Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನ ಆವರಣದಲ್ಲಿ ಜ.೧೭ ರಂದು ಸಂಜೆ ೬ ಗಂಟೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಚನ್ನಬಸವಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ಡಾ.ಸಿದ್ದಲಿಂಗ ಸ್ವಾಮೀಜಿ, ಗುರುಸಂಗನಬಸವ ಸ್ವಾಮೀಜಿ, ವೀರರುದ್ರಮುನಿ ಶಿವಾಚಾರ್ಯರು, ಅಭಿನವ ಸಂಗನಬಸವ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯರು, ಬೃಂಗೀಶ್ವರಲಿಂಗ ಶಿವಾಚಾರ್ಯರು, ಶಿವಕುಮಾರ ಸ್ವಾಮೀಜಿ, ಶಿವಪುತ್ರಯ್ಯ ಸ್ವಾಮೀಜಿ, ದಾಕ್ಷಾಯಣಿ ಅಮ್ಮನವರು ವಹಿಸವರು. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಶಾಸಕ ರಾಜುಗೌಡ ಪಾಟೀಲ ಅವರು ನಾಡದೇವಿ ಭಾವಚಿತ್ರಕ್ಕೆ ಪುಷಾರ್ಚನೆಗೈಯುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ವಹಿಸುವರು. ತಾಲೂಕು ಕಸಾಪ ನೂತನ ಅಧ್ಯಕ್ಷ ಶಿವಾನಂದ ಡೋಣೂರ ಆಶಯ ನುಡಿಗಳನ್ನಾಡುವರು. ಮುಖ್ಯಅತಿಥಿಗಳಾಗಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಸಂಗನಗೌಡ ಚಿಕ್ಕೊಂಡ, ಶಿವನಗೌಡ ಬಿರಾದಾರ, ಭರತ ಅಗರವಾಲ, ಶಿವಾನಂದ ಮಂಗಾನವರ, ಚಂದ್ರೇಶೇಖರ…

Read More

ವಿಜಯಪುರ: ೨೦೨೪ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹವನ್ನು ವಿಜಯಪುರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬರೆಯುವ ಮೂಲಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಚಾಲನೆ ನೀಡಿದರು.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ವಾರ್ಡ್ ಗಳಲ್ಲಿ ಈ ಸಂದೇಶದ ಗೋಡೆಬರಹವನ್ನು ಬರೆಯುವ ಕಾರ್ಯ ರೂಪಿಸಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ‌ ಕಾರಜೋಳ, ದೇಶ ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಯಲು ಮೋದಿಜಿ ಅವರು ಇನ್ನೊಮ್ಮೆ ಪ್ರಧಾನಿಯಾಗಬೇಕಾಗಿರುವುದು ಅಗತ್ಯವಾಗಿದೆ. ಭಾರತವನ್ನು ವಿಶ್ವಗುರುವಾಗಿಸುವ ದಿವ್ಯ ಸಂಕಲ್ಪವನ್ನು ಹೊತ್ತು ಕೆಲಸ ಮಾಡಿ ವಿಶ್ರಾಂತಿ, ರಜೆಯನ್ನು ಪಡೆಯದೇ ಕೆಲಸ ಮಾಡುತ್ತಿರುವ ಮೋದಿಜಿ ಅವರಂತಹ ಪ್ರಧಾನಿಯನ್ನು ಪಡೆದಿದ್ದೆ ಒಂದು ಸುದೈವ ಎಂದರು.ಮೋದಿಜಿ ಅವರ ಕಾಲಘಟ್ಟದಲ್ಲಿ ಪ್ರಾಮಾಣಿಕ, ಜನಪರ ಹಾಗೂ ಪರಿಶುದ್ಧ ಆಡಳಿತ ಪ್ರತಿಯೊಬ್ಬ ಭಾರತೀಯರ ಮನಗೆದ್ದಿದೆ, ವಿದೇಶಿ ‌ರಾಷ್ಟ್ರಗಳು ಸಹ ಮೋದಿಜಿ ನಾಯಕತ್ವಕ್ಕೆ ಮನಸೋತಿವೆ ಎಂದರು.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಭವ್ಯ ‌ರಾಮ‌ಮಂದಿರ‌ ‌ನಿರ್ಮಾಣ, ಕಪ್ಪು ಹಣದ ವಿರುದ್ದ ಸಮರ, ಉಜ್ವಲ ಯೋಜನೆ ಮೂಲಕ ಮನೆ ಮನೆಗೆ ಅಡುಗೆ…

Read More

ವಿಜಯಪುರ: ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿಶ್ರೀ ನರೇಂದ್ರ ಮೋದಿಜೀ ಅವರ ಕರೆ ಮೇರೆಗೆ ವಿಜಯಪುರ ನಗರದ ವಾರ್ಡ್ ನಂಬರ್ 1 ರ ಅದೃಷ್ಟಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ ಮಾತನಾಡಿ, ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಯಾಗುತ್ತಿರುವುದು ಪ್ರತಿ ಭಾರತೀಯನ ಭಕ್ತಿಯ ಪ್ರತೀಕ, ರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ, ಇದು ಪ್ರತಿಯೊಬ್ಬರು ಸಂತಸ ಪಡುವ ಸಂಗತಿ. ಮರ್ಯಾದಾ ಪುರಷೋತ್ತಮ ರಾಮ ಆದರ್ಶ ಆಡಳಿತದ ಪ್ರತಿರೂಪ ಕೂಡ ಹೌದು, ಹೀಗಾಗಿ ರಾಮ ಮಂದಿರ ಲೋಕಾರ್ಪಣೆಯನ್ನು ಜನಸೇವಾ ಕಾರ್ಯ, ಭಕ್ತಿ ಭಾವ ಮೂಡಿಸುವ ಮಂದಿರಗಳ ಸ್ವಚ್ಛ ತೆ ಕಾರ್ಯದ ಮೂಲಕ ಸೇವೆಯ ಮೂಲಕವೇ ಸಂಭ್ರಮಿಸಲಾಗುತ್ತಿದೆ, ಈ ಕಾರಣಕ್ಕೆ ಹೆಮ್ಮೆಯ ಪ್ರಧಾನಿ ಈ ಕರೆ ಕೊಟ್ಟಿದ್ದಾರೆ, ಎಲ್ಲರೂ ಸಹ ನಮ್ಮ ಭಕ್ತಿ ಕೇಂದ್ರಗಳ…

Read More

– ಪ್ರೊ. ರಹಮತ್ ತರೀಕೆರೆ 2023ನೇ ಇಸವಿಯ ಮುಖ್ಯ ಘಟನೆಯೆಂದರೆ, ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು ಮತ್ತು ರಾಜಕೀಯವಾಗಿ ದಕ್ಷಿಣ ಭಾರತವು ಅಡಳಿತದಲ್ಲಿ ಬಿಜೆಪಿ ಮುಕ್ತವಾಗಿದ್ದು. ಈ ಫಲಿತಾಂಶವು ಇಡೀ ಭಾರತದ ರಾಜಕಾರಣದ ದಿಕ್ಕನ್ನು ನಿರೂಪಿಸಬಹುದು ಎಂದು ಆಶಿಸಲಾಗಿತ್ತು. ಆದರೆ ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿಯ ಗೆಲುವು, ಕೌಬೆಲ್ಟ್ ಎನ್ನಲಾಗುವ ಉತ್ತರ ಭಾರತದ ಆಲೋಚನಾ ಕ್ರಮವು ಬೇರೆಯೇ ಇದೆ ಎಂಬುದನ್ನು ಸೂಚಿಸಿತು. ದಕ್ಷಿಣ ಭಾರತದಲ್ಲಿ ರಾಜಕೀಯವಾಗಿ ಬಿಜೆಪಿ ಸೋತರೂ, ಅದರ ಮತಗಳಿಕೆ ಕಡಿಮೆಯಾಗಿಲ್ಲ; ಸಮಾಜದಲ್ಲಿ ಸಂಘಪರಿವಾರವು ಬಿತ್ತಿದ ಆಲೋಚನೆಗಳು ಪ್ರಭಾವಶಾಲಿಯಾಗಿವೆ.ಈ ಮಿತಿಗಳಲ್ಲೂ 2023ನೇ ವರ್ಷದಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಗಳು, ಉತ್ತರ-ದಕ್ಷಿಣಗಳಲ್ಲಿರುವ ಒಂದು ವ್ಯತ್ಯಾಸವನ್ನು ಸೂಚಿಸಿವೆ. ಅದೆಂದರೆ ಹಾರ್ದಿಕವಾದ ಸಾಮಾಜಿಕ ಸಂಬಂಧ ಮತ್ತು ಆರ್ಥಿಕ ಏಳಿಗೆಯ ಪ್ರಶ್ನೆಗಳಿಗಿಂತ ‘ಧಾರ್ಮಿಕ’ ಎನ್ನಲಾಗುವ ವಿಷಯಗಳಿಗೆ ಉತ್ತರದ ನೆಲದಲ್ಲಿ ಹೆಚ್ಚು ನೀರುಗೊಬ್ಬರಗಳಿವೆ ಎನ್ನುವುದು. ಈ ತರ್ಕದ ಮುಂದುವರಿಕೆ ಎಂಬಂತೆ, ಈಗ ಅಯೋಧ್ಯೆಯಲ್ಲಿ ರಾಮಮಂದಿರವು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಯಾಗುತ್ತಿದೆ. ಇದರ ಬೆನ್ನಲ್ಲೇ 2024ನೇ ಇಸವಿಯ…

Read More

ಅಯೋಧ್ಯೆ ರಾಮ ಮಂದಿರದಲ್ಲಿ ಜ.22ರಂದು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಪ್ರತಿಷ್ಠಾಪನೆ ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜ.22ರಂದು ನಡೆಯಲಿದೆ. ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀ ರಾಮನ ಪ್ರತಿಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಸಂಕ್ರಾಂತಿ ದಿನವಾದ ಸೋಮವಾರ ಈ ಕುರಿತು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿದೆ. ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.ಅಯೋಧ್ಯೆಯ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.…

Read More

ತಿಕೋಟಾ: ಭಾರತವು ಉನ್ನತ ಆದರ್ಶವಾದವನ್ನು ಹೊಂದಿತ್ತು, ಅದನ್ನು ಸ್ವಾಮೀಜಿ ಪಾಲಿಸಬೇಕೆಂದು ಬಯಸಿದ್ದರು, ಆದರೆ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿರುವ ಆದರ್ಶವಾದವು ಅರ್ಥಹೀನವಾಗಿತ್ತು. ಹೀಗಾಗಿ, ಮನೆಗೆ ಹಿಂತಿರುಗಿ, ಅವರು ಉನ್ನತ ತತ್ವಶಾಸ್ತ್ರಕ್ಕಿಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದರು ಎಂದು ತೆಲಸಂಗದ ವಿರೇಶ್ವರ ದೇವರು ಮಾತನಾಡಿದರು.ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಹೋರಾಟ ದೊಡ್ಡದಾದಷ್ಟೂ ಗೆಲುವು ಅಮೋಘ. ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ, ಮತ್ತು ಹಾಗೆ ಮಾಡುವಾಗ ನಿಮ್ಮ ಸಂಪೂರ್ಣ ಆತ್ಮವನ್ನು ಅದರಲ್ಲಿ ಇರಿಸಿ ಎಂದು ಅಧ್ಯಕ್ಷತೆ ವಹಿಸಿದ ಎಸ್ ಜಿ ಲಕ್ಕುಂಡಿಮಠ ಹೇಳಿದರು.ಅಧ್ಯಯನಕ್ಕೆ ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ ಎಂದ ಸ್ವಾಮಿಯವರು ಧಾರ್ಮಿಕ ಬೆಳವಣಿಗೆಯನ್ನು ಶಿಕ್ಷಣದ ಮುಖ್ಯ ಗುರಿಯಾಗಿ ಪರಿಗಣಿಸಿದ್ದರು ಎಂದು ರೇ ಸಿ ಪಾಟೀಲ ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆಯಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಾಲ ಪ್ರತಿಭಾ ಪುರಸ್ಕೃತರಾದ ಕು.ಅದ್ವಿತಾ ಬಡಿಗೇರ,…

Read More

ಕೊಲ್ಹಾರ: ಭಾರತ ದೇಶದ ವಿಶ್ವದ ಎಲ್ಲ ದೇಶಗಳಲ್ಲಿ ವಾಸಿಸುವ ಹಿಂದೂಗಳ ಬಹುದಿನದ ಕನಸು ಇಂದು ನನಸಾಗುತ್ತಿರುವದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು ಅಂದಿನ ದಿವಸ ಪ್ರತಿಯೊಂದು ಊರಿನ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಣೆ ಮಾಡುವದರ ಮೂಲಕ ರಾಮಲಲ್ಲಾ ದೇವರ ಪ್ರಾರ್ಥನೆ ಮಾಡೋಣ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ದೇವಸ್ಥಾನಗಳ ಸ್ವಚ್ಚತಾ ಕಾರ್ಯಕ್ರಮದ ಭಾಗವಾಗಿ ರವಿವಾರ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಹಾಗೂ ಆವರಣದ ಸ್ವಚ್ಚತೆಯನ್ನು ಮಾಡುವುದರ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂಗಳ ಭಾವನೆಯ ಆರಾಧ್ಯದೈವ ರಾಮದೇವನು ಜನ್ಮತಾಳಿದ ಪುಣ್ಯಭೂಮಿಯಲ್ಲಿಯೇ ಐದುನೂರು ವರ್ಷಗಳ ನಂತರ ಭವ್ಯವಾದ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಹಲವಾರು ಮಹನೀಯರ ಸತತ ಪರಿಶ್ರಮದ ತ್ಯಾಗ, ನಿಸ್ವಾರ್ಥ ಮನೋಭಾವನೆಯಿಂದ ಸಾಧ್ಯವಾಗುತ್ತಿರುವುದು ಸಂತಸದಾಯಕ ವಿಷಯವಾಗಿದೆ ಎಂದರು.ವಿಶಾಲವಾದ ದ್ಯಾಮವ್ವದೇವಿ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ, ಅಂಗಳವನ್ನು ಕಾರ್ಯಕರ್ತರೊಂದಿಗೆ ಸೇರಿ ಬೆಳ್ಳುಬ್ಬಿಯವರು ಕಸ ಕಡ್ಡಿ ಸ್ವಚ್ಚ ಮಾಡಿ ಜಲಾಭಿಷೇಕದಿಂದ ದೇವರ ಗುಡಿಯನ್ನು ಸ್ವಚ್ಚಂದಗೊಳಿಸಿ, ಇಂತಹ ಮಹತ್ಕಾರ್ಯದ ನೆನಪಿಗಾಗಿ ಪಟ್ಟಣದಲ್ಲಿರುವ ಮತ್ತು ಬಸವನ ಬಾಗೇವಾಡಿ…

Read More

ವಿಜಯಪುರ: ಜಿಲ್ಲಾ ಪಂಚಾಯತಿಯ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಋಷಿ ಆನಂದ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ಶಿಂಧೆ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿರುವುದರಿಂದ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಗೆ ಋಷಿ ಆನಂದ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಗೆ ವರ್ಗಾವಣೆಗೊಂಡು ಆಗಮಿಸಿದ ಋಷಿ ಆನಂದ ಅವರನ್ನು ನಿರ್ಗಮಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಅಧಿಕಾರಿಗಳು, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.ಪ

Read More

ಚಿಮ್ಮಡ: ವಿದ್ಯುತ್ ಉಪಯೋಗದ ಹಾಗೂ ಅದರಿಂದಾಗುವ ಅನಾಹುತಗಳ ಕುರಿತ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಅವಶ್ಯಕತೆ ಇದೆ ಎಂದು ಹೆಸ್ಕಾಂ ರಬಕವಿ ವಿಭಾಗೀಯ ಅಧಿಕಾರಿ ಸುನೀಲ ಮುಧೋಳ ಹೇಳಿದರು.ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೋಳ್ಳಲಾಗಿದ್ದ ವಿದ್ಯುತ್ ಸುರಕ್ಷತಾ ಮಾಶಾಚರಣೆ ಹಾಗೂ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಪ್ರಸರಣದಿಂದ ಪ್ರತಿಯೊಬ್ಬರು ಸುರಕ್ಷತೆಯ ಅಂತರ ಕಾಯ್ದುಕೊಳ್ಳಬೇಕು, ವಿದ್ಯುತ್ ಉಳಿತಾಯಕ್ಕಾಗಿ ಐಎಸ್‌ಐ ಮಾರ್ಕ ಹೊಂದಿರುವ ಗುಣಮಟ್ಟದ ಸುರಕ್ಷತೆ ಹೊಂದಿರುವ ವಿದ್ಯುತ್ ಸಲಕರಣೆಗಳನ್ನು ಮಾತ್ರ ಖರೀದಿಸಬೇಕು. ಅನವಶ್ಯಕ ವಿದ್ಯುತ್ ಬಳಕೆ ನಿಲ್ಲಿಸಬೇಕು, ವಿದ್ಯುತ್ ಕಂಬ, ತಂತಿಗಳ ಮೇಲೆ ಬಟ್ಟೆ ಒನಹಾಕುವುದು, ಅದಕ್ಕೆ ದನ ಕರುಗಳನ್ನು ಕಟ್ಟುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು, ಮಕ್ಕಳು ವಿದ್ಯುತ್ ಪ್ರಸರಣವಿರುವ ಸ್ಥಳಗಳಲ್ಲಿ ಗಾಳಿಪಟ ಹಾರಿಸುವುದು ಅದರ ಹತ್ತಿರ ಆಟ ಆಡಬಾರದು ಎಂದರು.ಶಾಲೆಯ ಮುಖ್ಯ ಗುರು ಬಿ.ಎಸ್.ಹಲಗಿ ಮಾತನಾಡಿ, ವಿದ್ಯುತ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿ ಬೆಳಕು ಕೊಡುವ ದೇವರಿದ್ದಂತೆ…

Read More