ಇಂಡಿ: ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಮಾದರಿ ಅವರ ಆದರ್ಶ ತತ್ವಗಳನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶಶಿಕಾಂತ ಹವಳಗಿ ಹೇಳಿದರು.
ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಐ.ಕ್ಯೂ.ಎ.ಸಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಾದ ಪೂಜಾ ಸಾರವಾಡ, ಬಸವರಾಜ ಪೂಜಾರಿ, ಬೀರಪ್ಪ ನಂದಗೊಂಡ, ಬಸವರಾಜ ಹಿರೇಕುರಬರ, ಜಯಣ್ಣ ಕುಂಬಾರ, ಚಂದನಾ ಕೆಂಗನಾಳ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐ.ಕ್ಯೂ.ಎ.ಸಿ ವಿಭಾಗದ ಸಂಯೋಜಕ ಡಾ. ಶೀರಿನುಸುಲ್ತಾನಾ ಎಸ್, ಇನಾಮದಾರ ವಹಿಸಿಕೊಂಡಿದ್ದರು.
ವೇದಿಯಲ್ಲಿ ಪ್ರೊ.ಕಿರಣ ರೇವಣಕರ, ಪ್ರೊ.ಎಸ್.ಜೆ. ಮಾಡ್ಯಾಳ, ಪ್ರೊ. ಪರಸಪ್ಪ ಎಸ್. ದೇವರ, ಡಾ.ವಿಜಯಮಹಾಂತೇಶ ದೇವರ, ಡಾ.ಸುರೇಖಾ ವಾರದ, ಪ್ರೊ.ಭಾರತಿ ಹೊನವಾಡ, ಪ್ರೊ. ಆರ್.ಬಿ.ಮುದ್ದೇಬಿಹಾಳ, ಸೋಮಲಿಂಗ ಎಸ್. ಗಂಜಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

