ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೋಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೬೫/೯೦೦ ಮಿ.ಮೀ. ವ್ಯಾಸದ ಎಂ.ಎಸ್./ಪಿ.ಎಸ್.ಸಿ. ಮುಖ್ಯ ಏರು ಕೊಳವೆ ಮಾರ್ಗದ ಎಂಟು ಸ್ಥಳಗಳಲ್ಲಿ ಜಲಮಂಡಳಿಯಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.
ರಾಚಣ್ಣ ಗುಡಿ ಸಮೀಪದ ಚೈನೇಜ್ ೨.೪೦೬ ಕಿ.ಮೀ., ಕೋಲ್ದಾರ ಸಮೀಪದ ೩.೨೨೫, ಕೋಲ್ದಾರ ಹತ್ತಿರದ ೪.೩೫೫ ಮತ್ತು ೪.೮೬೦ ಕಿ.ಮೀ., ರೋಣಿಹಾಳ ಕೆನಲ್ ಸಮೀಪದ ೯.೩೩೨ ಮತ್ತು ೯.೯೬೦ ಕಿ.ಮೀ. ಹಾಗೂ ಗರಸಂಗಿ ಹಳ್ಳದ ಸಮೀಪದ ೬.೨೦೦ ಮತ್ತು ೬.೭೦೦ ಕಿ.ಮೀ. ಸ್ಥಳಗಳಲ್ಲಿ ಕಾಮಗಾರಿ ನಡೆಯಲಿದೆ.
ಅ.೩೦ ಹಾಗೂ ೩೧ರಂದು ವಿಜಯಪುರ ನಗರದ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು,ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಮತ್ತು ಒಳ ಚರಂಡಿಯ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಾಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
