ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾತ್ರೆಯ ಯಶಸ್ಸಿಗೆ ಪಟ್ಟಣದ ಜನತೆ, ಸಮಿತಿಯ ಎಲ್ಲ ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಜಾತ್ರೆಗೆ ಆಗಮಿಸಿದ ಸದ್ಭಕ್ತರು ಸೇರಿದಂತೆ ಪೊಲೀಸ್, ಹೆಸ್ಕಾಂ ಸಹಿತ ವಿವಿಧ ಇಲಾಖೆಗಳ ಸಹಕಾರವೇ ಕಾರಣ ಎಂದು ಶ್ರೀ ರಾವುತರಾಯ ಮಲ್ಲಯ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ವಿನೋದಗೌಡ ಪಾಟೀಲ ಹೇಳಿದರು.
ಪಟ್ಟಣದ ಶಿವನಕಳ್ಳಿ ದೇವಸ್ಥಾನದ ಆವರಣದಲ್ಲಿ ಗುರುವಾರ ಗಜಾನನ ಮಂಡಳಿಯ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಯಾವುದೇ ಲೋಪ, ತೊಂದರೆಯಾಗದಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಸಂಘಟನೆಗಳ ಮೂಲಕ ಅನ್ನ ಸಂತರ್ಪಣೆ ಕೈಗೊಂಡಿದ್ದು ಪ್ರಶಂಸನೀಯ ಕಾರ್ಯ. ಇನ್ನೂ ದೇವಸ್ಥಾನ ಸಮಿತಿ ಅಚ್ಚಕಟ್ಟಾಗಿ ತನ್ನ ಯೋಜನೆ ರೂಪಿಸಿತು. ಇನ್ನೂ ಪೊಲೀಸ್ ಇಲಾಖೆ ಪಿಎಸ್ಐ ಸಚೀನ ಆಲಮೇಲಕರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕರ್ತವ್ಯ ನಿರ್ವಹಿಸಿತು. ಹೆಸ್ಕಾಂ ಇಲಾಖೆಯು ಸಹ ಸಹಕಾರ ನೀಡಿತು. ಒಟ್ಟಾರೆ ಜಾತ್ರೆಯ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ ಮಾತನಾಡಿ, ಪಂಚಾಯಿತಿ ಸದಸ್ಯರು ಸಹಕಾರ ನೀಡಿದಲ್ಲಿ ಯಾವುದೇ ಕಾರ್ಯ ಅಸಾಧ್ಯವಲ್ಲ. ಅವರ ಮಾರ್ಗದರ್ಶನದಲ್ಲಿ ಅಗತ್ಯ ಕಾರ್ಯ ನೆರವೇರಿಸಲಾಗುತ್ತದೆ ಎಂದರು.
ದೇವಸ್ಥಾನ ಸಮಿತಿ ಉಪಾಧ್ಯಕ್ಷ ಶ್ರೀಧರ ನಾಡಗೌಡ, ಕಾರ್ಯದರ್ಶಿ ಮಲ್ಲು ನಾಟೀಕಾರ ಮಾತನಾಡಿದರು.
ಗಜಾನನ ಮಂಡಳಿಯ ಶರಣಗೌಡ ಅಂಗಡಿ, ಭೀಮರಾಯ ಶಾಬಾದಿ, ಶಾಂತಪ್ಪ ಬಿರಾದಾರ (ಜಲಕತ್ತಿ), ಮಲ್ಲಪ್ಪ ಅಗಸರ, ಶಿವಾನಂದ ಕುಂಬಾರ, ನರೇಂದ್ರ ನಾಡಗೌಡ, ಮಲ್ಲು ಹಳಿಮನಿ, ಮಂಜು ಒಂಟೆತ್ತಿನ, ರಮೇಶ ಮಾಳನೂರ, ಆನಂದ ಚಟ್ಟರಕಿ, ಮಡು ಹಡಪದ, ರವಿ ಮಿಂಚನಾಳ, ಮಾಂತೇಶ ವಂದಾಲ, ಯಮನಪ್ಪ ದಂಡಿನ ನಿಂಗು ಹಡಗಲಿ, ಶಶಿ ಒಂಟೆತ್ತಿನ, ಮಲ್ಲು ಭಂಡಾರಿ, ನಿಂಗು ಜಲಕತ್ತಿ, ಮಹೇಶ ಯಕ್ಕೆಳ್ಳಿ, ಇದ್ದರು.

