ಕೊಲ್ಹಾರ: ಭಾರತ ದೇಶದ ವಿಶ್ವದ ಎಲ್ಲ ದೇಶಗಳಲ್ಲಿ ವಾಸಿಸುವ ಹಿಂದೂಗಳ ಬಹುದಿನದ ಕನಸು ಇಂದು ನನಸಾಗುತ್ತಿರುವದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು ಅಂದಿನ ದಿವಸ ಪ್ರತಿಯೊಂದು ಊರಿನ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಣೆ ಮಾಡುವದರ ಮೂಲಕ ರಾಮಲಲ್ಲಾ ದೇವರ ಪ್ರಾರ್ಥನೆ ಮಾಡೋಣ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ದೇವಸ್ಥಾನಗಳ ಸ್ವಚ್ಚತಾ ಕಾರ್ಯಕ್ರಮದ ಭಾಗವಾಗಿ ರವಿವಾರ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಹಾಗೂ ಆವರಣದ ಸ್ವಚ್ಚತೆಯನ್ನು ಮಾಡುವುದರ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂಗಳ ಭಾವನೆಯ ಆರಾಧ್ಯದೈವ ರಾಮದೇವನು ಜನ್ಮತಾಳಿದ ಪುಣ್ಯಭೂಮಿಯಲ್ಲಿಯೇ ಐದುನೂರು ವರ್ಷಗಳ ನಂತರ ಭವ್ಯವಾದ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಹಲವಾರು ಮಹನೀಯರ ಸತತ ಪರಿಶ್ರಮದ ತ್ಯಾಗ, ನಿಸ್ವಾರ್ಥ ಮನೋಭಾವನೆಯಿಂದ ಸಾಧ್ಯವಾಗುತ್ತಿರುವುದು ಸಂತಸದಾಯಕ ವಿಷಯವಾಗಿದೆ ಎಂದರು.
ವಿಶಾಲವಾದ ದ್ಯಾಮವ್ವದೇವಿ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ, ಅಂಗಳವನ್ನು ಕಾರ್ಯಕರ್ತರೊಂದಿಗೆ ಸೇರಿ ಬೆಳ್ಳುಬ್ಬಿಯವರು ಕಸ ಕಡ್ಡಿ ಸ್ವಚ್ಚ ಮಾಡಿ ಜಲಾಭಿಷೇಕದಿಂದ ದೇವರ ಗುಡಿಯನ್ನು ಸ್ವಚ್ಚಂದಗೊಳಿಸಿ, ಇಂತಹ ಮಹತ್ಕಾರ್ಯದ ನೆನಪಿಗಾಗಿ ಪಟ್ಟಣದಲ್ಲಿರುವ ಮತ್ತು ಬಸವನ ಬಾಗೇವಾಡಿ ಮತಕ್ಷೇತ್ರದ ಪ್ರತಿಯೊಂದು ಊರಿನ ಸರ್ವ ಧರ್ಮದ ದೇವಸ್ಥಾನಗಳ ಸ್ವಚ್ಚತಾ ಕಾರ್ಯವನ್ನು ನಾವು-ನೀವು ಸೇರಿ ಮಾಡಿ ನರೇಂದ್ರ ಮೋದಿಯವರ ಆದರ್ಶವನ್ನು ಪಾಲಿಸೋಣ ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಗಣಕುಮಾರ, ಈರಯ್ಯ ಮಠಪತಿ, ಪಟ್ಟಣ ಪಂಚಾಯತಿ ಸದಸ್ಯರಾದ ಅಪ್ಪಸಿ ಮಟ್ಯಾಳ, ಬಾಬು ಭಜಂತ್ರಿ, ಪುಂಡಲೀಕ ಕಂಬಾರ, ವೀರಭದ್ರಪ್ಪ ಬಾಗಿ, ರಮೇಶ ಗಣಿ, ಡೋಂಗ್ರಿ ಕಟಬರ, ಪರಮಾನಂದ ಬರಗಿ, ರಾಚು ಬಗಲಿ, ಕಲ್ಲಪ್ಪ ಗೊಳಸಂಗಿ, ದ್ಯಾವಪ್ಪ ತುಂಬರಮಟ್ಟಿ, ನಾಮದೇವ ಪವಾರ ಅನೇಕ ಪ್ರಮುಖರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

