ಸಿಂದಗಿ: ಬೆಂಗಳೂರಿನ ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯ ಘಟಕ ಕೊಡಮಾಡುವ ಸ್ನೇಹಜೀವಿ ಆರಕ್ಷಕ ಪ್ರಶಸ್ತಿಗೆ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿನ ಸಾಮಾಜಿಕ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ.೨೧ರಂದು ಭಾನುವಾರ ನಡೆಯುವ ಸಂಕ್ರಾಂತಿ ಸಂಭ್ರಮ-೨೦೨೪ರ ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸ್ನೇಹಜೀವಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಶಿಕಾಂತರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

