ಸಿಂದಗಿ: ೧೨ನೇ ಶತಮಾನದಲ್ಲಿ ಮಹಾಶರಣ ಶರಣಿಯರು ಅನೇಕ ಸಂದೇಶಗಳನ್ನು ನೀಡಿ ಅಳಿದು ಹೋಗಿದ್ದಾರೆ. ಆದರೆ ಅವರು ಬಿಟ್ಟು ಹೋದ ವಚನಗಳ ಸಾರವನ್ನು ನಾವೇಲ್ಲರೂ ಮೈಗೂಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.
ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಐಕ್ಯ ಮಂಟಪದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬಂತೆ ನಾವೆಲ್ಲರು ಬಸವ ತತ್ವಗಳನ್ನು ಪ್ರತಿ ಮನೆ ಮನೆಗಳಿಗೆ ರವಾನಿಸುವದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಅಂಧಕಾರಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಸವದಳದ ಮಾಜಿ ಅಧ್ಯಕ್ಷ ಗುರುಪಾದ ತಾರಾಪುರ ಮಾತನಾಡಿ, ಹಿಂದೂ ಎನ್ನುವುದು ಧರ್ಮವಲ್ಲ. ಲಿಂಗಾಯತ ಎನ್ನುವುದು ಧರ್ಮವಾಗಿದೆ. ಯಾರು ಲೀಂಗವನ್ನು ಧರಿಸುತ್ತಾರೆ ಅವರೇ ಲಿಂಗಾಯತರು ಈ ಪದಕ್ಕೆ ಯಾವುದೇ ಜಾತಿಯ ನಿರ್ಭಂಧವಿಲ್ಲ. ಅಂತೆಯೇ ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರರು ಮಹಾಮಂಟಪವನ್ನು ನಿರ್ಮಾಣ ಮಾಡಿ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ತಡವಲಗಾ ಗ್ರಾಮದ ಪ್ರಥಮ ಧರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಡವಲಗಾ ಗ್ರಾಮದ ಮರುಳಸಿದ್ದ ಸಂಸ್ಥಾನದ ಚೇರಮನ್‌ರಾದ ತಮ್ಮಣ್ಣ ಪೂಜಾರಿ ಮಾತನಾಡಿದರು.
ಲಿಂಗಾಯತ ಮಹಾಮಠದ ಪೀಠಾಧಿಪತಿ ಪ್ರಭುದೇವರು ಆಶಿರ್ವಚನ ನೀಡಿ, ದಾನ-ಜ್ಞಾನ ಒಬ್ಬರಲ್ಲಿ ಇರುವುದು ವಿರಳ ಇವೆರಡು ಸಮರ್ಥವಿದ್ದವರು ಮಹಾಶರಣ ತತ್ವ ಪ್ರಚಾರಕರಲ್ಲಿ ಮಾತ್ರ ಇರುತ್ತದೆ ಎಂದು ಆಶಿರ್ವದಿಸಿದರು.
ಐಕ್ಯ ಮಂಟಪದಲ್ಲಿ ಪ್ರತಿಸ್ಥಾಪಿಸಲಾಗುತ್ತಿರುವ ಬಸವಣ್ಣನವರ ಮೂರ್ತಿಯ ವೆಚ್ಚವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿ ಭರಿಸಿದ್ದಾರೆ.
ಈ ಸಂದರ್ಭದಲ್ಲಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಅಶೋಕ ಮಿರ್ಜಿ, ಮಾಜಿ ಸೈನಿಕ ಚಂದ್ರಕಾಂತ ಸಣ್ಣಮನಿ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಕಾನಿಪ ಧವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ನಿವೃತ್ತ ಶಿಕ್ಷಕ ಆರ್.ಕೆ.ಕುಲಕರ್ಣಿ, ಸಂಗಣ್ಣ ಬ್ಯಾಕೋಡ, ಸಿದ್ದು ಸುಂಠಿ ಕೊರಳ್ಳಿ, ನಾಗೂ ಬಿರಾದಾರ, ಶಿವಣ್ಣ ಖಜೂರ್ಗಿ, ಅಣ್ಣು ಮದರಿ, ಎಂ.ಎಸ್.ಬಿರಾದಾರ ನಾಗರಳ್ಳಿ, ಶಾಂತೂ ರಾಣಾಗೋಳ ಸೇರಿದಂತೆ ಅನೇಕರಿದ್ದರು.
ನಿವೃತ್ತ ಶಿಕ್ಷಕ ಎಂ.ಜಿ.ತಳವಾರ, ಶಿವಕುಮಾರ ಶಿವಶಿಂಪಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

