Author: editor.udayarashmi@gmail.com

ಕೊಲ್ಹಾರ: ವಿಜಯಪುರ ಜಿಲ್ಲೆಯ ಕೊಲ್ದಾರ, ಬ. ಬಾಗೇವಾಡಿ, ಬಬಲೇಶ್ವರ, ವಿಜಯಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಿಸುವ ಸಲುವಾಗಿ ಮುಳವಾಡ ಏತ ನೀರಾವರಿ ಬಿ, ಸ್ಕೀಂ ಪ್ರಾರಂಭಿಸಿ ಕೆರೆ ಮತ್ತು ಹಳ್ಳ ತುಂಬಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮೂಲಕ ಮತಕ್ಷೇತ್ರದ ಸಚಿವರಾದ ಶಿವಾನಂದ ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರವರುಗಳಿಗೆ ಹಾಗೂ ಆಲಮಟ್ಟಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಿಗೆ ತಾಲೂಕಿನ ಮಸೂತಿ ಜಾಕ್ವೆಲನಲ್ಲಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳಾದ ಗೋವಿಂದ್ ರಾಥೋಡ, ಎನ್ ಟಿಪಿಸಿ ಪಿಎಸ್ಐ ಯತೀಶ್ ಕೆ ಎನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ಸಂತೋಷ ಚನಗೊಂಡ, ಶಶಿಕಾಂತ ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಎನ್‌ಟಿಪಿಸಿ ಕೂಡಗಿಯಲ್ಲಿ ರವಿವಾರ, ಸೋಮವಾರದಂದು ಮಹಾಶಕ್ತಿನಗರ ಟೌನ್‌ಶಿಪ್‌ನಲ್ಲಿ ಎರಡು ದಿನಗಳ ಆನಂದ ಉತ್ಸವ–2026 ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಮಿತಾಲಿ ಮಹಿಳಾ ಸಮಿತಿ, ಎನ್‌ಟಿಪಿಸಿ ಕೂಡಗಿ ಭವ್ಯವಾಗಿ ಆಯೋಜಿಸಿದ್ದು, ಸಾಂಸ್ಕೃತಿಕ ಪರಂಪರೆ, ಸಮುದಾಯ ಬಾಂಧವ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಆಚರಿಸುತ್ತಿದೆ.ಉತ್ಸವವನ್ನು ಎನ್‌ಟಿಪಿಸಿ ಕೂಡಗಿಯ ಯೋಜನಾ ಮುಖ್ಯಸ್ಥ ಮಧು ಎಸ್. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಮಿತಾಲಿ ಮಹಿಳಾ ಸಮಿತಿಯ ಸದಸ್ಯರು ಇದ್ದರು. ಉದ್ಘಾಟನಾ ಕಾರ್ಯಕ್ರಮವು ಆಕರ್ಷಕ ಸಾಂಪ್ರದಾಯಿಕ ಸ್ಥಳೀಯ ಜಾನಪದ “ಢೋಲು ನೃತ್ಯ” ದಿಂದ ಗುರುತಿಸಲ್ಪಟ್ಟಿತು, ಇದು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿತು ಮತ್ತು ಪ್ರೇಕ್ಷಕರಿಗೆ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು. ಎನ್‌ಟಿಪಿಸಿ ಕೂಡಗಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಕ್ರಮಗಳ ಭಾಗವಾಗಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಹತ್ತಿರದ ಗ್ರಾಮೀಣ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ಕರ್ಷ್ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಮಹಿಳಾ ಸಬಲೀಕರಣದ ಕಡೆಗೆ ತನ್ನ ಬದ್ಧತೆಯನ್ನು…

Read More

ಉದಯರಶ್ಮಿ ದಿನಪತ್ರಿಕೆಕೊಲ್ದಾರ: ಉಡಿತುಂಬಿಸಿಕೊಳ್ಳುವ ಕಾರ್ಯಕ್ರಮವೆಂದರೆ ಹೆಣ್ಣುಮಕ್ಕಳಿಗೆ ಹಬ್ಬವಿದ್ದಂತೆ. ಇಂಥಹ ಕಾರ್ಯಕ್ರಮಗಳು ಜರುಗುತ್ತಿರುವದರಿಂದ ನಮ್ಮ ಭಾರತೀಯ ಪರಂಪರೆ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಮಹಿಳೆಯರು ಸಮಾಜದಲ್ಲಿ ಜಾಗೃತಿಯಿಂದ ನಡೆದುಕೊಂಡು ಕುಟುಂಬ ವ್ಯವಸ್ಥೆಯು ಅಲುಗಾಡದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಪಟ್ಟಣದಲ್ಲಿ ಜರುಗುತ್ತಿರುವ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಧರ್ಮ ಪರಂಪರೆಯನ್ನು ಸಂಸ್ಕೃತಿಯನ್ನು ಸಂಸ್ಕಾರವನ್ನು ನಿತ್ಯ ಪಾಲಿಸುವ ಪರಿಪಾಠವನ್ನು ಮಹಿಳೆಯರು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದು ಮುಂದೆಯೂ ಕೂಡಾ ನಮ್ಮ ಮಕ್ಕಳಿಗೆ ಧರ್ಮ ಭೋಧನೆಯ ತತ್ವವನ್ನು ಉಳಿಸಲು ಸದಾವಕಾಲ ಆಚರಣೆಯಲ್ಲಿ ಉಳಿಯಬೇಕಾದರೆ ಜಾತ್ರೆ ಉತ್ಸವ ಪುರಾಣ ಪ್ರವಚನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಸಾಗಬೇಕು ಎಂದರು. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವಿತಾ ಅವಧಿಯು ಮುತ್ತೈದೆಯಾಗಿರಬೇಕು ಎಂದು ಬಯಸುತ್ತಾಳೆ. ಅದರ ಸಂಕೇತವಾಗಿಯೇ ಮಹಿಳೆಯರು ಕುಂಕುಮ, ಬಳೆ, ಕಾಲುಂಗುರ, ತಾಳಿ,…

Read More

ಸ್ವಸ್ತ ಸ್ವಸ್ತ, ಎಚ್ಚರ ಎಚ್ಚರ, ಸುಖಿ ಸುಖಿ ಮಳೆಗಾಲ ಘೂಳೇಶ್ವರರಿಂದ ಈ ವರ್ಷದ ಹೇಳಿಕೆ ಚಡಚಣ :ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆಯ ನಿಮಿತ್ಯ ರವಿವಾರ ನಸುಕಿನ ಜಾವ 4 ರಿಂದ 5 ಗಂಟೆಯವರೆಗೆ ರುದ್ರಾವತಾರಿ ಶ್ರೀ ಘೂಳೇಶ್ವರ ಮಹಾರಾಜರು ನುಡಿಮುತ್ತುಗಳು ಹೇಳಿದರು, ಅಲ್ಲದೇ ರುದ್ರಕಟ್ಟೆಯ ಮೇಲೆ ದೇವಾಸ್ಥಾನದ ಗರ್ಭ ಗುಡಿಯಲ್ಲಿರುವ ಶ್ರೀ ರೇವಣಸಿದ್ದೇಶ್ವರರ ಬೃಹತ್ ಲಿಂಗದ ಕಡೆ ಕೈಮುಗಿದು ನಿಂತಿರುವುದು ಭಕ್ತರಲ್ಲಿ ಆತಂಕ ಮೂಡಿಸಿರುವುದು ಕಂಡು ಬಂದಿತು.ಇವರ ನುಡಿಮುತ್ತುಗಳನ್ನು ಕೇಳುತ್ತಲೆ ಸೇರಿದ ಸಹಸ್ರಾರು ಭಕ್ತಾಧಿಗಳು ಸಂತಸ ಚಪ್ಪಾಳೆ ಹೊಡೆದು ಆನಂದ ಪಟ್ಟರು.ಶನಿವಾರ ರಾತ್ರಿ 12:30 ಗಂಟೆಗೆ ಗ್ರಾಮದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ, ನಂದಿ ಧ್ವಜ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿತು. ಅಲ್ಲದೆ ಮದ್ದು ಸುಡುವುದರೊಂದಿಗೆ ನಂತರ ನುಡಿಮುತ್ತುಗಳು ಜರುಗಿದವು. ಇದನ್ನು ಆಲಿಸಲು ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟದಿಂದ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಶಾಂತ ರೀತಿಯಿಂದ ನುಡಿಮುತ್ತುಗಳನ್ನು ಆಲಿಸಿದರು.ಸಹಸ್ರಾರು ಭಕ್ತರು ನೆರೆದಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಎಸ್ ಎಮ್ ಇಟ್ಟಿ. ಜಮಖಂಡಿ : ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿದ್ದು, ಈ ಬಾರಿ ಭರ್ಜರಿ ಇಳುವರಿಯ ಭರವಸೆ ಮೂಡಿಸಿದೆ.ಚಳಿಗಾಲದ ಅನುಕೂಲಕರ ವಾತಾವರಣ ಮತ್ತು ಸಕಾಲಕ್ಕೆ ಬಿದ್ದ ಮಳೆಯಿಂದಾಗಿ ಮಾವಿನ ಮರಗಳು ಸಮೃದ್ಧವಾಗಿ ಹೂ ಬಿಟ್ಟಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ತಾಲೂಕಿನ ತೋಟಗಳು, ರಸ್ತೆ ಬದಿಯ ಸಾಲು ಮರಗಳು ಹಸಿರು ಎಲೆಗಳ ನಡುವೆ ಬಂಗಾರದ ಬಣ್ಣದ ಹೂಗಳಿಂದ ಮನಮೋಹಕ ದೃಶ್ಯ ನೀಡುತ್ತಿವೆ.ಬಾದಾಮಿ, ಮಲಗೋವಾ, ರಸಪುರಿ, ಸಕ್ಕರೆಗುತ್ತಿ ಸೇರಿ ಪ್ರಮುಖ ಪ್ರಮುಖ ತಳಿಗಳ ಮಾವಿನ ಮರಗಳು ಹೂವಿನ ಭಾರಕ್ಕೆ ಬಾಗಿ ನಿಂತಿರುವುದು ಕಾಣಿಸುತ್ತಿದೆ. ಡಿಸೆಂಬರ್ ಅಂತ್ಯದಿಂದ ಆರಂಭವಾದ ಹೂ ಬಿಡುವಿಕೆ ಇದೀಗ ಉತ್ತುಂಗ ತಲುಪಿದೆ.ಸದ್ಯ ತೋಟಗಳಲ್ಲಿ ಕಾಣಿಸುತ್ತಿರುವ ಈ ಬಂಗಾರದ ಹೂವುಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಹಣ್ಣುಗಳ ರಾಜ ಸಿಹಿ ಮಾವಿನ ಸಮೃದ್ಧ ಪೂರೈಕೆಯ ಸೂಚನೆ ನೀಡುತ್ತಿದ್ದು, ರೈತರು ಹಾಗೂ ಗ್ರಾಹಕರು ಇಬ್ಬರಿಗೂ ಸಂತಸ ತಂದಿದೆ. ಕಳೆದ ಕೆಲವು ವರ್ಷಗಳಿಂದ ಅಕಾಲಿಕ…

Read More

‘ಉದಯರಶ್ಮಿ ‘ ಸಂದರ್ಶನದಲ್ಲಿ ಚಂದನ್ ಗೌಡ ಮನದಾಳದ ಮಾತು ವಿಶೇಷ ವರದಿ : ಶ್ರೀಕಂಠ ಈಶ್ವರ್ ಹೆಚ್ ಡಿ ಕೋಟೆ : ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸಂಸ್ಥಾಪಕ ಭೂಮಿಪುತ್ರ ಚಂದನ್ ಗೌಡ ಸಿ ಅವರು, ಮಣ್ಣಿನ ಸಂರಕ್ಷಣೆ ಬಗ್ಗೆ ಜಾಗೃತಿ ಹಾಗೂ ರೈತರ ನೋವಿಗೆ ಧ್ವನಿಯಾಗಿ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಬರುತ್ತಿರುವ ಒಬ್ಬ ಸಾಮಾನ್ಯ ರೈತ ಮುಖಂಡ. ಕೊರೋನಾ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕಾಗಿ ಜನ ಪರಾಡುತ್ತಿದ್ದಾಗ, ಅನ್ನದ ಮಹತ್ವ ಅರಿತು ಭೂತಾಯಿಯ ಋಣ ತೀರಿಸಲು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ರಿಯಲ್ ಎಸ್ಟೇಟ್ ಉದ್ಯಮಿ. ಕಳೆದ ನಾಲ್ಕು ವರ್ಷಗಳಿಂದಲೂ ಅನ್ನದಾತರ ಏಳಿಗೆಗಾಗಿ ಶ್ರಮಿಸುತ್ತಾ ಬರುತ್ತಿರುವ ಇವರು ಇವತ್ತು ರೈತರ ಮನೆ ಮಗನಾಗಿದ್ದಾರೆ. ಕಷ್ಟ ಎಂದಾಗ ರೈತರಿಗೆ ಜನಪ್ರತಿನಿಧಿಗಳು ನೆನಪಾಗುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಚಂದನ್ ಗೌಡರ ಹೆಸರು ಕ್ಷಣಾರ್ಧದಲ್ಲೇ ಜ್ಞಾಪಕಕ್ಕೆ ಬರುತ್ತೆ.ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ವರ ಮೇಲೆ ದಾಳಿ ಮಾಡಿ ಮೂವರನ್ನು ಬಲಿ ಪಡೆದಾಗ, ತತ್…

Read More

ಚಡಚಣ: ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಗೆ ಜೀವದಾನ ಮಾಡಿದಷ್ಟು ಶ್ರೇಷ್ಠ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಎರಡು–ಮೂರು ಬಾರಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ ಹೇಳಿದರು. ಚಡಚಣ ತಾಲೂಕಿನ ಧೂಳಖೇಡ ಗ್ರಾಮದಲ್ಲಿ ಯುವ ಉದ್ಯಮಿ ಗಡ್ಡೆಪ್ಪ ನಾಟಿಕಾರ ಅವರ 42ನೇ ಜನ್ಮದಿನದ ಅಂಗವಾಗಿ ಬಾಲಾಜಿ ಕ್ಲಿನಿಕ್‌ನ ಡಾ. ಅನೀಲ ನಾಟಿಕಾರ, ಡಾ. ಜ್ಯೋತಿ ಅನೀಲ ನಾಟಿಕಾರ ಹಾಗೂ ಮಹಾತ್ಮ ಬಸವೇಶ್ವರ ಬ್ಲಡ್ ಸೆಂಟರ್, ಸೋಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನವು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅಪಘಾತದ ಗಾಯಾಳುಗಳು ಪ್ರಾಣ ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಮಹತ್ವದ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಒಂದು ಜೀವ ಉಳಿಸಿದ ಪುಣ್ಯ ದೊರೆಯುತ್ತದೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತಿರುವುದು ಸಂತಸದ ವಿಷಯ ಎಂದು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಹೇಳಿದರು. ತಿಕೋಟಾದಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಎ. ಬಿ. ಜತ್ತಿ ಪಿಯು ಕಾಲೇಜು(ಪ್ರೌಢಶಾಲೆ ವಿಭಾಗ) ನಲ್ಲಿ ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ ಎರಡು ದಿನಗಳ ಕಾಲ ಆಯೋಜಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ಅಥ್ಲೇಟಿಕ್ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಡಾ. ಸಿ. ಆರ್. ಬಿದರಿ ಕುಟುಂಬದವರು ಇಂಥ ಅಥ್ಲೇಟಿಕ್ ಕ್ರೀಡಾಕೂಟ ಆಯೋಜಿಸುತ್ತಿರುವುದು ಗ್ರಾಮೀಣ ಕ್ರೀಡಾಪಟುಗಳ ಪಾಲಿಗೆ ವರದಾನವಾಗಿದೆ. ಯುವತಿಯರು ಕೂಡಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉನ್ನತ ಸಾಧನೆ ಮಾಡಬಹುದು. ಆಶಾ ಎಂ. ಪಾಟೀಲ ಅವರು ತಮ್ಮ ತಂದೆಯ ಸ್ಮರಣಾರ್ಥ ಇಂಥ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಷಯ. ಕ್ರೀಡೆಗಳಲ್ಲಿ ಸೋಲು ಗೆಲವು ಸಾಮಾನ್ಯ. ಶ್ರಮ ವಹಿಸಿ ಏಕಾಗ್ರತೆಯಿಂದ ಸಾಧನೆ ಮಾಡಬಹುದು. ಬಿ.ಎಲ್.ಡಿ.ಇ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಯುರ್ವೇದ ವೈದ್ಯಕೀಯ ಪದವೀಧರರಾಗಿರುವ ಸಂಬಣ್ಣಿ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ಆಂದೋಲನ, ಹೋರಾಟದಲ್ಲಿ 1993-94ರಲ್ಲಿ ತೊಡಗಿಸಿಕೊಂಡಿದ್ದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ಸಹಕಾರ್ಯದರ್ಶಿಯಾಗಿದ್ದ ಇವರು ನಂತರ ಯುವ ಮುಖಂಡರಾಗಿದ್ದ ಸುನೀಲಗೌಡ.ಬಿ.ಪಾಟೀಲರ ಗೆಳೆಯರಾಗಿ 1999ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿ ಸೇವೆ ಸಲ್ಲಿಸಿದ್ದ ಇವರು ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾಂಗ್ರೆಸ್ ಸೇವಾದಳದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿರುವ ಇವರನ್ನು ಪಕ್ಷದ ಸೇವೆಯನ್ನು ಗುರುತಿಸಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸುವಂತೆ ಕಳೆದ ವಾರ ಬೆಂಗಳೂರಿನಲ್ಲಿ ಮುಖಂಡರಾದ ವಿಜಯಪುರ ವಿಧಾನಸಭೆ ಅಭ್ಯರ್ಥಿ ಅಬ್ದುಲಹಮೀದ ಮುಶ್ರಿಫ್, ಲೋಕಸಭಾ ಅಭ್ಯರ್ಥಿ ರಾಜು ಆಲಗೂರ, ಶಾಸಕ ವಿಠ್ಠಲ ಕಟಕದೊಂಡ ಮತ್ತು ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಚಿವ ಎಂ.ಬಿ.ಪಾಟೀಲರವರ ನೇತೃತ್ವತದಲ್ಲಿ ಭೇಟಿ ಮಾಡಿ ವಿನಂತಿಸಿದ್ದರು.ಡಾ.ಗಂಗಾಧರ ಸಂಬಣ್ಣಿ ಅವರ ನೇಮಕಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹರ್ಷವ್ಯಕ್ತಪಡಿಸಿದ್ದಾರೆ.

Read More

ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್‌ ಚೌಧರಿ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರಿಕಾ ವಲಯಕ್ಕೆ ಬರೋಬ್ಬರಿ ₹2,761.80 ಕೋಟಿ ಮೀಸಲಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್‌ ಚೌಧರಿ ಶ್ಲಾಘಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶೇಷವಾಗಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಮೀನುಗಾರಿಕೆಗೆ ತೆರಿಗೆ ವಿನಾಯಿತಿ ನೀಡಿರುವುದು ಮತ್ತು ಅಲ್ಲಿ ಹಿಡಿದ ಮೀನಿಗೆ ರಫ್ತು ಸ್ಥಾನಮಾನ ನೀಡಿರುವುದು ನಮ್ಮ ಮೀನುಗಾರರಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಧೈರ್ಯ ನೀಡಿದೆ. ಸೀಗಡಿ ಕೃಷಿಗೆ ಅಗತ್ಯವಿರುವ ಇನ್‌ಪುಟ್‌ಗಳ ಮೇಲಿನ ಆಮದು ಸುಂಕ ತಗ್ಗಿಸಿರುವುದು ಮತ್ತು 500 ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಒಳನಾಡು ಮೀನುಗಾರರಿಗೂ ನೆರವಾಗಲಿದೆ ಎಂದಿದ್ದಾರೆ.ಆದರೆ, ನಾಣ್ಯಕ್ಕೆ ಇನ್ನೊಂದು ಮುಖವಿದೆ. ದೇಶದ ಸಾಮಾನ್ಯ ಮೀನುಗಾರನ ಅತಿದೊಡ್ಡ ಸಮಸ್ಯೆಯೇ ಡೀಸೆಲ್ ಬೆಲೆ. ನಾವು ನಿರೀಕ್ಷಿಸಿದಂತೆ ಬಜೆಟ್‌ನಲ್ಲಿ ಡೀಸೆಲ್ ಸಬ್ಸಿಡಿ ಬಗ್ಗೆ ಯಾವುದೇ ಘೋಷಣೆ ಇಲ್ಲದಿರುವುದು ತೀವ್ರ ನಿರಾಸೆ ತಂದಿದೆ.…

Read More