಿನ ಸಾಮಾಜಿಕ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಜ.೨೧ರಂದು ಭಾನುವಾರ ನಡೆಯುವ ಸಂಕ್ರಾಂತಿ ಸಂಭ್ರಮ-೨೦೨೪ರ ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸ್ನೇಹಜೀವಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಶಿಕಾಂತರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ತಾಲೂಕು ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ಒಂದು ವೇಳೆ ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಂದಗಿ ಪಟ್ಟಣ ಅರ್ಬನ್ ಬ್ಯಾಂಕ್‌ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಹಶೀಲ್ದಾರ ಮೂಲಕ ಶನಿವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಶರಣಪ್ಪ ವಾರದ ಮಾತನಾಡಿ, ಸಿಂದಗಿ ತಾಲೂಕು ೩ ತಾಲೂಕುಗಳಾಗಿ ವಿಭಜನೆಯಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಕೇಂದ್ರವಾಗಿದೆ. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಆದಾಯ ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ-೫೦ ಸಿಂದಗಿ ನಗರದಿಂದೊಂದಿಗೆ ಸಂಪರ್ಕ ಬೆಸೆದಿದೆ. ಪೂರ್ವದಲ್ಲಿ ಕಲಬುರಗಿ, ಪಶ್ಚಿಮದಲ್ಲಿ ವಿಜಯಪೂರದಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಅನುಕೂಲವಾಗುತ್ತದೆ. ಈಗಾಗಲೇ ಸಿಂದಗಿಯಲ್ಲಿ ೨ ಕ್ರೀಮಿನಲ್ ಮತ್ತು ೪ ಸಿವಿಲ್ ಕೋರ್ಟಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಮಿನಿ ವಿಧಾನಸೌಧ ನಿರ್ಮಾಣದ ಹಂತದಲ್ಲಿದೆ. ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಭೌಗೋಳಿಕ ವಯಲದಲ್ಲಿ ವ್ಯಾಪಕವಾಗಿದ್ದು ಸಾಂಸ್ಕೃತಿಕ…

Read More

ಸಿಂದಗಿ: ಧರ್ಮವೆಂದರೆ ಅದೊಂದು ಜಾತಿ ಸೂಚಕ ಪದವಲ್ಲ ಅದು ತತ್ವ ಸೂಚಕ ಪದವಾಗಿದೆ. ಆದರೆ ಅದಕ್ಕೊಂದು ಬಣ್ಣದ ಲೇಪನ ಮೆತ್ತಿಕೊಳ್ಳುವ ದುಶ್ಕೃತ್ಯ ನಡೆಯುತ್ತಿದೆ. ಎಲ್ಲ ಧರ್ಮಗಳ ತಿರುಳು ಒಂದೇ ಎಂದು ತಿಳಿದುಕೊಂಡಾಗ ಮಾತ್ರ ಭಾವನಾತ್ಮಕ ಸಂಬಂಧ ಬೆಸೆಯಲು ಸಾದ್ಯವಾಗುತ್ತದೆ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ಅಂಜುಮಾನ್ ಕಾಲೇಜ್ ಕ್ಯಾಂಪಸ್‌ನಲ್ಲಿರುವ ಕರ್ನಾಟಕ ಶಿಕ್ಷಣ ಸೊಸೈಟಿ ಹಾಗೂ ಅಂಜುಮಾನ್-ಇ-ಇಸ್ಲಾಂ ಎಜುಕೇಶನ್ ಸೊಸೈಟಿ ಜಂಟಿಯಾಗಿ ಆಯೋಜಿಸಲಾಗಿದ ಫಾಲ್ಕನ್ ಹೊಸ ಯುಗದ ವಿಜ್ಞಾನ ಮತ್ತು ವಾಣಿಜ್ಯ ಪು ಪೂ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ೧೫ರಿಂದ ೨೦ ವಯಸ್ಸಿನ ವಿದ್ಯಾರ್ಥಿಗಳು ಧರ್ಮವನ್ನು ಪರಿಪಾಲನೆ ಮಾಡದೇ ಹೋದರೆ ಜೀವನ ದುಸ್ತರವಾಗುತ್ತದೆ. ಅದನ್ನು ಸರಿಯಾಗಿ ಪಾಲಿಸಿದ್ದಾದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.ಬೆಂಗಳೂರು ಫಾಲ್ಕನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್ ಮಾತನಾಡಿ, ಡ್ರಗ್ಸಗೆ ಹೊಂದಿಕೊಂಡು ಮಕ್ಕಳ ಜೀವನ ಹಾಳಾಗುತ್ತಿದೆ. ಬರೀ ಗೂಗಲ್ ಪ್ರೀಯರಾಗಿ ಡಿಗ್ರಿ ಸರ್ಟಿಪಿಕೇಟಗೋಸ್ಕರ…

Read More

ಸಿಂದಗಿ: ೧೨ನೇ ಶತಮಾನದಲ್ಲಿ ಮಹಾಶರಣ ಶರಣಿಯರು ಅನೇಕ ಸಂದೇಶಗಳನ್ನು ನೀಡಿ ಅಳಿದು ಹೋಗಿದ್ದಾರೆ. ಆದರೆ ಅವರು ಬಿಟ್ಟು ಹೋದ ವಚನಗಳ ಸಾರವನ್ನು ನಾವೇಲ್ಲರೂ ಮೈಗೂಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಐಕ್ಯ ಮಂಟಪದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬಂತೆ ನಾವೆಲ್ಲರು ಬಸವ ತತ್ವಗಳನ್ನು ಪ್ರತಿ ಮನೆ ಮನೆಗಳಿಗೆ ರವಾನಿಸುವದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಅಂಧಕಾರಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಬಸವದಳದ ಮಾಜಿ ಅಧ್ಯಕ್ಷ ಗುರುಪಾದ ತಾರಾಪುರ ಮಾತನಾಡಿ, ಹಿಂದೂ ಎನ್ನುವುದು ಧರ್ಮವಲ್ಲ. ಲಿಂಗಾಯತ ಎನ್ನುವುದು ಧರ್ಮವಾಗಿದೆ. ಯಾರು ಲೀಂಗವನ್ನು ಧರಿಸುತ್ತಾರೆ ಅವರೇ ಲಿಂಗಾಯತರು ಈ ಪದಕ್ಕೆ ಯಾವುದೇ ಜಾತಿಯ ನಿರ್ಭಂಧವಿಲ್ಲ. ಅಂತೆಯೇ ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರರು ಮಹಾಮಂಟಪವನ್ನು ನಿರ್ಮಾಣ ಮಾಡಿ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ತಡವಲಗಾ ಗ್ರಾಮದ ಪ್ರಥಮ ಧರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿಯವರು ಬಸವಣ್ಣನವರ ಭಾವಚಿತ್ರಕ್ಕೆ…

Read More

ವಿಜಯಪುರದಲ್ಲಿ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ ೨೦೨೩-೨೪ನೇ ಸಾಲಿನ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರದ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಮಹೇಜಬಿನ ಅಬ್ದುಲ್‌ರಜಾಕ ಹೊರ್ತಿ ಅವರು ಚಾಲನೆ ನೀಡಿದರು.ಫಲಪುಷ್ಪ ಪ್ರದರ್ಶನವು ಜನವರಿ ೧೩ ರಿಂದ ೧೫ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ ೧೦ ರಿಂದ ರಾತ್ರಿ ೮ ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.ಗಮನ ಸೆಳೆದ ಸಿರಿಧಾನ್ಯ ಹಾಗೂ ಹೂವಿನ ಮಾದರಿಗಳು:ಸಂಪೂರ್ಣವಾಗಿ ದ್ರಾಕ್ಷಿಯಿಂದ ತಯಾರಿಸಿದ ಮಂಟಪ, ಹಲವು ಬಗೆಯ ಹೂಗಳಿಂದ ರಚಿಸಿದ ಚಂದ್ರಯಾನ-೩ರ ಯಶೋಗಾಥೆ ಸಾರುವ ಇಸ್ರೋ ರಾಕೆಟ್ ಹಾಗೂ ೩೦ ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಂಪೂರ್ಣವಾಗಿ ಸಿರಿ ಧಾನ್ಯಗಳಿಂದ…

Read More