ವಿಜಯಪುರದಲ್ಲಿ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ ೨೦೨೩-೨೪ನೇ ಸಾಲಿನ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರದ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಮಹೇಜಬಿನ ಅಬ್ದುಲ್‌ರಜಾಕ ಹೊರ್ತಿ ಅವರು ಚಾಲನೆ ನೀಡಿದರು.
ಫಲಪುಷ್ಪ ಪ್ರದರ್ಶನವು ಜನವರಿ ೧೩ ರಿಂದ ೧೫ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ ೧೦ ರಿಂದ ರಾತ್ರಿ ೮ ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.
ಗಮನ ಸೆಳೆದ ಸಿರಿಧಾನ್ಯ ಹಾಗೂ ಹೂವಿನ ಮಾದರಿಗಳು:
ಸಂಪೂರ್ಣವಾಗಿ ದ್ರಾಕ್ಷಿಯಿಂದ ತಯಾರಿಸಿದ ಮಂಟಪ, ಹಲವು ಬಗೆಯ ಹೂಗಳಿಂದ ರಚಿಸಿದ ಚಂದ್ರಯಾನ-೩ರ ಯಶೋಗಾಥೆ ಸಾರುವ ಇಸ್ರೋ ರಾಕೆಟ್ ಹಾಗೂ ೩೦ ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಂಪೂರ್ಣವಾಗಿ ಸಿರಿ ಧಾನ್ಯಗಳಿಂದ ತಯಾರಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವೇಶ್ವರ ಮೂರ್ತಿ ಕಲಾಕೃತಿ, ನಿಂಬೆಹಣ್ಣುಗಳಿಂದಲೇ ಬಳಸಿ ರಚಿಸಿರುವ ನಿಂಬೆ ಮನೆ, ವಿವಿಧ ಬಗೆಯ ಹೂಗಳನ್ನು ಉಪಯೋಗಿಸಿಕೊಂಡು ಮಾಡಿರುವ ಹರಿಯುವ ನೀರಿನ ಜಲಧಾರೆ, ಮನೆ, ಮೀನುಗಳು, ಕರ್ನಾಟಕ ನಕಾಶೆ, ನವಿಲು ಹಾಗೂ ತರಕಾರಿಯಿಂದ ರಚಿಸಿರುವ ರಂಗೋಲಿ ಆಕರ್ಷಣೆಯಾಗಿವೆ.
ಹಲವು ಬಗೆಯ ಹಣ್ಣು, ತರಕಾರಿ ಹಾಗೂ ಹೂಗಳ ಪ್ರದರ್ಶನ:
ಮೇಳದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಪೇರು, ಬಾರೇಕಾಯಿ, ನಿಂಬೆ, ಚಿಕ್ಕು, ರೋಸ್ ಆಪಲ್, ನೇರಳೆ, ಅಂಜೂರ, ಪಪಾಯ ಹಾಗೂ ತರಕಾರಿಗಳಾದ ಈರುಳ್ಳಿ, ಬದನೆ, ಟೊಮೋಟೊ, ಕುಂಬಳಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬೀಟ್ರೂಟ್, ಮೂಲಂಗಿ, ಪಾಲಕ್, ಕ್ಯಾಬೇಜ್, ಮೆಕ್ಕೇಕಾಯಿ, ನುಗ್ಗೆಕಾಯಿ ವಿವಿಧ ಬಗೆಯ ಹೂಗಳಾದ ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಗುಲಾಬಿಗಳನ್ನು ಪ್ರದರ್ಶನದಲ್ಲಿವೆ.
ಬೋನ್ಸಾಯ್ ಗಿಡಗಳು ಪ್ರದರ್ಶನ:
ಆಲದಮರ, ಹಲಸಿನ ಮರ, ಅರಳಿಮರ, ನೇರಳೆ, ವಿವಿಧ ಬೋನ್ಸಾಯ್ ಪದ್ಧತಿಯಲ್ಲಿ ಬೆಳೆದ ಗಿಡಗಳ ಪ್ರದರ್ಶನದಲ್ಲಿವೆ.
ಪ್ರದರ್ಶನ ಹಾಗೂ ಮಾರಾಟ ಮಳಿಗೆ:
ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ರೇಷ್ಮೆ ಇಲಾಖೆ, ತಾಳೆ ಬೆಳೆ ಅಭಿವೃದ್ದಿ ಯೋಜನೆ, ಭಾಗ್ಯಜ್ಯೋತಿ ರೈತ ಉತ್ಪನದ ಮಳಿಗೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನ, ಹಾಪ್‌ಕಾಮ್ಸ್, ಸೋಲಾರ್ ವಾಟರ್ ಪಂಪ್‌ಸೆಟ್‌ಗಳ ಪ್ರದರ್ಶನ, ವಿವಿಧ ಕಂಪನಿಗಳ ಟ್ರಾಕ್ಟರ್, ರೋಟಿವೆಟರ್ ಕೃಷಿ ಯಂತೋಪಕರಣಗಳ ಸೆರಿದಂತೆ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ.
ಸಿಎಚ್‌ಡಿ ಯೊಜನೆಯ ವಿದ್ಯಾರ್ಥಿಗಳಿಗಾಗಿ ತೋಟಗಾರಿಕಾ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳಿಗೆ ತೋಟಗಾರಿಕಾ ಪರಿಕರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಬಾವಿದೊಡ್ಡಿ ರಾಹು¯ಕುಮಾರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ದಾನಮ್ಮ ಪಾಟೀಲ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕ ಬಿ.ಎಮ್,ಕೋಕರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

