Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಳೆ ಸಮೀಕ್ಷೆ ಎಲ್ಲದಕ್ಕೂ ಮೂಲಾಧಾರ: ಡಿಸಿ ಡಾ.ಆನಂದ ಕೆ.

ಜನನ-ಮರಣ ದಾಖಲೆಗಳನ್ನು ನಿಖರವಾಗಿ ನಿರ್ವಹಿಸಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯುವಕರು ಸಂವಿಧಾನದ ಅರಿವು ಹೊಂದಿ ನೀತಿ ನಿರೂಪಕರಾಗಿ ಹೊರಹೊಮ್ಮಲಿ
(ರಾಜ್ಯ ) ಜಿಲ್ಲೆ

ಯುವಕರು ಸಂವಿಧಾನದ ಅರಿವು ಹೊಂದಿ ನೀತಿ ನಿರೂಪಕರಾಗಿ ಹೊರಹೊಮ್ಮಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ.

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಯುವಜನರು ಸಂವಿಧಾನದ ಆಶಯಗಳು, ಸಂಸದೀಯ ಕಾರ್ಯಕಲಾಪಗಳು ಹಾಗೂ ಕಾನೂನು ರಚನೆಯ ಪ್ರಕ್ರಿಯೆಯ ಬಗ್ಗೆ ಅರಿವು ಹೊಂದಿ, ಭವಿಷ್ಯದಲ್ಲಿ ಜವಾಬ್ದಾರಿಯುತ ನೀತಿ ನಿರೂಪಕರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಸಂಸತ ಮೂಲಕ ಯುವಜನರಿಗೆ ಸಂಸತ್ತಿನ ಮತ್ತು ಶಾಸಕಾಂಗದ ಕಾರ್ಯವಿಧಾನ,ಪ್ರಶ್ನೋತ್ತರ ಕಲಾಪ,ಕಾನೂನುಗಳ ಮಂಡನೆ ಹಾಗೂ ಅವುಗಳ ಕುರಿತು ನಡೆಯುವ ಚರ್ಚೆಗಳ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ದೊರೆಯುತ್ತದೆ. ಯಾವುದೇ ವಿಷಯದ ಕುರಿತು ಚರ್ಚೆ ನಡೆಸುವಾಗ ನಿಗದಿತ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪಾಲನೆ ಸಂಸದೀಯ ವ್ಯವಸ್ಥೆಯ ಮಹತ್ವದ ಜವಾಬ್ದಾರಿಗಳ ಕುರಿತು ಅರಿವು ಹೊಂದಬಹುದಾಗಿದೆ ಎಂದರು.
ಜಿಲ್ಲಾ ಮಟ್ಟದ ಯುವ ಸಂಸತ್ತಿನಲ್ಲಿ ಆಯ್ಕೆಯಾದ ಎಂಟು ಯುವ ಪ್ರತಿನಿಧಿಗಳು ರಾಜ್ಯಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಅವರು ಉತ್ತಮವಾಗಿ ಪಾಲ್ಗೊಂಡು ಸಂಸದೀಯ ಕಾರ್ಯಕಲಾಪಗಳು, ಕಾನೂನುಗಳು ಮತ್ತು ಆಡಳಿತ ವ್ಯವಸ್ಥೆಯ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಯುವ ಸಂಸತ್‌ನAತಹ ಕಾರ್ಯಕ್ರಮಗಳು ಯುವಜನರಲ್ಲಿ ನಾಯಕತ್ವದ ಗುಣ, ಸಂವಹನ ಕೌಶಲ, ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಹಾಗೂ ಜವಾಬ್ದಾರಿಯುತ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಯುವ ಪ್ರತಿನಿಧಿಗಳು ಜಿಲ್ಲಾ ಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಪ್ರತಿನಿಧಿಗಳು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಡಿವೈಎಸ್ಪಿ ಉಪಾಸೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎ. ಉಪ್ಪಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜೆ. ಬಿರಾದಾರ, ಡಯಟ್ ಪ್ರಾಂಶುಪಾಲ ಎಸ್.ಎಸ್. ಮುಜಾವರ,ಸತೀಶ ಪಾಟೀಲ, ಡಾ. ವಿರೇಶ ಗಬ್ಬೂರ,ಜ್ಯೋತಿ, ಶಿವಾನಂದ ಜಮಾದಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಜೆ. ಇಂಡಿ, ಚೆನ್ನು ಕಟ್ಟಿಮನಿ, ಅಭಿಷೇಕ ಚಕ್ರವರ್ತಿ, ಮಹಾಂತೇಶ ಸಾಸಭಾಳ ಹಾಗೂ ವಿನಾಯಕ ಗುಣಸಾಗರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸದಾನಂದ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಳೆ ಸಮೀಕ್ಷೆ ಎಲ್ಲದಕ್ಕೂ ಮೂಲಾಧಾರ: ಡಿಸಿ ಡಾ.ಆನಂದ ಕೆ.

ಜನನ-ಮರಣ ದಾಖಲೆಗಳನ್ನು ನಿಖರವಾಗಿ ನಿರ್ವಹಿಸಿ

ತೆರೆದ ಚರಂಡಿಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಕಂಟಕ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಬೆಳೆ ಸಮೀಕ್ಷೆ ಎಲ್ಲದಕ್ಕೂ ಮೂಲಾಧಾರ: ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಜನನ-ಮರಣ ದಾಖಲೆಗಳನ್ನು ನಿಖರವಾಗಿ ನಿರ್ವಹಿಸಿ
    In (ರಾಜ್ಯ ) ಜಿಲ್ಲೆ
  • ತೆರೆದ ಚರಂಡಿಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಕಂಟಕ
    In ವಿಶೇಷ ಲೇಖನ
  • ನ.15ಕ್ಕೆ ಮಹಾರಾಣಾ ಪ್ರತಾಪ್ ಸಿಂಗ್ ಮೂರ್ತಿ ಅನಾವರಣ; ಶಾಸಕ ಯತ್ನಾಳ ಭಾಗಿ
    In (ರಾಜ್ಯ ) ಜಿಲ್ಲೆ
  • ಮಲ್ಲಯ್ಯ ದೇವಸ್ಥಾನ ಸಮಿತಿ ಸದಸ್ಯರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಯುವಕರು ಸಂವಿಧಾನದ ಅರಿವು ಹೊಂದಿ ನೀತಿ ನಿರೂಪಕರಾಗಿ ಹೊರಹೊಮ್ಮಲಿ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬಿಜೆಪಿ ದೇಶಾದ್ಯಂತ ಹೋರಾಟ
    In (ರಾಜ್ಯ ) ಜಿಲ್ಲೆ
  • ನೀರಿಗಾಗಿ ಬೀದಿಗಿಳಿದ ತೆಲಸಂಗ ಜನತೆ :ಪ್ರತಿಭಟನೆ!
    In (ರಾಜ್ಯ ) ಜಿಲ್ಲೆ
  • ಪ್ರಬಂಧ ಸ್ಪರ್ಧೆ: ಸಿದ್ದಾರಾಮ ಪೂಜಾರಿ ಪ್ರಥಮ ಸ್ಥಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.